Friday, August 7, 2026
Friday, August 7, 2026

ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ: “ದಿಬ್ಬಣ” ಮಹಾ ಅಧಿವೇಶನ; ರಾಜರ್ಷಿ ಕೆ. ವಾಸುದೇವ ಶೆಟ್ಟಿ ಭಾಗಿ

ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ: “ದಿಬ್ಬಣ” ಮಹಾ ಅಧಿವೇಶನ; ರಾಜರ್ಷಿ ಕೆ. ವಾಸುದೇವ ಶೆಟ್ಟಿ ಭಾಗಿ

Date:

ಕಾಪು, ಆ.5: ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನವನಿರ್ಮಾಣದ ರೂವಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿಯವರು ಜುಲೈ 30 ರಿಂದ ಅಗಸ್ಟ್ 2ರವರೆಗೆ ನಾಲ್ಕು ದಿನಗಳ ಪರ್ಯಂತ ಅಮೇರಿಕಾದ ಬಾನಾ (ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ತ್ ಅಮೇರಿಕಾ) 47ನೇ ವಾರ್ಷಿಕೋತ್ಸವದ 25ನೇ ಸಮ್ಮೇಳನ ‘ದಿಬ್ಬಣ’ ಮಹಾ ಅಧಿವೇಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸುಮಾರು 250 ಬಂಟ ಕುಟುಂಬಗಳ 600ಕ್ಕೂ ಅಧಿಕ ಸದಸ್ಯರು ಭಾಗಿಯಾಗಿದ್ದ ಈ ಸಮಾರಂಭದಲ್ಲಿ, ದಿ ಅಸೋಸಿಯೇಷನ್ ಆಫ್ ಕನ್ನಡ ಕೂಟಸ್ ಆಫ್ ಅಮೇರಿಕಾದ ಅಧ್ಯಕ್ಷ ಅಮರ್ ನಾಥ್ ಗೌಡ, ಅಲ್ ಅಮೇರಿಕಾ ತುಳು ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಬೋಸ್ಟನ್, ಹೆರಂಭ ಇಂಡಸ್ಟ್ರೀಸ್ ಪ್ರೈ. ಲಿ. ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ, ದುಬೈ ಫಾರ್ಚ್ಯುನ್ ಗ್ರೂಪ್ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಆಸ್ಟ್ರೇಲಿಯಾ ಸಿಡ್ನಿಯ ಒಮೆಗಾ ಇಂಡಸ್ಟ್ರಿಸ್ ಪ್ರೈ. ಲಿ ಆಡಳಿತ ನಿರ್ದೇಶಕರಾದ ಕೆ. ಶಿವರಾಮ ಶೆಟ್ಟಿ, ಬೆಲ್ಲೆವ್ಯೂ ಉಪ ಮೇಯರ್ ಡೇವ್ ಹ್ಯಾಮಿಲ್ಟನ್, ವಾಷಿಂಗ್ಟನ್ ಸ್ಟೇಟ್ ಸೆನೆಟರ್ ಮಂಕ ಧಿಂಗ್ರಾ, ಸಿಯಾಟಲ್ ನ ಭಾರತದ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಹಾಗೂ ಇನ್ನಿತರ ಮುಖಂಡರು ಭಾಗಿಯಾಗಿದ್ದ ಈ ಮಹಾ ಅಧಿವೇಶನದಲ್ಲಿ ಕಾಪು ಶ್ರೀ ಮಾರಿಯಮ್ಮನ ಪ್ರತಿನಿಧಿಯಾಗಿ ಭಾಗವಹಿಸಿದ್ದ ವಾಸುದೇವ ಶೆಟ್ಟಿ ದೇವಳದ ದ್ವಿತೀಯ ಹಂತದ ಕಾಮಗಾರಿಗಳಾದ ನೂತನ ಭೋಜನ ಶಾಲೆ, ವಿಶೇಷ ಅತಿಥಿ ಗೃಹ, ವಾಣಿಜ್ಯ ಸಂಕೀರ್ಣ, ಯಾಗ ಶಾಲೆ ಮತ್ತು ವಸ್ತು ಸಂಗ್ರಹಾಲಯದ ಸಹಿತ ದೇವಳದಲ್ಲಿ ಪ್ರಸ್ತುತ ಲಭ್ಯವಿರುವ ವಿಶೇಷ ಸೇವೆಗಳಾದ ಘಂಟಾನಾದ ಸೇವೆ, ನವದುರ್ಗಾ ಲೇಖನ ಯಜ್ಞ, ಶಿಲಾಸೇವೆ, ನಿತ್ಯಾನ್ನದಾನ, ಚಂಡಿಕಾಯಾಗದ ಸವಿವರ ಮಾಹಿತಿಯನ್ನು ನೀಡಿದರು, ಇದರ ಜೊತೆಗೆ ಕಾಪು ನಗರ ಸಹಿತವಾಗಿ ಪ್ರತಿಯೊಂದು ಗ್ರಾಮಗಳು ಅಭಿವೃದ್ಧಿಯಾಗಬೇಕು, ಪೂರಕವಾಗಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರ ಯೋಜನೆಯನ್ನು ರೂಪಿಸುತ್ತಿದೆ, ಅಮೇರಿಕಾದಲ್ಲಿ ನೆಲೆಸಿರುವ ನಿಮ್ಮಲ್ಲಿ ಯಾರಾದರೂ ಕಾಪುವಿನಲ್ಲಿ ರೆಸಾರ್ಟ್, ಹೋಮ್ ಸ್ಟೇ, ಹೋಟೆಲ್ ಅಥವಾ ಕೈಗಾರಿಕೆಗಳಿಗೆ ಹೂಡಿಕೆ ಮಾಡುವುದಿದ್ದರೆ ಕಾಪು ಚಾರಿಟೇಬಲ್ ಟ್ರಸ್ಟ್ ಸಹಕಾರವನ್ನು ನೀಡುತ್ತದೆ ಎಂದು ಹೇಳಿದರು. ಕಾಪುವಿನ ಅಮ್ಮನ ಸನ್ನಿಧಾನದಲ್ಲಿ ಲೋಕಕಲ್ಯಾಣರ್ಥವಾಗಿ ಜರಗುತ್ತಿರುವ ನವದುರ್ಗಾ ಲೇಖನ ಯಜ್ಞದ ಪುಸ್ತಕದೊಂದಿಗೆ ಅಮ್ಮನ ಪ್ರಸಾದವನ್ನು ಒಂಬತ್ತು ಜನರಿಗೆ ನೀಡಿ ಅವರನ್ನು ಯು.ಎಸ್.ಎ ಸಿಯಾಟಲ್ ನ ಕಾಪು ಕ್ಷೇತ್ರ ಮಾತೃ ವೈಭವ – ಸೇವಾ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಪ್ರಥಮವಾಗಿ ಕಾಪು ಕ್ಷೇತ್ರ ಮಾತೃ ವೈಭವ ಸೇವಾ ಸಮಿತಿಗೆ ಚಾಲನೆ ನೀಡಲಾಯಿತು ಮತ್ತು ಅಮೇರಿಕಾದಲ್ಲಿ ಈಗಾಗಲೇ ಇರುವ ಸಮಿತಿಯನ್ನು ಅಧ್ಯಕ್ಷ ಭಾಸ್ಕರ್ ಶೇರಿಗಾರ್ ಬೋಸ್ಟನ್ ನೇತೃತ್ವದಲ್ಲಿ ಕಾಪು ಕ್ಷೇತ್ರ ಮಾತೃ ವೈಭವ ಸೇವಾ ಸಮಿತಿ – ಅಮೇರಿಕಾ ಘಟಕ ಎಂದು ಮರುನಾಮಕರಣಗೊಳಿಸಲಾಯಿತು. ದ್ವಿತೀಯ, ತೃತೀಯ ಹಂತದ ಕಾಮಗಾರಿಗೂ ನಾವೆಲ್ಲರೂ ಶ್ರಮಿಸಬೇಕು ಇದಕ್ಕಾಗಿ ಕಾಪು ಚಾರಿಟೇಬಲ್ ಟ್ರಸ್ಟ್ ಮುಖಾಂತರ ಪ್ರಪಂಚದಾದ್ಯಂತ ಇರುವ ಸಮಿತಿಗಳನ್ನು ಇನ್ನಷ್ಟು ಬಲಪಡಿಸುವ ಯೋಜನೆಯು ನಮ್ಮ ಮುಂದಿದೆ ಎಂದರು.

ಬಂಟ್ಸ್ ಅಸೋಸಿಯೇಷನ್ ಆಫ್ ನಾರ್ಥ್ ಅಮೇರಿಕಾ ಇದರ ಅಧ್ಯಕ್ಷರಾದ ಮಂಜುನಾಥ್ ಆರ್. ಶೆಟ್ಟಿ, ಉಪಾಧ್ಯಕ್ಷರಾದ ಹಿತೇಶ್ ಶೆಟ್ಟಿ, ಸದಸ್ಯರಾದ ಸುಮನಾ ನಟರಾಜ್ ಶೆಟ್ಟಿ, ಉಪಾಧ್ಯಕ್ಷರಾದ ರಘು ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಮೀತ ಶೆಟ್ಟಿ, ಸದಸ್ಯರಾದ ಶಾಮ ಶೆಟ್ಟಿ, ಉಪಾಧ್ಯಕ್ಷರಾದ ಸೀಮಾ ಶೆಟ್ಟಿ, ಕಾಪು ದೇವಿಪ್ರಸಾದ್ ಕನ್ಸ್ಟ್ರಕ್ಷನ್ ಪ್ರೈ. ಲಿ ಆಡಳಿತ ನಿರ್ದೇಶಕರಾದ ಬೀನಾ ವಿ. ಶೆಟ್ಟಿ, ಸದಸ್ಯರುಗಳಾದ ಅನನ್ಯ ಶೆಟ್ಟಿ, ಲಕ್ಷ್ಮಿ ಶೆಟ್ಟಿ ಮತ್ತು ಪವಿತ್ರ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಧುಸೂದನ್ ಹೇರೂರು ದಂಪತಿಗಳಿಗೆ ಸನ್ಮಾನ

ಕಟಪಾಡಿ, ಆ.6: ಉಡುಪಿ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ...

ತೋನ್ಸೆ (ಕೆಮ್ಮಣ್ಣು) ಗ್ರಾಮ ಪಂಚಾಯತ್: ಸಾರ್ವಜನಿಕರ ಅಹವಾಲು ಸ್ವೀಕಾರ

ಉಡುಪಿ, ಆ.6: ತೋನ್ಸೆ ಗ್ರಾಮ ಪಂಚಾಯತ್ ಕಚೇರಿಗೆ ಶಾಸಕ ಯಶ್ಪಾಲ್ ಸುವರ್ಣ...

ಆಗಸ್ಟ್ -ಸೆಪ್ಟಂಬರ್ ಮಾಹೆಯ ಪಡಿತರ ಒಂದೇ ಬಾರಿಗೆ ವಿತರಣೆ : ಪ್ರತ್ಯೇಕ ಬಯೋಮೆಟ್ರಿಕ್ ಕಡ್ಡಾಯ

ಉಡುಪಿ, ಆ.6: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂತ್ಯೋದಯ ಮತ್ತು...

ತೆಂಕನಿಡಿಯೂರು ಕಾಲೇಜು: ಹೆಚ್ಐವಿ/ ಏಡ್ಸ್ ಜಾಗೃತಿ ಕಾರ್ಯಕ್ರಮ

ಮಲ್ಪೆ, ಆ.6: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...
error: Content is protected !!