Monday, October 26, 2026
Monday, October 26, 2026

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಚಂಡಿಕಾಯಾಗ, ಘಂಟಾನಾದ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ: ಚಂಡಿಕಾಯಾಗ, ಘಂಟಾನಾದ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

Date:

ಕಾಪು, ಅ.21: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ಪರವಾಗಿ ಚಂಡಿಕಾಯಾಗ, ಘಂಟಾನಾದ ಸೇವೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಮಾತೃ ವೈಭವ ಸೇವಾ ಸಮಿತಿಯ ಉಪಾಧ್ಯಕ್ಷ ಉದಯ ಸುಂದರ್ ಶೆಟ್ಟಿ ನೇತೃತ್ವದಲ್ಲಿ ಮುಂಬೈ ಸಮಿತಿಯ ಸದಸ್ಯರು ಮತ್ತು ಮುಂಬೈನ ಅಮ್ಮನ ಭಕ್ತರ ಪರವಾಗಿ ಸೇವೆಯನ್ನು ನೆರವೇರಿಸಲಾಯಿತು.

ರಾಜ್ಯಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 15 ತಂಡಗಳು ಭಾಗಿಯಾಗಿದ್ದು. ಪ್ರಥಮ ಸ್ಥಾನ ಬಾಲ ವಿಕಾಸ ಕುಣಿತ ಭಜನಾ ಮಂಡಳಿ ಹೊಸಬೆಟ್ಟು ಕುಳಾಯಿ, ಎರಡನೇ ಸ್ಥಾನ ಶ್ರೀ ಜನಾರ್ದನ ಸ್ವಾಮಿ ಕುಣಿತ ಭಜನಾ ಮಂಡಳಿ, ಉಜಿರೆ ಬೆಳ್ತಂಗಡಿ, ಮೂರನೇ ಸ್ಥಾನ ಈಶ್ವರಿ ಭಜನಾ ಮಂಡಳಿ ಕಾಂಜಲಕೋಡಿ, ಪೊಳಲಿ, ನಾಲ್ಕನೇ ಸ್ಥಾನ ಶ್ರೀ ಶೇಷಶಯನ ಭಜನಾ ತಂಡ ಬೈಕಂಪಾಡಿ, ಮಂಗಳೂರು ಪಡೆದುಕೊಂಡರು.

ಬಹುಮಾನ ವಿತರಣೆ ಮತ್ತು ಸಮಾರೋಪದ ಸಭಾವೇದಿಕೆಯಲ್ಲಿ ದೇವಳದ ಪ್ರಧಾನ ತಂತ್ರಿ ವಿದ್ವಾನ್ ಕೆ.ಪಿ ಕುಮಾರಗುರು ತಂತ್ರಿ ಸ್ಪರ್ಧಾಳುಗಳಿಗೆ ಮತ್ತು ಭಕ್ತರಿಗೆ ಆಶೀರ್ವಚನವನ್ನು ನೀಡಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕುಣಿತ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಮಾತೃ ವೈಭವ ಸೇವಾ ಸಮಿತಿ ಮುಂಬೈ ವಲಯದ ನವಿಮುಂಬೈ ಘಟಕದ ಮುಖ್ಯ ಸಂಚಾಲಕ ಖಾಂದೇಶ್ ಭಾಸ್ಕರ್ ಶೆಟ್ಟಿ, ಮಂಗಳೂರು ಮೀನುಗಾರಿಕಾ ಅಭಿವೃದ್ಧಿ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ಆಡಳಿತ ನಿರ್ದೇಶಕ ಡಾ. ಜಿ. ಸಂತೋಷ್ ಕುಮಾರ್ ಕೆ.ಎ.ಎಸ್ ಹಾಗೂ ಡಾ. ಹೇಮಲತಾ ಹಾಗೂ ಕುಣಿತ ಭಜನಾ ನಿರ್ವಹಣೆಯಲ್ಲಿ ರಮೇಶ್ ಕಲ್ಮಾಡಿ, ಸಾವಿತ್ರಿ ಗಣೇಶ್, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ರೇಣುಕಾ ಜೋಗಿ ಉಪಸ್ಥಿತರಿದ್ದರು. ಕಾರ್ಯಕ್ರಮಗಳ ಪ್ರಾಯೋಜಕರಾದ ಮುಂಬೈ ಸಮಿತಿಯ ಉದಯ ಸಂದರ್ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ.ವಾಸುದೇವ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು, ಶಿವಣ್ಣ ಬಾಯರ್ ಕಾರ್ಯಕ್ರಮ ನಿರೂಪಿಸಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕ ಮಾಧವ ಆರ್. ಪಾಲನ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

ಜಪಾನ್‌ನ ನಗೋಯಾದಲ್ಲಿರುವ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 2026 ಏಷ್ಯನ್...

ಫ್ರೆಂಚ್ ಓಪನ್: ಪಿ.ವಿ. ಸಿಂಧು ರನ್ನರ್-ಅಪ್

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಎರಡು...

ಆರ್‌ಬಿಐ ಡೇಟಾ ಸೆಂಟರ್ ಮತ್ತು ಸೈಬರ್‌ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಒಡಿಶಾದ ಭುವನೇಶ್ವರದ...

ನ.1: ಗುಜ್ಜಾಡಿ ನಾಯಕವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಗುಜ್ಜಾಡಿ, ಅ.25: ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಆಯುಷ್...
error: Content is protected !!