Tuesday, September 29, 2026
Tuesday, September 29, 2026

ಸವಾಲುಗಳನ್ನು ಎದುರಿಸಲು ಶಿಕ್ಷಕರು ಸದಾ ತಯಾರಾಗಿರಬೇಕು: ಲೋಕೇಶ್

ಸವಾಲುಗಳನ್ನು ಎದುರಿಸಲು ಶಿಕ್ಷಕರು ಸದಾ ತಯಾರಾಗಿರಬೇಕು: ಲೋಕೇಶ್

Date:

ಕೋಟ, ಸೆ.29: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ರಂಗದಲ್ಲಿ ಶಿಕ್ಷಕರ ಎದುರು ಹಲವಾರು ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಲು ನಮ್ಮ ನಮ್ಮ ಶಿಕ್ಷಕರು ಸಮರ್ಥರಾಗಿದ್ದರೂ ಕೂಡ, ಸವಾಲಿನ ಒಳಮಿಡಿತಗಳನ್ನು ಅರ್ಥಮಾಡಿಕೊಂಡು ಆ ದಿಸೆಯಲ್ಲಿ ಸಾಗಿ ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸಿ ಶೈಕ್ಷಣಿಕ ರಂಗವನ್ನು ಬಲಪಡಿಸಬೇಕು. ಜೊತೆಗೆ ಹೊಸ ಹೊಸ ಶೈಕ್ಷಣಿಕ ಸಾಧ್ಯತೆಗಳ ಬಗ್ಗೆ ತೆರೆದುಕೊಳ್ಳುತ್ತಾ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಲೋಕೇಶ್ ಸಿ ತಿಳಿಸಿದರು. ಅವರು ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಏಸ್‌ಕ್ರೀಟ್ ಅಡೇಷನ್ಸ್ ಇಂಡಿಯಾ ಪ್ರೈ.ಲಿ, ಉಸಿರು ಕೋಟ ಅವರ ಆಶ್ರಯದಲ್ಲಿ ನಡೆದ ೫ ನೆಯ ವರ್ಷದ ಡಾ. ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಆಗಿರುವ ಉಮಾರವರು ಶಿಕ್ಷಣ ರಂಗದ ಸೂಕ್ಷ್ಮ ಒಳತೋಟಿಗಳನ್ನು ಅರಿತು ಶಿಕ್ಷಕರು ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಶ್ಲಾಘನೀಯ ಕಾರ್ಯಗಳಿಗೆ ಸದಾ ಪ್ರೋತ್ಸಾಹ ಕೊಡುವ ದಾನಿಗಳು, ಪ್ರೇರಕರು ದಾರಿದೀಪಗಳು ಬಹಳ ಮುಖ್ಯ ಆಗುತ್ತದೆ. ಆ ದಿಸೆಯಲ್ಲಿ ನಮ್ಮೆಲ್ಲ ಶೈಕ್ಷಣಿಕ ರಂಗಕ್ಕೆ ಬೆಂಬಲವಿಟ್ಟ ಆನಂದ ಸಿ ಕುಂದರ್‌ರವರ ಕಾರ್ಯ ನಿಜವಾಗಿಯೂ ಕೂಡ ಅನುಕರಣೀಯ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಗೀತಾನಂದ ಫೌಂಡೇಶನ್‌ನ ಆನಂದ ಸಿ ಕುಂದರ್‌ರವರು ಶಿಕ್ಷಕರ ಜವಾಬ್ದಾರಿ ಗುರುತರವಾದದ್ದು ಇಡೀ ದೇಶದ ಭವಿಷ್ಯ ನಿಂತಿರುವುದು ಶಿಕ್ಷಣ ರಂಗದಲ್ಲಿ. ಹಾಗಾಗಿ ಅಂತಹ ಶಿಕ್ಷಕರನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ನುಡಿದರು. ವೇದಿಕೆಯಲ್ಲಿ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಅಶೋಕ ತೆಕ್ಕಟ್ಟೆ ನಿವೃತ್ತ ಅಧಿಕಾರಿಯಾಗಿರುವ ಶಿವರಾಮ್, ಟ್ರಸ್ಟಿಗಳಾದ ಸುಬ್ರಾಯ್ ಆಚಾರ್, ವಿವೇಕ ಬಾಲಕಿಯರ ಪ್ರೌಢಶಾಲೆಯ ಮುಖ್ಯಸ್ಥರಾದ ಪ್ರೇಮಾನಂದ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತ್ ಪಿಡಿಓ ರವೀಂದ್ರ ರಾವ್ ವಹಿಸಿದ್ದರು. ಶಿಕ್ಷಕ, ಸಂಯೋಜಕ ಸತೀಶ ವಡ್ಡರ್ಸೆ ಸ್ವಾಗತಿಸಿದರೆ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ವಂದಿಸಿದರು. ಶಿಕ್ಷಕಿ ನಾಗರತ್ನ ಗುಂಡ್ಮಿ ನಿರೂಪಿಸಿದರು. ಬಳಿಕ ಪ್ರಾಥಮಿಕ ಶಾಲೆಯ 11 ಶಿಕ್ಷಕರು ಹಾಗೂ ಪ್ರೌಢಶಾಲೆಯ 13 ಶಿಕ್ಷಕರನ್ನು ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಲಾಯಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ದಾರಿದೀಪ ಹಾಗೂ ಹೈಮಾಸ್ಟ್ ಲೈಟ್‌ಗಳ ಸಮಸ್ಯೆ ಬಗೆಹರಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮನವಿ

ಮಣಿಪಾಲ, ಸೆ.29: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್...

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲಿಸಲು ಸಮಿತಿ ರಚನೆ- ಮಂಗಳೂರು ವಕೀಲರ ಸಂಘ ಸ್ವಾಗತ

ಮಂಗಳೂರು, ಸೆ.29: ಮಂಗಳೂರು ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಕರ್ನಾಟಕ...

ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

ಕುಂದಾಪುರ, ಸೆ.29: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...
error: Content is protected !!