ಗಂಗೊಳ್ಳಿ, ಆ.17: ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ವತಿಯಿಂದ ದೇಶದ 80 ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಗಂಗೊಳ್ಳಿಯ ಖ್ಯಾತ ಪ್ರಾಚೀನ ವಸ್ತು ಸಂಗ್ರಹಕಾರರಾದ ಕಲೈಕಾರ್ ಮ್ಯೂಸಿಯಂ ಮಾಲಿಕ ಜಿ. ಭಾಸ್ಕರ ಕಲೈಕಾರ್ ಧ್ವಜಾರೋಹಣವನ್ನು ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಗೋಪಾಲ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಮ ಪ್ರೆಸ್ ಮಾಲೀಕ ರಾಮಚಂದ್ರ ಪೂಜಾರಿ ಶುಭ ಹಾರೈಸಿದರು. ಸಂಸ್ಥೆಯ ಮಹಿಳಾ ಉಪಾಧ್ಯಕ್ಷರುಗಳಾದ ಮಮತಾ ಪೂಜಾರಿ ಮತ್ತು ಸುಜಾತ ಬಾಬು ಕಾಂತು ಖಾರ್ವಿ, ಪ್ರಧಾನ ಕಾರ್ಯದರ್ಶಿ ಹರ್ಷೇಂದ್ರ ಆಚಾರ್, ಸ್ಥಾಪಕ ಸದಸ್ಯರಾದ ಗೋಪಾಲ ಚಂದನ್ ಸೇರಿದಂತೆ ಸಂಸ್ಥೆಯ ಸದಸ್ಯರು ಮತ್ತು ಊರಿನ ನಾಗರಿಕರು ಭಾಗವಹಿಸಿದ್ದರು. ಮಾನ್ಯ ಸಹನಾ ದಾಸ್ ದೀಪಾಲಿ ಮತ್ತು ಸಾನಿಕ ವಂದೇ ಮಾತರಂ ಗೀತ ಗಾಯನವನ್ನು ಪ್ರಸ್ತುತಪಡಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗಂಗೊಳ್ಳಿ: ಶ್ರೀ ನಾರಾಯಣ ಗುರು ಜನಸೇವಾ ಬಳಗದಿಂದ ಸ್ವಾತಂತ್ರ್ಯ ದಿನಾಚರಣೆ
ಗಂಗೊಳ್ಳಿ: ಶ್ರೀ ನಾರಾಯಣ ಗುರು ಜನಸೇವಾ ಬಳಗದಿಂದ ಸ್ವಾತಂತ್ರ್ಯ ದಿನಾಚರಣೆ
Date:




By
ForthFocus™