Sunday, November 8, 2026
Sunday, November 8, 2026

ಉಡುಪಿ ಶ್ರೀಕೃಷ್ಣ ಮಠದಲ್ಲಿ ಜಲಪೂರಣ, ತೈಲಾಭ್ಯಂಜನ ಕಾರ್ಯಕ್ರಮ

ಉಡುಪಿ ಶ್ರೀಕೃಷ್ಣ ಮಠದಲ್ಲಿ ಜಲಪೂರಣ, ತೈಲಾಭ್ಯಂಜನ ಕಾರ್ಯಕ್ರಮ

Date:

ಉಡುಪಿ, ನ.8: ನರಕ ಚತುರ್ದಶಿ ಮುನ್ನಾದಿನ ಜಲಪೂರಣ ಕಾರ್ಯಕ್ರಮ ಸಾಂಪ್ರದಾಯಿಕ ರೀತಿಯಲ್ಲಿ ಕೃಷ್ಣ ಮಠದಲ್ಲಿ ನಡೆಯಿತು. ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥರ ಉಪಸ್ಥಿತಿಯಲ್ಲಿ ರಾತ್ರಿ ಕೃಷ್ಣ ಪೂಜೆಯ‌ ನಂತರ ನಡೆದ ಜಲಪೂರಣದಲ್ಲಿ ಪರ್ಯಾಯ ಮಠದ ವಿದ್ವಾಂಸರು, ದಿವಾನರು, ಪಾರುಪತ್ಯೆದಾರ ಹಾಗೂ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ದೀಪಾವಳಿ ಹಬ್ಬದ ಎಣ್ಣೆ ಶಾಸ್ತ್ರ ಹಾಗೂ ತೈಲಾಭ್ಯಂಜನ ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಶೀರೂರು ಮಠದಲ್ಲಿ ಶಾಸ್ತ್ರೀಯವಾಗಿ ನಡೆಯಿತು. ಪರ್ಯಾಯ ಶ್ರೀ ವೇದವರ್ಧನತೀರ್ಥರು ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥರ ಸಮ್ಮುಖದಲ್ಲಿ ಚಂದ್ರಶಾಲೆಯಲ್ಲಿ ಎಣ್ಣೆ ಶಾಸ್ತ್ರ ನೆರವೇರಿಸಿದರು. ಯತಿಗಳು ಎಣ್ಣೆ ಶಾಸ್ತ್ರ ಪೂರೈಸಿ ಭಕ್ತಾದಿಗಳಿಗೆ ಎಣ್ಣೆ ಶಾಸ್ತ್ರ ಮಾಡಿದರು. ಶ್ರೀ ಮಠದ ಸಿಬ್ಬಂದಿಗಳು ಎಣ್ಣಿ ಶಾಸ್ತ್ರ ಪೂರೈಸಿ ತೈಲಾಭ್ಯಂಜನ ಮಾಡಿ ಸಂಭ್ರಮಿಸಿದರು. ಅಷ್ಟಮಠದ ವಿದ್ವಾಂಸರು, ಪರ್ಯಾಯ ಮಠದ ದಿವಾನರು ಡಾ.ಉದಯಕುಮಾರ್ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು ಹಾಗೂ ಭಕ್ತರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ ಕಲಾರಂಗದ 108ನೇ ಮನೆ ಹಸ್ತಾಂತರ

ಉಡುಪಿ, ನ.8: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಂಕಿತ್...

ರಾಷ್ಟ್ರೀಯ ಹೆದ್ದಾರಿ-66 ನಿರಂತರ ಅಪಘಾತ ಸಮಸ್ಯೆ: ಬೆಂಗಳೂರಿನ ಆರ್.ಓ ಕಚೇರಿಯಲ್ಲಿ ತುರ್ತು ಸಭೆ

ಉಡುಪಿ, ನ.8: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೆಜಮಾಡಿಯಿಂದ ಬೈಂದೂರು ವರೆಗಿನ ನಿರಂತರ ಅಪಘಾತಗಳು...
error: Content is protected !!