ಮಂಗಳೂರು, ನ.12: ಸಿ.ಎ ಸಿ.ಎಸ್ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗಾಗಿ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎ. ಫೌಂಡೇಷನ್ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಿಎ ಇಂಟರ್ ಮಾಹಿತಿ ಕಾರ್ಯಗಾರ ಮಂಗಳೂರಿನ ತ್ರಿಶಾ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ . ಸುಪ್ರಭಾ ಇವರು ವಿದ್ಯಾರ್ಥಿಗಳು ಮುಂದಿನ ಹಂತಗಳನ್ನು ಪ್ರಯತ್ನ ಹಾಗೂ ಉತ್ತಮ ತಯಾರಿಯೊಂದಿಗೆ ಪೂರ್ಣಗೊಳಿಸಬೇಕು. ಕಲಿಕೆಯೊಂದಿಗೆ ವಿನಯತೆ ಮತ್ತು ವೃತ್ತಿಪರತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಾಧಕರಿಗೆ ಶುಭ ಕೋರಿದರು. ಸಾಧಕ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತ್ರಿಶಾ ಕ್ಲಾಸಸ್ ನಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಂತರ ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ನೂತನ ಇಂಟರ್ ವಿದ್ಯಾರ್ಥಿಗಳಿಗೆ ಸಿಎ ಇಂಟರ್ ಕೋರ್ಸಿನ ಬಗ್ಗೆ ಸಂಪೂರ್ಣ ಮಾಹಿತಿ, ಪರೀಕ್ಷಾ ತಯಾರಿಯ ಬಗ್ಗೆ ಸಲಹೆ ನೀಡಿದರು.
ತ್ರಿಶಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಯಶಸ್ವಿನಿ ಯಶ್‌ಪಾಲ್ ತರಗತಿ ನಿಯಮಗಳನ್ನು ವಿವರಿಸಿದರು. ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ಪ್ರಾಂಶುಪಾಲರಾದ ಪ್ರೊ. ಮಂಜುನಾಥ್ ಕಾಮತ್, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಧೃತಿ ಪಿ ಶೆಟ್ಟಿ ಹಾಗೂ ಧೃತಿ ಬಿ ಸುವರ್ಣ ಪ್ರಾರ್ಥಿಸಿದರು. ಆದಿತ್ಯಾ ಜೆ. ಶೆಟ್ಟಿ ಸನ್ಮಾನಿತರ ವಿವರ ವಾಚಿಸಿ, ನಿರೂಪಿಸಿದರು. ಶರಣ್ಯ ವಂದಿಸಿದರು.




By
ForthFocus™