Sunday, November 1, 2026
Sunday, November 1, 2026

ವಿದ್ಯಾರತ್ನ ಕಾಲೇಜು: ಪ್ರಥಮ ಚಿಕಿತ್ಸೆ ತರಬೇತಿ

ವಿದ್ಯಾರತ್ನ ಕಾಲೇಜು: ಪ್ರಥಮ ಚಿಕಿತ್ಸೆ ತರಬೇತಿ

Date:

ಉಡುಪಿ, ಅ.30: ಪ್ರಥಮ ಚಿಕಿತ್ಸೆಯ ಕುರಿತಾದ ಅರಿವು ಸಂಕಷ್ಟದ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಇತರರು ಕಷ್ಟದಲ್ಲಿದ್ದಾಗ ಸಹಾಯ ಮಾಡಲು ಸಹಕಾರಿಯಾಗುತ್ತದೆ. ಪ್ರಥಮ ಚಿಕಿತ್ಸೆಯ ಪ್ರಾಥಮಿಕ ಅರಿವು ಎಲ್ಲರಿಗೂ ಮುಖ್ಯ ಎಂದು ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಹೇಳಿದರು.

ಅವರು ಉಡುಪಿಯ ವಿದ್ಯಾರತ್ನ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಮತ್ತು ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು. ಕಾಲೇಜಿನ ಪ್ರಾಂಶುಪಾಲೆ ಅನಿತಾ ಸಿ. ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಾವ್ಯ ಹಾಗೂ ಖ್ಯಾತ ಮೂಳೆ ತಜ್ಞ ಡಾ. ಸುರೇಶ್ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ನರ್ಸಿಂಗ್ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಫೆರ್ನಾಂಡಿಸ್ ಸ್ವಾಗತಿಸಿ, ಮೆರಿಟಾ ಮೆಂಡೋನ್ಸಾ ವಂದಿಸಿದರು. ಉಪಪ್ರಾಂಶುಪಾಲ ಡಾ. ರಮೇಶ್ ಎಂ. ಕೆ., ಆಡಳಿತಾಧಿಕಾರಿ ಡಾ. ರವಿ ಪಾಲನ್ ಸಿಟಿ ಆಸ್ವತ್ರೆಯ ನರ್ಸಿಂಗ್ ಸುಪರಿಟೆಂಟ್ ಮರಿಯಾ ಆಳ್ವ, ಮಾಲಿನಿ ಮೆರಿಟ ಕುಂದರ್ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ ಜ್ಞಾನಸುಧಾ: ಜ್ಞಾನ ಸಂಭ್ರಮ

ಮಣಿಪಾಲ, ನ.1: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜ್ಞಾನ ಸಂಭ್ರಮ...

ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನಾಚರಣೆ

ಉಡುಪಿ, ನ.1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ರಫ್ತು ಉದ್ದಿಮೆದಾರರಿಗೆ ರಫ್ತು ಪ್ರೋತ್ಸಾಹ ಕಾರ್ಯಾಗಾರ

ಉಡುಪಿ, ನ.1: ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ...

ಹಿರಿಯಡಕ ಕಾಲೇಜಿನಲ್ಲಿ ನಾಡಹಬ್ಬ

ಹಿರಿಯಡಕ, ನ.1: ಬದುಕಿನೊಂದಿಗೆ ಬೆರೆತ ಭಾಷೆಯನ್ನು ಜೀವನದುದ್ದಕ್ಕೂ ಕಾದುಕೊಳ್ಳಬೇಕಾದುದು ಕನ್ನಡಿಗರೆಲ್ಲರ ಆದ್ಯ...
error: Content is protected !!