Friday, September 18, 2026
Friday, September 18, 2026

ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ

ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ

Date:

ಉಡುಪಿ, ಜು.15: ಅಂತರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರಾಗೃಹದಲ್ಲಿನ 145 ಖೈದಿಗಳಿಗೆ ಮಂಗಳವಾರ ಟಿ.ಬಿ, ಎಕ್ಸ-ರೇ, ಐ.ಸಿ.ಟಿ.ಸಿ, ಹೆಪಟೈಟಿಸ್-ಬಿ ಮತ್ತು ಸಿ-ಡ್ರಗ್ ಟೆಸ್ಟ್, ರಕ್ತದೊತ್ತಡ, ಮಧುಮೇಹ, ಸಿಪ್ಲಿಸ್, ಸಾಮಾನ್ಯ ತಪಾಸಣೆ ಮತ್ತು ಉಪಚಾರವನ್ನು ಹಾಗೂ ಮಾದಕ ವಸ್ತು ಪತ್ತೆ ಹಚ್ಚುವ ಶಿಬಿರವನ್ನು ಆಯೋಜಿಸಲಾಯಿತು. ಸಂಸ್ಥೆಯ ಅಧೀಕ್ಷಕ ವಿಜಯಕುಮಾರ ದಿ. ಚವ್ಹಾಣ್ ಮಾತನಾಡಿ, ಖೈದಿಗಳ ಆರೋಗ್ಯ ತಪಾಸಣೆ ಮತ್ತು ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ಶಿಬಿರದ ಪ್ರಯೋಜನ ಪಡೆಯಲು ಹೆಚ್ಚಿನ ಅರಿವು ಮೂಡಿಸಬೇಕು. ಖೈದಿಗಳು ಮತ್ತು ಸಿಬ್ಬಂದಿಗಳು ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯ ಡಾ.ವಿಶ್ವಾಸ್ ಶೆಟ್ಟಿ, ಕೋಟ ಸಮುದಾಯ ಆರೋಗ್ಯ ಕೇಂದ್ರದ ಡಾ.ಪ್ರಭು ಮತ್ತು ವೈದ್ಯಕೀಯ ತಂಡದವರು ಆರೋಗ್ಯ ತಪಾಸಣೆ ನಡೆಸಿದರು. ಮಾದಕ ದ್ರವ್ಯ ಪತ್ತೆಹಚ್ಚುವ ತಪಾಸಣೆಯಲ್ಲಿ 145 ಖೈದಿಗಳ ವರದಿಯು ನೆಗೆಟಿವ್ ಬಂದಿದ್ದು ವೈದ್ಯರ ತಂಡವು ಸಂತಸ ವ್ಯಕ್ತಪಡಿಸಿ, ಜಿಲ್ಲಾ ಕಾರಾಗೃಹವನ್ನು ತಂಬಾಕು ಮುಕ್ತ ಕಾರಾಗೃಹ ಎಂದು ಘೋಷಿಸಲು ಮನವಿ ಮಾಡಿದರು. ಕಾರಾಗೃಹದ ಅಧಿಕಾರಿಗಳಾದ ಡಿ.ಆರ್.ಕೊಣಿ, ಎಸ್.ಎ.ಶಿರೋಳ, ಆರ್.ಎಸ್.ಲಮಾಣ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮುಜರಾಯಿ ಸಚಿವ ಕೆ ಎಸ್ ಬಸವಂತಪ್ಪ ಕೊಡವೂರು ದೇವಳಕ್ಕೆ ಭೇಟಿ

ಉಡುಪಿ, ಸೆ.16: ಇತಿಹಾಸ ಪ್ರಸಿದ್ಧ ಕೊಡವೂರು ಶ್ರೀ ಶಂಕರನಾರಾಯಣ ದೇವಳಕ್ಕೆ ಕರ್ನಾಟಕ...

ವಿಶ್ವ ಪ್ರಥಮ ಚಿಕಿತ್ಸಾ ದಿನಾಚರಣೆ

ಮಂಗಳೂರು, ಸೆ.16: ರಥಬೀದಿಯ ಡಾ. ಪಿ. ದಯಾನಂದ ಪೈ–ಪಿ. ಸತೀಶ ಪೈ...

ಸಿದ್ಧಾಂತ್ ಫೌಂಡೇಶನ್ ವತಿಯಿಂದ ಬೋಧನೆಯಲ್ಲಿ ಕೃತಕ ಬುದ್ದಿ ಮತ್ತೆಯ ತರಬೇತಿ

ಮಂಗಳೂರು, ಸೆ.16: ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ಧಾಂತ್ ಫೌಂಡೇಶನ್...

ಮಲ್ಪೆ- ಕರಾವಳಿ ಜಂಕ್ಷನ್ ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.16: ರಾಷ್ಟ್ರೀಯ ಹೆದ್ದಾರಿ 169 ಎ ರ ಮಲ್ಪೆಯಿಂದ ಕರಾವಳಿ...
error: Content is protected !!