Thursday, November 12, 2026
Thursday, November 12, 2026

ಡಾ. ಬಿ. ಬಿ ಹೆಗ್ಡೆ ಕಾಲೇಜು: ದೀಪಾವಳಿ ಸಂಭ್ರಮ

ಡಾ. ಬಿ. ಬಿ ಹೆಗ್ಡೆ ಕಾಲೇಜು: ದೀಪಾವಳಿ ಸಂಭ್ರಮ

Date:

ಕುಂದಾಪುರ, ನ.11: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಂದಗನ್ನಡ ಸಂಘದ ಜಂಟಿ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆ ಕಾಲೇಜಿನ ಆವರಣದಲ್ಲಿ ನಡೆಯಿತು. ಎಂ. ಎಸ್. ಆರ್. ಎಸ್ ಕಾಲೇಜು ಶಿರ್ವ ಇಲ್ಲಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ರಘುರಾಮ್ ಶೆಟ್ಟಿ ಊರ್ ಬೈಲು ಮಾತನಾಡಿ, ದೀಪಾವಳಿ ಭಾರತೀಯ ಕೃಷಿ ಪದ್ಧತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಹಬ್ಬ. ಈ ಹಬ್ಬ ಕೇವಲ ಬೆಳಕಿನ ಉತ್ಸವ ಮಾತ್ರವಲ್ಲದೆ, ರೈತರ ಪರಿಶ್ರಮ ಮತ್ತು ಭೂಮಿ ತಾಯಿಯ ಸಮೃದ್ಧಿಯ ಸಂಕೇತವಾಗಿದೆ. ನೆಲಪರವಾದ ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಪಟಾಕಿಯನ್ನು ಸಿಡಿಸದೆ ಆಚರಿಸಬೇಕು ಎಂದರು. ನಾಥ ಪಂಥದ ಮಹತ್ವ ಹಾಗೂ ಭಸ್ಮಧಾರಣೆಯ ಆಧ್ಯಾತ್ಮಿಕ ವೈಶಿಷ್ಟವನ್ನು ವಿಶ್ಲೇಷಿಸಿದರು. ಐತಿಹಾಸಿಕವಾಗಿ ಸಾಮ್ರಾಟ್ ಅಶೋಕನ ಶಾಸನಗಳಲ್ಲಿಯೂ ದೀಪಾವಳಿಯ ಉಲ್ಲೇಖ ಇರುವುದನ್ನು ವಿವರಿಸಿದರು. ಕರಾವಳಿ ಭಾಗದ ಜಾನಪದ ಸೊಗಡಿನ ಬಲಿಂದ್ರನ ಆಗಮನದ ಸೊಲ್ಲನ್ನು ಪ್ರಸ್ತುತಪಡಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಜೊತೆಗೆ ಸರಸ್ವತಿ ಪೂಜೆ, ವಾಹನ ಪೂಜೆ, ಗೋಪೂಜೆ ಮತ್ತು ಗದ್ದೆಗೆ ದೀಪ ಹಚ್ಚಿ ಬಲಿಂದ್ರನನ್ನು ಕರೆಯುವ ಕೃಷಿ ಕೇಂದ್ರಿತ ಸಾಂಪ್ರದಾಯಿಕ ಆಚರಣೆಯನ್ನು ಕಾಲೇಜಿನ ಆವರಣದಲ್ಲಿ ನಡೆಸಲಾಯಿತು. ದೀಪಾವಳಿಯ ಸಂಭ್ರಮದ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಾಕ್ತನ ವಿದ್ಯಾರ್ಥಿ ಗುರುರಾಜ್ ಪ್ರಾರ್ಥಿಸಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರವೀಣಾ ಎಂ ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಶರಣ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕಾರ್ಯಕ್ರಮ ಸಂಯೋಜಕಿ ರಶ್ಮಿತಾ ಶೆಟ್ಟಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡ ಹರಾಜು

ಉಡುಪಿ, ನ.12: ಉಡುಪಿ ಶಿಶು ಅಭಿವೃದ್ಧಿ ಯೋಜನೆಯ ನಗರಸಭೆ ವ್ಯಾಪ್ತಿಯ ಶಿಥಿಲಾವಸ್ಥೆಯಲ್ಲಿರುವ...

ಆಭರಣ ಮೋಟಾರ್ಸ್ ನಲ್ಲಿ ನೇರ ಸಂದರ್ಶನ

ಉಡುಪಿ, ನ.12: ನಗರದ ನಿಟ್ಟೂರಿನ ಆಭರಣ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಇಲ್ಲಿ...

ಅಂಚೆ ಪಿಂಚಣಿ ಅದಾಲತ್

ಉಡುಪಿ, ನ.12: ಅಂಚೆ ಪಿಂಚಣಿದಾರರ ಪಿಂಚಣಿಗೆ ಸಂಬಂಧಿಸಿದ ಕುಂದೊಕೊರತೆಗಳನ್ನು ಆಲಿಸಲು, ವಿಭಾಗೀಯ...

ಪ್ರಜಾಸೇವಾ ಆಂದೋಲನದಲ್ಲಿ ಸ್ವೀಕೃತವಾದ ಅರ್ಜಿಗಳನ್ನು ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಮಾಡಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ, ನ.12: ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರು ನೀಡಿರುವ ತಮ್ಮ ಸಮಸ್ಯೆಗಳ ಅಹವಾಲುಗಳನ್ನು...
error: Content is protected !!