Sunday, November 1, 2026
Sunday, November 1, 2026

ಹಿರಿಯಡಕ ಕಾಲೇಜಿನಲ್ಲಿ ನಾಡಹಬ್ಬ

ಹಿರಿಯಡಕ ಕಾಲೇಜಿನಲ್ಲಿ ನಾಡಹಬ್ಬ

Date:

ಹಿರಿಯಡಕ, ನ.1: ಬದುಕಿನೊಂದಿಗೆ ಬೆರೆತ ಭಾಷೆಯನ್ನು ಜೀವನದುದ್ದಕ್ಕೂ ಕಾದುಕೊಳ್ಳಬೇಕಾದುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯವೂ ಹೌದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌. ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಘಟಕ, ಕನ್ನಡ ವಿಭಾಗ ಮತ್ತು ರಾ.ಸೇ.ಯೋ. ಘಟಕಗಳ ಆಶ್ರಯದಲ್ಲಿ ಆಚರಿಸಲಾದ 71ನೇ ನಾಡಹಬ್ಬದ ಪ್ರಯುಕ್ತ ಕನ್ನಡ ತಾಯಿಗೆ ಮಾಲಾರ್ಪಣೆ ಮಾಡಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಐಕ್ಯುಎಸಿ ಸಂಚಾಲಕ ಡಾ. ಲಿತಿನ್‌ ಬಿ ಎಂ., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಾಧಾಕೃಷ್ಣ ನಾಯಕ್‌, ಆಶಾ ಹೆಚ್‌.ಬಿ., ವಿದ್ಯಾರ್ಥಿ ನಾಯಕಿ ದೀಕ್ಷಾ ಹಾಗೂ ಇತರ ಬೋಧಕ, ಬೋಧಕೇತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಪಂಜು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಸಾಹಿತ್ಯ ಅಕಾಡೆಮಿಯ ಉಡುಪಿ ಜಿಲ್ಲಾ ಚಕೋರ ಸಂಚಾಲಕಿ ಶಾಲಿನಿ ಯು. ಬಿ. ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ ಜ್ಞಾನಸುಧಾ: ಜ್ಞಾನ ಸಂಭ್ರಮ

ಮಣಿಪಾಲ, ನ.1: ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜ್ಞಾನ ಸಂಭ್ರಮ...

ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನಾಚರಣೆ

ಉಡುಪಿ, ನ.1: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ರಫ್ತು ಉದ್ದಿಮೆದಾರರಿಗೆ ರಫ್ತು ಪ್ರೋತ್ಸಾಹ ಕಾರ್ಯಾಗಾರ

ಉಡುಪಿ, ನ.1: ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ...

ವಾಯುಪಡೆಯ 29 ನೇ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅಧಿಕಾರ ಸ್ವೀಕಾರ

ನವದೆಹಲಿ, ಅ.31: ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಶನಿವಾರ 29...
error: Content is protected !!