ಉಡುಪಿ, ಸೆ.28: ಯಕ್ಷಗಾನ ಕಲಾರಂಗ (ರಿ.), ಉಡುಪಿ ಇದರ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಉಡುಪಿ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಕಳೆದ 21 ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದು, ಈ ವರ್ಷ 1274 ವಿದ್ಯಾರ್ಥಿಗಳಿಗೆ 1,75,89,500/- ರೂಪಾಯಿ ವಿದ್ಯಾರ್ಥಿವೇತನವನ್ನು ಸೆಪ್ಟೆಂಬರ್ 27, 2026 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ವಿತರಿಸಲಾಯಿತು. ‘ವಿದ್ಯಾದಾನಕ್ಕಿಂತಲೂ ಮಿಗಿಲಾದ ದಾನವಿಲ್ಲ’ ‘ನೀರಿದ್ದರೆ ನದಿ’, ‘ಜ್ಞಾನವಿದ್ದರೆ ಮನುಷ್ಯ’, ‘ಪರೋಪಕಾರಕ್ಕಿಂತ ಮಿಗಿಲಾದ ಪುಣ್ಯವಿಲ್ಲ’, ‘ಜನನಿ ಜನ್ಮ ಭೂಮಿ’ ಸ್ವರ್ಗಕ್ಕಿಂತಲೂ ದೊಡ್ಡದು ಮೊದಲಾದ ಮಾತುಗಳನ್ನು ಉದ್ಧರಿಸಿ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಯಕ್ಷಗಾನ ಕಲಾರಂಗವೂ ಮಧ್ವಾಚಾರ್ಯರು ಹೇಳಿದ ‘ನಾನಾ ಜನರ ಸೇವೆಯೆ ಭಗವಂತನಿಗೆ ನಾವು ಕೊಡುವ ತೆರಿಗೆ’ ಎಂಬ ಮಾತನ್ನು ಅನುಷ್ಠಾನಕ್ಕೆ ತಂದ ಸಂಸ್ಥೆಯಾಗಿದೆ ಎಂದು ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಸಂಸ್ಥೆಗೆ ಶ್ರೀಮಠದಿಂದ ದೊಡ್ಡಮೊತ್ತದ ಸಹಾಯಧನ ನೀಡಿ ಹರಸಿದರು. ಅಧ್ಯಕ್ಷತೆ ವಹಿಸಿದ್ದ ಗೀತಾನಂದ ಫೌಂಡೇಶನ್‌ನ ಅಧ್ಯಕ್ಷ ಆನಂದ ಸಿ. ಕುಂದರ್ ಸಮಾಜಪರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಅದಕ್ಕೆ ಹಣದಕೊರತೆಯಾಗುವುದಿಲ್ಲ. ಎಂಬುವುದಕ್ಕೆ ಯಕ್ಷಗಾನ ಕಲಾರಂಗ ಉತ್ತಮ ಉದಾಹರಣೆಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 25 ವಿದ್ಯಾರ್ಥಿಗಳಿಗೆ ಚೆಕ್ ಮತ್ತು 15 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪನ್ನು ವಿತರಿಸಲಾಯಿತು. ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ ‘ಕಲಾಂತರಂಗ – 2026’ನ್ನು ಬಿಡುಗಡೆಗೊಳಿಸಿ, ಗಣ್ಯರಿಗೆ ವಿರಿಸಲಾಯಿತು. ಕರ್ಣಾಟಕ ಬ್ಯಾಂಕಿನ ಜಿ. ಎಂ. ಬಿ. ಜಿ. ಸಾಮಗ ತಮ್ಮ ಶುಭಾಶಂಸನೆಯ ಮಾತುಗಳಲ್ಲಿ ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸಗಳಿಗೆ ಕರ್ಣಾಟಕ ಬ್ಯಾಂಕ್ ಈ ಹಿಂದಿನಂತೆ ತನ್ನ ಸಹಕಾರ ಮುಂದುವರಿಸಲಿದೆ ಎಂದರು. ಇನ್‌ಫೋಸಿಸ್ ಮಂಗಳೂರಿನ ವಿಶ್ವಸ್ಥರಾದ ರವಿರಾಜ ಬೆಳ್ಮ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ, ಬೆಂಗಳೂರಿನ ಇಂಜಿನೀಯರ್ ಪಾರಂಪಳ್ಳಿ ನಟರಾಜ ಉಪಾಧ್ಯ, ಸಿಎ ಗಣೇಶ್ ಕಾಂಚನ್, ಪಣಂಬೂರು ವಾಸುದೇವ ಐತಾಳ್, ಉದ್ಯಮಿ ಉದಯ ಹೆಗ್ಡೆೆ ಇವರೆಲ್ಲರು ಮಾತನಾಡಿ ಯಕ್ಷಗಾನ ಕಲಾರಂಗ ಅತ್ಯುತ್ತಮ ಸಾಮಾಜಿಕ ಸಂಘಟನೆಯೆಂಬುದಕ್ಕೆ ಇವತ್ತಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು. ವೇದಿಕೆಯಲ್ಲಿ ಉಜ್ವಲ ಡೆವಲಪರ್ಸ್ನ ಮಾಲಕ ಪಿ. ಪುರುಷೋತ್ತಮ ಶೆಟ್ಟಿ, ತೆಕ್ಕಟ್ಟೆ ಸಿದ್ಧಿವಿನಾಯಕ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಅರುಣ್ ಕುಮರ್ ಶೆಟ್ಟಿ, ಭವಾನಿ ಎಂಟರ್‌ಪ್ರೈಸಸ್‌ನ ಮಾಲಕ ಪುರುಷೋತ್ತಮ ಪಟೇಲ್, ದಾನಿ ಯು. ವಿಶ್ವನಾಥ ಶೆಣೈ, ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಕರ್ತರನ್ನು ಸಭೆಗೆ ಪರಿಚಯಿಸಿದರು. ಮನೆ ಫಲಾನುಭವಿ ವಿದ್ಯಾರ್ಥಿಗಳು ಸಂಸ್ಥೆಗು, ಮನೆಯ ಪ್ರಾಯೋಜಕತ್ವ ವಹಿಸಿದ ದಾನಿಗಳಿಗು ಕೃತಜ್ಞತೆ ಸೂಚಿಸಿ ಸ್ವಪರಿಚಯ ಮಾಡಿಕೊಂಡರು. ಈಗ ಉದ್ಯೋಗ ಪಡೆದ ಫಲಾನುಭವಿಗಳು ಸಂಸ್ಥೆ ತಮಗೆ ನೀಡಿದ ನೆರವು ತಮ್ಮ ಬದುಕನ್ನು ರೂಪಿಸುವಲ್ಲಿ ಅದು ವಹಿಸಿದ ಪಾತ್ರವನ್ನು ಸ್ಮರಿಸಿಕೊಂಡರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಹಿರಿಯ ಕಾರ್ಯಕರ್ತ ಯು. ಎಸ್ ರಾಜಗೋಪಾಲ ಆಚಾರ್ಯರು ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಸದಸ್ಯರುಗಳಾದ ಭುವನಪ್ರಸಾದ ಹೆಗ್ಡೆ, ವಿಜಯ ಕುಮಾರ್ ಮುದ್ರಾಡಿ ಸ್ವಾಮೀಜಿಯವರಿಗೆ ಫಲವಸ್ತು ಸಮರ್ಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾಪೋಷಕ್ ವಿನಮ್ರ ಸಹಾಯ ವಿತರಣಾ ಸಮಾರಂಭ ಸಮಾರೋಪ
ವಿದ್ಯಾಪೋಷಕ್ ವಿನಮ್ರ ಸಹಾಯ ವಿತರಣಾ ಸಮಾರಂಭ ಸಮಾರೋಪ
Date:




By
ForthFocus™