Monday, November 2, 2026
Monday, November 2, 2026

ರಫ್ತು ಉದ್ದಿಮೆದಾರರಿಗೆ ರಫ್ತು ಪ್ರೋತ್ಸಾಹ ಕಾರ್ಯಾಗಾರ

ರಫ್ತು ಉದ್ದಿಮೆದಾರರಿಗೆ ರಫ್ತು ಪ್ರೋತ್ಸಾಹ ಕಾರ್ಯಾಗಾರ

Date:

ಉಡುಪಿ, ನ.1: ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್‌ನ ಡಾ. ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಜವಳಿ ವಲಯದ ರಫ್ತು ಉದ್ದಿಮೆದಾರರಿಗೆ ಒಂದು ದಿನದ ರಫ್ತು ಪ್ರೋತ್ಸಾಹನ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಪೂರ್ವ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕಿ ಸುಮಲತಾ ಡಿ., ಭಾರತದ ಜವಳಿ ಉದ್ಯಮವು ದೇಶದ ಆರ್ಥಿಕತೆಗೆ ಬಲ ನೀಡುತ್ತಿದೆ. ಜವಳಿ ಉದ್ಯಮವು 2025-26 ನೇ ಆರ್ಥಿಕ ಸಾಲಿಗೆ 35 ಬಿಲಿಯನ್ ಡಾಲರ್ ನಷ್ಟು ರಫ್ತು ವಹಿವಾಟು ದಾಖಲಿಸಿದೆ. 2030 ರ ವೇಳೆಗೆ ಭಾರತದ ಜವಳಿ ಉದ್ಯಮವು 100 ಬಿಲಿಯನ್ ಡಾಲರ್ ವ್ಯವಹಾರ ನಡೆಸಬೇಕು ಎನ್ನುವ ಗುರಿ ಹೊಂದಲಾಗಿದ್ದು ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಉದ್ದಿಮೆದಾರರಿಗೆ ಮಾಹಿತಿ ನೀಡಲಾಗುತ್ತಿದೆ. ಇಲ್ಲಿ ಪಡೆದ ಮಾಹಿತಿಯನ್ನು ಸದುಪಯೋಗ ಪಡಿಸಿಕೊಂಡು ಅಂತರರಾಷ್ಟ್ರೀಯ ಮಾರುಕಟ್ಟೆಯ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಿ ಗರಿಷ್ಠ ರಫ್ತು ದಾಖಲಿಸಿ ದೇಶದ ಆರ್ಥಿಕತೆ ಬಲ ತುಂಬಬೇಕು ಎಂದರು.

ಉಡುಪಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ವಾಮನ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯಲ್ಲಿ ಸುಮಾರು 50 ರಿಂದ 60 ರಫ್ತು ಉದ್ದಿಮೆದಾರರು, ಜವಳಿ, ಗೋಡಂಬಿ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ. ಜಿಲ್ಲೆಯು 50 ದೇಶಗಳಿಗೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು 2,600 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ರಫ್ತು ಉದ್ಯಮಕ್ಕೆ ಇನ್ನಷ್ಟು ಹೆಚ್ಚಿನ ಉತ್ತೇಜನ ನೀಡಿ ಉಡುಪಿಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸಲು ಬೇಕಾಗುವ ಮಾಹಿತಿ ನೀಡಲು ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಉದ್ದಿಮೆದಾರರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಧಾರವಾಡ ಕೇಂದ್ರಿಯ ರೇಷ್ಮೆ ಮಂಡಳಿ ವಿಜ್ಞಾನಿ ಡಾ. ವಿರಾಜ್ ಸೋಮ ಕುಮಾರ್, ವಿ.ಟಿ.ಪಿ.ಸಿ ಯ ಅಬ್ದುಲ್ ರೆಹಮಾನ್ ತಾಜುದ್ದೀನ್, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಭಾಗವಹಿಸಿದ್ದರು. ಉಡುಪಿ ಸಣ್ಣ ಕೈಗಾರಿಕೆ ಘಟಕದ ಕಾರ್ಯದರ್ಶಿ ರಂಜನ್ ಕಲ್ಕೂರ, ಜಿಲ್ಲೆಯ ರಫ್ತು ಉದ್ದಿಮೆದಾರರು ಉಪಸ್ಥಿತರಿದ್ದರು. ಡಿ.ಪಿ.ಆರ್.ಸಿ ಸಿಬ್ಬಂದಿ ಕೃಷ್ಣ ಸ್ವಾಗತಿಸಿ ನಿರೂಪಿಸಿ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ಕ್ಲಾಸಸ್ ಸಿ.ಎ. ಇಂಟರ್ಮೀಡಿಯೇಟ್ ಸಾಧಕರಿಗೆ ಸನ್ಮಾನ

ಕಟಪಾಡಿ, ನ.2: ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಸಾಧನೆಗೈದ...

ಕನ್ನಡತನ ಬಳಸಿ ಬದುಕು ಕಟ್ಟಿಕೊಳ್ಳೋಣ: ಡಾ.ನರೇಂದ್ರ ಕುಮಾರ್

ಉಡುಪಿ, ನ.2: ಕನ್ನಡತನ ಬಳಸಿ ಬದುಕು ಕಟ್ಟಿಕೊಳ್ಳೋಣ. ಈ ರಾಜ್ಯೋತ್ಸವ ದಿನನಿತ್ಯದ...

ಬಿ.ಬಿ. ಹೆಗ್ಡೆ ಕಾಲೇಜು: ಕನ್ನಡ ಡಿಂಡಿಮ

ಕುಂದಾಪುರ, ನ.2: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದು: ರಾಘವೇಂದ್ರ ಪ್ರಭು ಕರ್ವಾಲು

ಉಡುಪಿ, ನ.1: ಮಕ್ಕಳೇ ಸಮಾಜದ ಮುಂದಿನ ನಿಜವಾದ ಆಸ್ತಿ. ಮಕ್ಕಳ ವ್ಯಕ್ತಿತ್ವ...
error: Content is protected !!