Sunday, November 8, 2026
Sunday, November 8, 2026

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಚ್ಯಾಂಪಿಯನಶಿಪ್- ಮಂಗಳೂರು ವಿವಿಗೆ ಚ್ಯಾಂಪಿಯನಶಿಪ್ ಕಿರೀಟ

ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಚ್ಯಾಂಪಿಯನಶಿಪ್- ಮಂಗಳೂರು ವಿವಿಗೆ ಚ್ಯಾಂಪಿಯನಶಿಪ್ ಕಿರೀಟ

Date:

ಉಡುಪಿ, ನ.8: ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾಡಳಿತ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಆಶ್ರಯದಲ್ಲಿ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಚ್ಯಾಂಪಿಯನಶಿಪ್ ಶನಿವಾರ ತೆಂಕನಿಡಿಯೂರು ಕಾಲೇಜಿನಲ್ಲಿ ನಡೆಯಿತು.

ಪುರುಷರ ಓಟಕ್ಕೆ ಶಾಸಕ ಯಶ್ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎ. ಗಫೂರ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಎಚ್.ಎನ್. ಗೋಪಾಲಕೃಷ್ಣ ಐ.ಎ.ಎಸ್ ಚಾಲನೆ ನೀಡಿದರು. ಮಹಿಳೆಯರ ಓಟಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಐ.ಎ.ಎಸ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಂಗಳೂರು ವಿವಿ ಕುಲಸಚಿವರಾದ ಸಂತೋಷ್ ಬಿ. ಜಗಲಸಾರ್ ಕೆ.ಎ.ಎಸ್., ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕರಾದ ಡಾ. ಕವಿತಾ ಕೆ.ಆರ್., ಉದ್ಯಮಿ ಆನಂದ ಪಿ ಸುವರ್ಣ, ಪ್ರಖ್ಯಾತ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ನಾಗರಾಜ್ ಸಂಕೊಳ್ಳಿ, ಲಯನ್ಸ್ ಕ್ಲಬ್ ಅಮೃತ್ ಅಧ್ಯಕ್ಷೆ ಚಂದ್ರಿಕಾ ಜೆ.ಪಿ., ಉಡುಪಿ ಜಿಲ್ಲಾ ಆಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಹರಿಪ್ರಸಾದ್ ರೈ, ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಎ.ಐ.ಯು ನವದೆಹಲಿಯ ವೀಕ್ಷಕರಾದ ಡಾ. ಜಯಪ್ರಕಾಶ್ ಮಾತನಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ಒಂದು ಸರಕಾರಿ ಕಾಲೇಜು ಇಂಥಹ ರಾಷ್ಟ್ರಮಟ್ಟದ ಪಂದ್ಯಾಕೂಟವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಶೂನ್ಯ ಪ್ರತಿಭಟನೆ, ಶೂನ್ಯ ಗಾಯಗಳು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆಲವೇ ಕೆಲವು ರಾಷ್ಟ್ರಮಟ್ಟದ ಪಂದ್ಯಾಕೂಟದಲ್ಲಿ ಇಂದಿನದ್ದು ಸೇರಿದೆ ಎಂದರು. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ, ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ. ಗಾಂವ್ಕರ್, ಸಿಡಿಸಿ ಸದಸ್ಯ ಪ್ರವೀಣ್ ಕುಮಾರ್ , ಧನಂಜಯ ಕುಂದರ್ ಮುಂತಾದವರು ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಅನುರಾಗ್ ನಿರೂಪಿಸಿದರು.

ಫಲಿತಾಂಶ: ಪುರುಷರ 10 ಕಿಮೀ ವಿಭಾಗದಲ್ಲಿ ಮುಂಬಯಿ ವಿವಿಯ ಸ್ವರಾಜ್ ಸಂದೀಪ್ ಜೋಷಿ ಪ್ರಥಮ, ಮಂಗಳೂರು ವಿವಿಯ ಶೈಲೇಶ್ ಕುಷ್ವಾಹ ದ್ವಿತೀಯ, ಹರ್ಯಾಣ ರೋಹ್ತಕ್ ಮಹರ್ಷಿ ದಯಾನಂದ್ ವಿವಿಯ ಅವಕಾಶ್ ತೃತೀಯ ಹಾಗೂ ಸಿಜಿಸಿ ಮೊಹಾಲಿ ವಿವಿಯ ದಿನೇಶ್ ನಾಲ್ಕನೇ ಸ್ಥಾನ ಪಡೆದುಕೊಂಡರು.

ಮಹಿಳೆಯರ 10 ಕಿಮೀ ವಿಭಾಗದಲ್ಲಿ ಕೇರಳರಂ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿಯ ರಾಶಿ ಸಿಎಂ ಪ್ರಥಮ, ಕೇರಳ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿಯ ಜಿನ್ಸಿ ಜಿ ದ್ವಿತೀಯ, ರಾಜಸ್ಥಾನ ಬಿಕಾನೇರ್ ಮಹಾರಾಜ ಗಂಗಾಸಿಂಗ್ ವಿವಿಯ ವಂದನಾ ಪಟೇಲ್ ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನು ಹರ್ಯಾಣ ರೋಹ್ತಕ್ ಮಹರ್ಷಿ ದಯಾನಂದ್ ವಿವಿಯ ಪೂಜಾ ಪಡೆದುಕೊಂಡರು.

ಚ್ಯಾಂಪಿಯನಶಿಪ್: ಪುರುಷರ ವಿಭಾಗದಲ್ಲಿ ರಾಜಸ್ಥಾನ ವಿವಿ ಜೈಪುರ ಪ್ರಥಮ, ಕ್ಯಾಲಿಕಟ್ ವಿವಿ ದ್ವಿತೀಯ ಹಾಗೂ ಮಂಗಳೂರು ವಿವಿ ತೃತೀಯ, ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿವಿ ಪ್ರಥಮ, ಹರ್ಯಾಣ ರೋಹ್ತಕ್ ಮಹರ್ಷಿ ದಯಾನಂದ್ ವಿವಿ ದ್ವಿತೀಯ ಹಾಗೂ ಕೇರಳ ಕೊಟ್ಟಾಯಂ ಮಹಾತ್ಮಾಗಾಂಧಿ ವಿವಿ ತೃತೀಯ.

ಸಮಗ್ರ ಚ್ಯಾಂಪಿಯನಶಿಪ್- ಮಂಗಳೂರು ವಿಶ್ವವಿದ್ಯಾನಿಲಯ

ಪುರುಷರ ಹಾಗೂ ಮಹಿಳೆಯರ ವಯಕ್ತಿಕ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡವರಿಗೆ ಆಳ್ವಾಸ್ ಕಾಲೇಜಿನ ಡಾ. ಮೋಹನ್ ಆಳ್ವಾ ಅವರು ರೂ.10,000, ರೂ. 7,500, ರೂ. 5,000, ಹಾಗೂ ರೂ. 2,500 ನಗದು ಬಹುಮಾನ ನೀಡಿದರು.

ಪಂದ್ಯಾಕೂಟದಲ್ಲಿ ಒಟ್ಟು 850 ಮಂದಿ ಪುರುಷ ಕ್ರೀಡಾಪಟುಗಳು, 650 ಮಹಿಳಾ ಕ್ರೀಡಾಪಟುಗಳು ಹಾಗೂ 100 ಅಧಿಕಾರಿಗಳು ಭಾಗವಹಿಸಿದ್ದರು.

10 ಕಿಮೀ ಓಟ: ತೆಂಕನಿಡಿಯೂರು ಕಾಲೇಜು ಮೈದಾನದಿಂದ ಆರಂಭವಾದ ಓಟ ಹಂಪನಕಟ್ಟೆ, ಕದಿಕೆ, ಆಸರೆ ಬೀಚ್, ಕೆಮ್ಮಣ್ಣು, ಹಂಪನಕಟ್ಟೆ ಮಾರ್ಗವಾಗಿ ತೆಂಕನಿಡಿಯೂರು ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ ಕಲಾರಂಗದ 108ನೇ ಮನೆ ಹಸ್ತಾಂತರ

ಉಡುಪಿ, ನ.8: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್...

ರಾಷ್ಟ್ರೀಯ ಹೆದ್ದಾರಿ-66 ನಿರಂತರ ಅಪಘಾತ ಸಮಸ್ಯೆ: ಬೆಂಗಳೂರಿನ ಆರ್.ಓ ಕಚೇರಿಯಲ್ಲಿ ತುರ್ತು ಸಭೆ

ಉಡುಪಿ, ನ.8: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೆಜಮಾಡಿಯಿಂದ ಬೈಂದೂರು ವರೆಗಿನ ನಿರಂತರ ಅಪಘಾತಗಳು...

ಉಡುಪಿ ಶ್ರೀಕೃಷ್ಣ ಮಠದಲ್ಲಿ ಜಲಪೂರಣ, ತೈಲಾಭ್ಯಂಜನ ಕಾರ್ಯಕ್ರಮ

ಉಡುಪಿ, ನ.8: ನರಕ ಚತುರ್ದಶಿ ಮುನ್ನಾದಿನ ಜಲಪೂರಣ ಕಾರ್ಯಕ್ರಮ ಸಾಂಪ್ರದಾಯಿಕ ರೀತಿಯಲ್ಲಿ...
error: Content is protected !!