ಹಿರಿಯಡಕ, ನ.5: ಶಿಕ್ಷಣ ಸಂಸ್ಥೆಗಳು ಪಠ್ಯಗಳಿಗೆ ಜೋತು ಬೀಳದೆ ಬದುಕಿನ ಸವಾಲುಗಳನ್ನು ಎದುರಿಸುವ ಅವಕಾಶಗಳನ್ನು ಸೃಷ್ಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಜಗತ್ತಿನ ಒರೆಗಲ್ಲಿಗೆ ಒಡ್ಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕು. ಅಂತಹ ಪಾಲ್ಗೊಳ್ಳುವ ಆನಂದದ ʼಅನ್ವೇಷಣಂ-2.0ʼ ಮಕ್ಕಳ ಪಾಲಿನ ಅಪೂರ್ವ ಅವಕಾಶವೇ ಆಗಿದೆ ಎಂದು ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿತವಾದ ʼಅನ್ವೇಷಣಂ-2.0ʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ವಿದ್ಯಾ ಜಿ ಬಾಯಿ, ದಾನಿಗಳಾದ ಡಾ. ಎನ್.ಎಸ್. ಶೆಟ್ಟಿ, ಸಂತೋಷ್ ಕುಲಾಲ್, ಹಿರಿಯಡಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್, ಸುಂದರ ಕಾಂಚನ್, ರಾಮಮೂರ್ತಿ ಭಟ್, ʼಅನ್ವೇಷಣಂ-2.0ʼ ಸಂಚಾಲಕರುಗಳಾದ ಮೀನಾಕ್ಷಿ ನಾಯ್ಕ, ಡಾ. ರಾಧಾಕೃಷ್ಣ ನಾಯಕ್, ಶಶಾಂಕ್ ಮತ್ತು ಶ್ರಾವ್ಯ ಉಪಸ್ಥಿತರಿದ್ದರು. ಐಕ್ಯೂಎಸಿ ಸಂಚಾಲಕ ಡಾ. ಲಿತಿನ್ ಬಿ ಎಂ ಸ್ವಾಗತಿಸಿ, ರಾ.ಸೇ.ಯೋ. ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ ಸಿ ವಂದಿಸಿದರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ.ಎಂ. ಪ. ಪೂ. ಕಾಲೇಜು ಪ್ರಥಮ, ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಸಮಗ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.




By
ForthFocus™