Monday, October 26, 2026
Monday, October 26, 2026

ಶ್ರೀಮಂತರ ಸ್ವತ್ತಾಗಿದ್ದ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿಗಳು ತಳಮಟ್ಟದ ಹರೆಕಳ ಹಾಜಬ್ಬರಂತ ಸಾಮಾನ್ಯ ಸಾಧಕರಿಗೂ ತಲುಪುವಂತೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಶ್ರೀಮಂತರ ಸ್ವತ್ತಾಗಿದ್ದ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿಗಳು ತಳಮಟ್ಟದ ಹರೆಕಳ ಹಾಜಬ್ಬರಂತ ಸಾಮಾನ್ಯ ಸಾಧಕರಿಗೂ ತಲುಪುವಂತೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Date:

ಸಾೖಬ್ರಕಟ್ಟೆ, ಅ.21: ಕಿತ್ತಳೆ ಮಾರಿ ವ್ಯಕ್ತಿಯೊಬ್ಬ ಸರಕಾರಿ ಶಾಲೆಯೊಂದನ್ನು ಕಟ್ಟಿ ಅದನ್ನು ಮುನ್ನಡೆಸಲು ಸಾಧ್ಯ ಎಂದು ತೋರಿಸಿಕೊಟ್ಟವರು ಹರೆಕಳ ಹಾಜಬ್ಬ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಸಾೖಬ್ರಕಟ್ಟೆ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ನಡೆದ ನಮ್ಮೂರ ದಸರಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಶ್ರೀಮಂತರ ಸ್ವತ್ತಾಗಿದ್ದ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿಗಳು ತಳಮಟ್ಟದ ಹರೆಕಳ ಹಾಜಬ್ಬರಂತ ಸಾಮಾನ್ಯ ಸಾಧಕರಿಗೂ ತಲುಪುವಂತೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ. ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ, ಗೌರವ ಡಾಕ್ಟರೇಟ್‌ನಂತಹ ಹಲವು ಪ್ರಶಸ್ತಿ, ಪಾರಿತೋಷಕ ಪಡೆದರೂ ಸರಳತೆ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಕಟ್ಟಿಕೊಂಡವರು ಎಂದರು. ಹರೇಕಳ ಹಾಜಬ್ಬರಿಗೆ ಶ್ರೀ ವಿನಾಯಕ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ , ನನ್ನ ಧಣಿ ಅಚ್ಚಣ್ಣ ಶೆಟ್ಟರು ಬಾರ್ಕೂರು ಸೀಮೆಯವರು, ನನ್ನ ತಂದೆ ತಾಯಿ ಅವರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ನನಗೂ ಈ ಬಾರ್ಕೂರಿಗೂ ಈ ರೀತಿಯ ಸಂಬಂಧ ಇದೆ. ಕಿತ್ತಳೆ ಮಾರಿಕೊಂಡಿದ್ದ ನನ್ನನ್ನು ಗುರುತಿಸಿ, ನನಗೆ ಸೂಕ್ತ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾಗಳು ಎಂದು ಹೇಳಿದರು. ಹಾಜಬ್ಬರಿಂದ ನಾವು ಕಲಿಯಬೇಕಾಗಿದ್ದು ಬಹಳ ಇದೆ. ಅವರು ಕಿತ್ತಳೆ ಹಣ್ಣನ್ನು ಮಾರಿ ಶಾಲೆಯನ್ನು ಕಟ್ಟದರು. ಆದರೆ ನಮಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ ಕನ್ನಡ ಶಾಲೆಯನ್ನು ಮುಚ್ಚುತ್ತಿದ್ದೇವೆ. ಇಂಗ್ಲಿಷ್‌ ಬೇಕು ಎಲ್ಲಾ ಬೇಕು ಆದರೆ ಕನ್ನಡ ಶಾಲೆಯನ್ನು ಮುಚ್ಚಬೇಡಿ ಎಂದು ಕರೆ ನೀಡಿದರು. ಸ್ಥಳೀಯ ಸಾಧಕರಾದ ನಿವೃತ್ತ ದೈಹಿಕ ಶಿಕ್ಷಕ ಗಜೇಂದ್ರ ಶೆಟ್ಟಿ ಡಾ. ಧನ್ಯ, ಸಜನ್‌, ವಿಜಯಲಕ್ಷ್ಮೀ ಇವರನ್ನು ಸನ್ಮಾನಿಸಲಾಯಿತು. ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ಗಣೇಶ್‌ ಪ್ರಸಾದ್‌ ಕಾಂಚನ್‌, ಸಂದೀಪ್‌ ಶೆಟ್ಟಿ, ಸ್ವಾಮಿನಾಥ ಕಾರ್ಯದರ್ಶಿ ಸುಧಾಕರ್‌ ನಾಯ್ಕ ಉಪಸ್ಥಿತರಿದ್ದರು. ರಾಘವೇಂದ್ರ ಶೆಟ್ಟಿ ಹೆಸ್ಕುತ್ತೂರು ಕಾರ್ಯಕ್ರಮ ನಿರೂಪಿಸಿದರು. ಅಜಿತ್‌ ಕುಮಾರ್‌ ಸ್ವಾಗತಿಸಿ, ಪ್ರಶಾಂತ್‌ ಸೂರ್ಯ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

ಜಪಾನ್‌ನ ನಗೋಯಾದಲ್ಲಿರುವ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 2026 ಏಷ್ಯನ್...

ಫ್ರೆಂಚ್ ಓಪನ್: ಪಿ.ವಿ. ಸಿಂಧು ರನ್ನರ್-ಅಪ್

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ, ಭಾರತದ ಎರಡು...

ಆರ್‌ಬಿಐ ಡೇಟಾ ಸೆಂಟರ್ ಮತ್ತು ಸೈಬರ್‌ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಭಾನುವಾರ) ಒಡಿಶಾದ ಭುವನೇಶ್ವರದ...

ನ.1: ಗುಜ್ಜಾಡಿ ನಾಯಕವಾಡಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಗುಜ್ಜಾಡಿ, ಅ.25: ಕರ್ನಾಟಕ ಸರಕಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಆಯುಷ್...
error: Content is protected !!