Monday, October 12, 2026
Monday, October 12, 2026

ಗುರಿಯೆಡೆಗೆ ಬದ್ಧನಾಗಿ ಕೆಲಸ ಮಾಡುವ ವ್ಯಕ್ತಿ ಯಶಸ್ವಿ ನಾಯಕನಾಗಬಲ್ಲ: ನರೇಂದ್ರ ಎಸ್ ಗಂಗೊಳ್ಳಿ

ಗುರಿಯೆಡೆಗೆ ಬದ್ಧನಾಗಿ ಕೆಲಸ ಮಾಡುವ ವ್ಯಕ್ತಿ ಯಶಸ್ವಿ ನಾಯಕನಾಗಬಲ್ಲ: ನರೇಂದ್ರ ಎಸ್ ಗಂಗೊಳ್ಳಿ

Date:

ಗಂಗೊಳ್ಳಿ, ಆ.5: ತಂಡದ ಏಕತೆಯಲ್ಲಿ ಯಶಸ್ಸು ಅಡಗಿದೆ. ಸ್ವಾರ್ಥಪರನಾಗದೆ ಎಲ್ಲರ ಅಭಿಪ್ರಾಯಗಳನ್ನು ಗೌರವಿಸುವ ಮತ್ತು ಗುರಿಯೆಡೆಗೆ ಬದ್ಧನಾಗಿ ಕೆಲಸ ಮಾಡುವ ವ್ಯಕ್ತಿ ಯಶಸ್ವಿ ನಾಯಕನಾಗಬಲ್ಲ ಇಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಹೇಳಿದರು. ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಗಳ ವಿವಿಧ ಕ್ಲಬ್ ಗಳ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಶೇರುಗಾರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ವಿದ್ಯಾರ್ಥಿ ನಾಯಕ ಆರ್ಯನ್ ವಿ.ಕೆ ಉಪಸ್ಥಿತರಿದ್ದರು. ವಿವಿಧ ಕ್ಲಬ್ ಗಳ ವಿದ್ಯಾರ್ಥಿ ನಾಯಕರು ವಾರ್ಷಿಕ ವರದಿಯನ್ನು ವಾಚಿಸಿದರು. ಶಿಕ್ಷಕಿಯರಾದ ಸುಜಾತ ದೇವಾಡಿಗ ಮತ್ತು ಜಯಶ್ರೀ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು. ಸರಸ್ವತಿ ವಿದ್ಯಾಲಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶಾಂತಿ ಡಿಕೋಸ್ಟ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ

ಮೈಸೂರು, ಅ.11: ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಅಗ್ರಪೂಜೆಯೊಂದಿಗೆ 2026ರ ಮೈಸೂರು...

ತಮಿಳುನಾಡಿನಲ್ಲಿ 13,000 ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

ಚೆನ್ನೈ, ಅ.11: ಚೆನ್ನೈನ ಐಐಟಿ-ಮದ್ರಾಸ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರಧಾನಿ ನರೇಂದ್ರ...

ಕಾಪು ಶ್ರೀ ಹೊಸಮಾರಿಗುಡಿ: ಶರನ್ನವರಾತ್ರಿ ಮಹೋತ್ಸವ ಉದ್ಘಾಟನೆ

ಕಾಪು, ಅ.11: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ದೇವಳದ ಪ್ರಧಾನ...

ಮಾಹೆ ವತಿಯಿಂದ ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ ಮೂಲಕ ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನಾಚರಣೆ

ಮಣಿಪಾಲ, ಅ.11: ವಿಶ್ವ ಹಾಸ್ಪಿಸ್ ಮತ್ತು ಉಪಶಾಮಕ ಆರೈಕೆ ದಿನದ ಅಂಗವಾಗಿ...
error: Content is protected !!