ಉಡುಪಿ, ನ.26: ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರಕಾರದ SAPSrC ಯೋಜನೆಯಡಿ ಶತಶೃಂಗ ವಿದ್ಯಾಸಂಸ್ಥೆ(ರಿ) ಬೆಂಗಳೂರು ವತಿಯಿಂದ NSID ಅನುಮೋದಿತ ಜೀರಿಯಾಟ್ರಿಕ್ ಕೇರ್ ತರಬೇತಿ ಸರ್ಟಿಫಿಕೇಟ್ ಕೋರ್ಸ್ ಅನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತರಬೇತಿಯು ಡಿಸೆಂಬರ್ 1 ರಂದು ಪ್ರಾರಂಭವಾಗಲಿದ್ದು, 18 ವರ್ಷ ಪೂರ್ಣಗೊಳಿಸಿದ ಕನಿಷ್ಠ ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಲಿಂಕ್: https://kar.cgcp.saissvs.org/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೋಂದಣಿಯಾದ ಅಭ್ಯರ್ಥಿಗಳಲ್ಲಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ ನಾಗರಾಜ್, ದೂ.ಸಂ:8197648899 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಜೀರಿಯಾಟ್ರಿಕ್ ಕೇರ್ ಗಿವರ್ ತರಬೇತಿ: ಅರ್ಜಿ ಆಹ್ವಾನ
ಜೀರಿಯಾಟ್ರಿಕ್ ಕೇರ್ ಗಿವರ್ ತರಬೇತಿ: ಅರ್ಜಿ ಆಹ್ವಾನ
Date:




By
ForthFocus™