


ಮಣಿಪಾಲ, ಆ.5: ಗುರುಪೂರ್ಣಿಮೆ ಹಾಗೂ ವನಮಹೋತ್ಸವದ ಅಂಗವಾಗಿ ಮುನಿಯಾಲ್ ಆಯುರ್ವೇದ ಸಂಸ್ಥೆಯ ವತಿಯಿಂದ ಸಾರ್ವಜನಿಕರಿಗಾಗಿ ಉಚಿತ ಔಷಧೀಯ ಸಸ್ಯಗಳ ಸಸಿಗಳ ವಿತರಣಾ ಕಾರ್ಯಕ್ರಮ ಮಣಿಪಾಲ ಕೈಗಾರಿಕಾ ಪ್ರದೇಶದಲ್ಲಿರುವ ಸಂಸ್ಥೆಯ ಆವರಣದಲ್ಲಿ ನಡೆಯಿತು. ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ಉದ್ಘಾಟಿಸಿದರು. ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಕಾಂತ ಭಟ್, ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಬೇವು, ಅಶೋಕ, ಬಿರಿಂದ, ನೆಲ್ಲಿ (ಆಮ್ಲ), ನೇರಳೆ, ಹಿಪ್ಪುನೇರಳೆ, ಮಾವು, ಶ್ರೀಗಂಧ, ರಕ್ತಚಂದನ, ಪುನರ್ಪುಳಿ ಸೇರಿದಂತೆ ವಿವಿಧ ಔಷಧೀಯ ಸಸ್ಯಗಳ ಸಸಿಗಳು ಸೇರಿದ್ದವು.




By
ForthFocus™