ಉಡುಪಿ, ಆ.17: ಅಮರವೀರ ಗೀತಾ ಗಾಯನ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೆಮ್ಮಣ್ಣು ಹೂಡೆಯ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೇಜಸ್ವಿನಿ ಅನಿಲ್ ರಾಜ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಲ್ಪೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ., ಸಂತೆಕಟ್ಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷರು ಎಡ್ವರ್ಡ್ ಲೋಬೊ, ಕೆಮ್ಮಣ್ಣು ಲಯನ್ಸ್ ಸಂಸ್ಥೆಯ ಜಗದೀಶ್ ಕೆಮ್ಮಣ್ಣು, ಹೂಡೆ ಗಜಾನನ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ರತನ್ ಡಿ ಸುವರ್ಣ, ಕೆಮ್ಮಣ್ಣು ಗಣಪತಿ ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಶೆಟ್ಟಿ, ಸಹದೇವಿ ಜೆ ಕೋಟ್ಯಾನ್ ಅಧ್ಯಕ್ಷರು ಶ್ರೀದೇವಿ ಮಹಿಳಾ ಘಟಕ, ಇಂದಿರಾ ಪಿ ಅಂಚನ್ ಉಪಾಧ್ಯಕ್ಷರು ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ, ಜಗನ್ನಾಥ ಪೂಜಾರಿ, ವಿದ್ಯಾಧರಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ನಂದಕಿಶೋರ್ ಕೆಮ್ಮಣ್ಣು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ್ ಕೋಟ್ಯಾನ್ ವಂದಿಸಿದರು. ನಮಸ್ಯ ಪ್ರಾರ್ಥಿಸಿದರು. ವಿಜಯಲಕ್ಷ್ಮಿ ನಿರೂಪಿಸಿದರು.
ವಿಜೇತರ ವಿವರ: ಗಾಯನ ಸ್ಪರ್ಧೆ
6 ರಿಂದ 12 ವರ್ಷಗಳ ವಿಭಾಗದಲ್ಲಿ ಪ್ರಥಮ – ಮೈಥಿಲಿ ಆಚಾರ್ಯ, ದ್ವಿತೀಯ – ಬನವಿ ಎಸ್., ತೃತೀಯ – ಅಶ್ವಿ ಶೆಟ್ಟಿ. 12 ರಿಂದ 18 ವರ್ಷಗಳ ವಿಭಾಗದಲ್ಲಿ ಪ್ರಥಮ – ಮೇಧಿನಿ ಭಟ್, ದ್ವಿತೀಯ – ಪೂರ್ವಿ ಜಗನ್ನಾಥ್, ತೃತೀಯ – ಸಾನ್ವಿ ಎಂ ಸುವರ್ಣ.
ತೀರ್ಪುಗಾರರ ಮೆಚ್ಚುಗೆ– ಅದ್ವಿತ್ ಆಚಾರ್ಯ, ಶ್ರೀನಕ್ಷ, ಆದ್ಯ, ಅದಿತಿ.




By
ForthFocus™