Saturday, July 18, 2026
Saturday, July 18, 2026

ನೀಟ್-2026ರ ಫಲಿತಾಂಶ- ಜ್ಞಾನಸುಧಾದ ಮೇಧಾನ್ಶ್ ಎನ್.ಬಿ ನೀಟ್‌ನಲ್ಲಿ 680 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 267ನೇ ರ‍್ಯಾಂಕ್‌ನೊಂದಿಗೆ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಥಮ; ಜ್ಞಾನಸುಧಾದ ಮೂವರು ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಸಾವಿರದೊಳಗಿನ ರ‍್ಯಾಂಕ್

ನೀಟ್-2026ರ ಫಲಿತಾಂಶ- ಜ್ಞಾನಸುಧಾದ ಮೇಧಾನ್ಶ್ ಎನ್.ಬಿ ನೀಟ್‌ನಲ್ಲಿ 680 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 267ನೇ ರ‍್ಯಾಂಕ್‌ನೊಂದಿಗೆ ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಪ್ರಥಮ; ಜ್ಞಾನಸುಧಾದ ಮೂವರು ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಸಾವಿರದೊಳಗಿನ ರ‍್ಯಾಂಕ್

Date:

ಉಡುಪಿ, ಜು.17: ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ ನೀಟ್-2026ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕ್ ಪಡೆದಿದ್ದಾರೆ. 680 ಅಂಕ ಪಡೆದು ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಮೇಧಾನ್ಶ್ ಎನ್. ಬಿ ಜ್ಞಾನಸುಧಾ ಸಂಸ್ಥೆಯ ಮೇಧಾನ್ಶ್ ಎನ್.ಬಿ 99.9841992 ಪರ್ಸಂಟೈಲ್‌ನೊಂದಿಗೆ 720ರಲ್ಲಿ 680 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ 267ನೇ ರ‍್ಯಾಂಕನ್ನು ಹಾಗೂ ಕೆಟಗರಿ ವಿಭಾಗದಲ್ಲಿ 178ನೇ ರ‍್ಯಾಂಕ್ ಪಡೆದು, ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಈ ಹಿಂದೆ ಪ್ರಕಟಗೊಂಡ ಜೆಇಇ ಮೈನ್ (ಬಿ.ಟೆಕ್) ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿಯೂ 99.6766462 ಪರ್ಸಂಟೈಲನ್ನು ಪಡೆದುಕೊಂಡು ಜನರಲ್ ಮೆರಿಟ್ ವಿಭಾಗದಲ್ಲಿ 5259ನೇ ರ‍್ಯಾಂಕ್ ತನ್ನದಾಗಿಸಿಕೊಂಡಿದ್ದರು. ಇವರು ನಿಟ್ಟೆ ಇಂಜಿನಯರಿಂಗ್ ಕಾಲೇಜಿನ ಡೀನ್ ಆಗಿರುವ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡಾ. ನರಸಿಂಹ ಕೆ ಬೈಲ್‌ಕೇರಿ ಹಾಗೂ ಇಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಪದ್ಮಾವತಿ ಕೆ. ದಂಪತಿಗಳ ಸುಪುತ್ರರಾಗಿದ್ದಾರೆ. ಸಾಧಕ ವಿದ್ಯಾರ್ಥಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 2.5ಲಕ್ಷ ರೂಪಾಯಿ ಪ್ರೋತ್ಸಾಹಧನವನ್ನು ಘೋಷಿಸಿದ್ದಾರೆ.

ಮನೋಜ್ ಎಂ 670 ಅಂಕದೊಂದಿಗೆ ಜನರಲ್‌ಮೆರಿಟ್‌ನಲ್ಲಿ 519ನೇರ‍್ಯಾಂಕ್ ಜ್ಞಾನಸುಧಾ ಸಂಸ್ಥೆಯ ವಿದ್ಯಾರ್ಥಿಯಾದ ಮನೋಜ್ ಎಂ 99.9720985 ಪರ್ಸಂಟೈಲ್ ಗಳಿಸಿ 720ರಲ್ಲಿ 670 ಅಂಕ ಪಡೆದು, ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ 519ನೇ ರ‍್ಯಾಂಕನ್ನು (ಕೆಟಗರಿ ವಿಭಾಗದಲ್ಲಿ 327ನೇ ರ‍್ಯಾಂಕ್) ತನ್ನದಾಗಿಸಿಕೊಂಡಿದ್ದಾರೆ. ಈ ಹಿಂದೆ ಪ್ರಕಟಗೊಂಡ ಜೆಇಇ ಮೈನ್ (ಬಿ.ಟೆಕ್) ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿಯೂ 99.0897721 ಪರ್ಸಂಟೈಲನ್ನು ಪಡೆದಿರುವುದನ್ನು ಸ್ಮರಿಸಿಕೊಳ್ಳಬಹುದು. ಇವರು ಕಡೂರು ತಾಲೂಕಿನ ಜೋಡಿಹೋಚಿಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಮಂಜುನಾಥ ಇ ಹಾಗೂ ಗೌರಮ್ಮ ಕೆ ದಂಪತಿಗಳ ಸುಪುತ್ರರಾಗಿದ್ದಾನೆ.

ಸಾಧಕ ವಿದ್ಯಾರ್ಥಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ. ಅನಿರುದ್ಧ್ ರವಿರಾಜ ಉಡುಪ 665 ಅಂಕದೊಂದಿಗೆ ಜನರಲ್‌ಮೆರಿಟ್‌ನಲ್ಲಿ 701ನೇ ರ‍್ಯಾಂಕ್ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅನಿರುದ್ಧ್ ಆರ್ ಉಡುಪ 99.9629481 ಪರ್ಸಂಟೈಲ್‌ನೊಂದಿಗೆ ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ವಿಭಾಗದಲ್ಲಿ 701ನೇ ರ‍್ಯಾಂಕನ್ನು (ಕೆಟಗರಿ ವಿಭಾಗದಲ್ಲಿ 425ನೇರ‍್ಯಾಂಕ್) ತನ್ನದಾಗಿಸಿಕೊಂಡಿದ್ದಾರೆ. ಈ ಹಿಂದೆ ಪ್ರಕಟಗೊಂಡ ಜೆಇಇ ಮೈನ್ (ಬಿ.ಟೆಕ್) ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿಯೂ 99.6130095 ಪರ್ಸಂಟೈಲನ್ನು ಪಡೆದು ಜನರಲ್ ಮೆರಿಟ್ ವಿಭಾಗದಲ್ಲಿ 6307ನೇ ರ‍್ಯಾಂಕ್ ಗಳಿಸಿಕೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು. ಇವರು ಕರ್ನಾಟಕ ಮಿಲ್ಕ್ ಫೆಡರೇಶನ್ (ಕೆ.ಎಂ.ಎಫ್) ಇದರ ಜಾಯಿಂಟ್ ಡೈರೆಕ್ಟರ್ ಡಾ. ರವಿರಾಜ್ ಉಡುಪ ಹಾಗೂ ಅನುಪಮ ಉಡುಪ ದಂಪತಿಗಳ ಸುಪುತ್ರರಾಗಿದ್ದಾರೆ. ಸಾಧಕ ವಿದ್ಯಾರ್ಥಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ.

ಈ ಬಾರಿಯ ನೀಟ್ 2026ರ ಪರೀಕ್ಷೆ ಬರೆದ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಒಟ್ಟು 528 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕವನ್ನು, 59 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ ಅಂಕವನ್ನು ಹಾಗೂ 133 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕವನ್ನು ಪಡೆದಿರುತ್ತಾರೆ.

ಸಂಸ್ಥೆಯ 260 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ. ಮೇಧಾನ್ಶ್ ಎನ್. ಬಿ 680 ಅಂಕ (99.9841992 ಪರ್ಸಂಟೈಲ್, 267ನೇರ‍್ಯಾಂಕ್, ಕೆಟಗರಿ – 178 ರ‍್ಯಾಂಕ್) ಮನೋಜ್ ಎಂ 670 ಅಂಕ (99.9720985 ಪರ್ಸಂಟೈಲ್, 519ನೇ ರ‍್ಯಾಂಕ್, ಕೆಟಗರಿ – 327ನೇ ರ‍್ಯಾಂಕ್), ಅನಿರುದ್ಧ್ ಆರ್ ಉಡುಪ 665 ಅಂಕ (99.9629481 ಪರ್ಸಂಟೈಲ್, 701ನೇರ‍್ಯಾಂಕ್ ಕೆಟಗರಿ -425 ರ‍್ಯಾಂಕ್), ಜ್ಞಾನ್‌ದೀಪ್ ವಿ ಶೆಟ್ಟಿ 645 ಅಂಕ (99.905645 ಪರ್ಸಂಟೈಲ್, 1780ನೇ ರ‍್ಯಾಂಕ್, ಕೆಟಗರಿ 147 ರ‍್ಯಾಂಕ್), ಪೃಥ್ವಿ ಕೆ 637 ಅಂಕ (99.8679431 ಪರ್ಸಂಟೈಲ್, 2545ನೇ ರ‍್ಯಾಂಕ್, ಕೆಟಗರಿ – 928ನೇ ರ‍್ಯಾಂಕ್), ಶಂಭು ಬಿ.ಕೆ. 630 ಅಂಕ (99.8214406 ಪರ್ಸಂಟೈಲ್, 3459ನೇ ರ‍್ಯಾಂಕ್, ಕೆಟಗರಿ – 1688 ರ‍್ಯಾಂಕ್), ಪ್ರಜ್ವಲ್ ಎಸ್ ಆನಂದ್ 620 ಅಂಕ (99.7406364 ಪರ್ಸಂಟೈಲ್, 5033 ನೇ ರ‍್ಯಾಂಕ್, ಕೆಟಗರಿ – 137ನೇ ರ‍್ಯಾಂಕ್), ಸಾಯಿಪ್ರಸಾದ ಎಸ್ ಗವಾಡೆ 617 ಅಂಕ (99.7121349 ಪರ್ಸಂಟೈಲ್, 5687ನೇ ರ‍್ಯಾಂಕ್, ಕೆಟಗರಿ -589ನೇ ರ‍್ಯಾಂಕ್), ಪಿ ಅಖಿಲ್‌ಶರ್ಮಾ 611 ಅಂಕ (99.6453314 ಪರ್ಸಂಟೈಲ್, 6933ನೇ ರ‍್ಯಾಂಕ್), ಆರವ್ ಹೆಗ್ಡೆ 607 ಅಂಕ (99.5943287 ಪರ್ಸಂಟೈಲ್, 8019ನೇ ರ‍್ಯಾಂಕ್), ಗಗನ್ ಬಿ 605 ಅಂಕ (99.5671273 ಪರ್ಸಂಟೈಲ್, 8647 ನೇ ರ‍್ಯಾಂಕ್), ಪ್ರಥಮ್ ಎಂ ನಾಯಕ್ 604 ಅಂಕ (99.5537766 ಪರ್ಸಂಟೈಲ್, 8695ನೇ ರ‍್ಯಾಂಕ್), ಎನ್ ಶ್ರೇಯಸ್ 603 ಅಂಕ (99.5397258 ಪರ್ಸಂಟೈಲ್, 9124ನೇರ‍್ಯಾಂಕ್), ಸುಜಲ್ ಗಂಗಾಧರ್ ಜೆ 601 ಅಂಕ (99.5092242 ಪರ್ಸಂಟೈಲ್, 9495ನೇ ರ‍್ಯಾಂಕ್) ಹಾಗೂ ದಿಗಂತ್ ಎಚ್ ಎಸ್ 600 ಅಂಕ (99.4918733 ಪರ್ಸಂಟೈಲ್, 9915ನೇ ರ‍್ಯಾಂಕ್)

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರು, ಟ್ರಸ್ಟಿಗಳು, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿವರ್ಗ ಸಹಿತ ಜ್ಞಾನಸುಧಾ ಪರಿವಾರ ಅಭಿನಂದಿಸಿ, ಸಂಭ್ರಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೃದಯ ಸ್ತಂಭನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಎಕ್ಮೋ ಚಿಕಿತ್ಸೆ ನೀಡಿ ಜೀವ ಉಳಿಸಿದ ಕಸ್ತೂರ್ಬಾ ಆಸ್ಪತ್ರೆ

ಮಣಿಪಾಲ, ಜು.17: ತಮ್ಮ ನಿವಾಸದಲ್ಲಿ ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಕುಸಿದು...

ರೈಲ್ವೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲು ಲಿಫ್ಟ್ ವ್ಯವಸ್ಥೆ ಜಾರಿ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜು.17: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣಗಳಲ್ಲಿ...

ಕಲ್ಯಾಣಪುರ ಲಯನ್ಸ್ ಕ್ಲಬ್ – ಜಿಲ್ಲೆ-317ಸಿ – ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ, ಜು.17: ಕಲ್ಯಾಣಪುರ ಲಯನ್ಸ್ ಕ್ಲಬ್, ಜಿಲ್ಲೆ 317ಸಿ ನೂತನ ಪದಾಧಿಕಾರಿಗಳನ್ನು...

ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ತಪಾಸಣೆ

ಉಡುಪಿ, ಜು.15: ಅಂತರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನದ ಅಂಗವಾಗಿ ಜಿಲ್ಲಾ...
error: Content is protected !!