Tuesday, October 20, 2026
Tuesday, October 20, 2026

ತೆಂಕನಿಡಿಯೂರು ಕಾಲೇಜು: ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಬೀಚ್ ಕ್ಲೀನಿಂಗ್

ತೆಂಕನಿಡಿಯೂರು ಕಾಲೇಜು: ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಬೀಚ್ ಕ್ಲೀನಿಂಗ್

Date:

ಮಲ್ಪೆ, ಆ.18: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ಕಾಲೇಜಿನ ರೋವರ್ ರೇಂಜರ್ಸ್ ಘಟಕ ಲೈಫ್ ಗಾರ್ಡ್, ಹೋಮ್ ಗಾರ್ಡ್ ರವರ ಸಂಪೂರ್ಣ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ನಿಪುಣ್ ಮತ್ತು ರಾಜ್ಯ ಪುರಸ್ಕಾರ ಪರೀಕ್ಷೆ ಬರೆಯುವ ರೋವರ್, ರೇಂಜರ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ರೇಂಜರ್ಸ್ ಲೀಡರ್ ಸುಷ್ಮಾ ಟಿ ರವರು ಮಾತನಾಡಿ ವಿದ್ಯಾರ್ಥಿಗಳ ಬೀಚ್ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಾಗಿರಬಾರದು. ಸ್ವಚ್ಛ ಕಡಲ ತೀರ ಆರೋಗ್ಯಕರ ಪರಿಸರ ಎಂಬ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ನಾವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತವಾಗಿ ವಿಲೇವಾರಿ ಮಾಡಬೇಕು ಮತ್ತು ಇತರರಿಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮವನ್ನು ರೋವರ್ಸ್ ಲೀಡರ್ ಮರ್ವಿನ್ ಡಿಸೋಜ ಆಯೋಜಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ, ಅ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಅ. 20: ಉಡುಪಿ ನಗರ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಅ. 20: ನವರಾತ್ರಿ ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 20...

ಉಚ್ಚಿಲ ದಸರಾ ಶೋಭಾಯಾತ್ರೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಅ.20: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ...

ನವರಾತ್ರಿ ಮಹೋತ್ಸವ

ಪೀಠಿಕೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ...
error: Content is protected !!