Tuesday, July 14, 2026
Tuesday, July 14, 2026

ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.): ಪೂರ್ವ ತಯಾರಿ ಸಭೆ

ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆ (ರಿ.): ಪೂರ್ವ ತಯಾರಿ ಸಭೆ

Date:

ಮಣಿಪಾಲ, ಜು.14: ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆ(ರಿ.) ಉಡುಪಿ ಜಿಲ್ಲೆ ನೇತೃತ್ವದಲ್ಲಿ ವಯೋವಂದನಾ ಆತಿಥ್ಯ ಗೃಹ ನಿರ್ಮಾಣ ಯೋಜನೆ ಮತ್ತು ಜಿಎಸ್‌ಬಿ ಸಾಮಾಜಿಕ ಜಾಗೃತಿ ಕಾರ್ಯಗಾರದ ಪೂರ್ವ ತಯಾರಿ ಸಭೆ ಹೋಟೆಲ್ ಮಧುವನ ಸೆರಾಯಿ ಮಣಿಪಾಲದ ಮೊದಲನೇ ಮಹಡಿಯಲ್ಲಿ ನಡೆಯಿತು.

ಜಿ.ಎಸ್.ಬಿ ಸಮಾಜ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ, ಸಾಣೂರು ನರಸಿಂಹ ಕಾಮತ್ ರವರು ಕಳೆದ 14 ವರ್ಷಗಳಿಂದ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಪರಿಕಲ್ಪನೆ ಮತ್ತು ಸಂಯೋಜನೆ ಹಾಗೂ ನೇತೃತ್ವದಲ್ಲಿ ನಡೆದು ಬಂದಿರುವ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳು, ಕುಟುಂಬ ಚೈತನ್ಯ ನಿಧಿ ಆರೋಗ್ಯ ಚೈತನ್ಯ ನಿಧಿ, ವಿದ್ಯಾ ಪೋಷಕ ನಿಧಿ, ಶೈಕ್ಷಣಿಕ ದತ್ತು ಯೋಜನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಜಿ ಎಸ್ ಬಿ ಉಚಿತ ಗೃಹ ನಿರ್ಮಾಣ ಯೋಜನೆ, ರಾಷ್ಟ್ರರಕ್ಷಾ ನಿಧಿ, ಉಚಿತ ಕೌಟುಂಬಿಕ ಆರೋಗ್ಯ ವಿಮಾ ಯೋಜನೆ ಮುಂತಾದ ಸಮಾಜಮುಖಿ ಕಾರ್ಯ ಯೋಜನೆಗಳ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸಂಚಾಲಕರಾದ
ಆರ್. ವಿವೇಕಾನಂದ ಶೆಣೈ ಅವರು, ಅಗಸ್ಟ್ 1 ಶನಿವಾರದಂದು ಮಣಿಪಾಲದಲ್ಲಿ ನಡೆಸಲು ಉದ್ದೇಶಿಸಿರುವ ಜಿಎಸ್‌ಬಿ ಸಾಮಾಜಿಕ ಜಾಗೃತಿ ಕಾರ್ಯಗಾರದ ಅವಶ್ಯಕತೆ ಮತ್ತು ಮಹತ್ವಗಳನ್ನು ವಿವರವಾಗಿ ತಿಳಿಸಿದರು.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ವಯೋವಂದನ ಆತಿಥ್ಯ ಗೃಹ ನಿರ್ಮಾಣ ಯೋಜನೆಯ ಕಾರ್ಯಪ್ರಗತಿ ಮತ್ತು ಸಾಮಾಜಿಕ ಭದ್ರತಾ ಸದುದ್ದೇಶದಿಂದ ಆರಂಭಿಸಲು ಯೋಚಿಸಿರುವ ವಯೋವಂದನಾ ಹೆಲ್ಪ್ ಲೈನ್
ಯೋಜನೆಯ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಣಿಪಾಲದ ಇಂಜಿನಿಯರ್ ಕೋಟೇಶ್ವರ ಮಾಧವರಾಯ ಕಾಮತ್, ಹೋಟೆಲ್ ಮಧುವನ ಸೆರಾಯಿ ಮಾಲಕರಾದ ದಾಮೋದರ್ ನಾಯಕ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಕಳೆದ ಒಂದೂವರೆ ದಶಕದ ಸುಧೀರ್ಘಾವಧಿಯಲ್ಲಿ ಎಲ್ಲಾ ರೀತಿಯ ಅಡ್ಡಿ ಆತಂಕ ಸವಾಲುಗಳನ್ನು ಎದುರಿಸಿ ಇಂದು ಸಮಾಜದ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ನಡೆಸುತ್ತಿರುವ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಸಮಾಜದ ಎಲ್ಲಾ ಬಂಧುಗಳು ಸಹಕರಿಸಿ ಪ್ರೋತ್ಸಾಹಿಸುತ್ತಿರುವುದು ಸಂತೋಷದ ವಿಚಾರ. ವೇದಿಕೆಯ ಎಲ್ಲಾ ಕೆಲಸ ಕಾರ್ಯಗಳಿಗೆ ಸಮಾಜದ ಒಗ್ಗಟ್ಟಿನ ಪ್ರತಿಸ್ಪಂದನೆ ಸಿಕ್ಕಿದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಮುಂದಿನ 15 ದಿನಗಳಲ್ಲಿ ಮಣಿಪಾಲ ಪರಿಸರದ ಅನಂತನಗರ, ಹುಡ್ಕೋ ಕಾಲನಿ, ಈಶ್ವರ ನಗರ, ದಶರಥ ನಗರ, ಶಾಂತಿನಗರ ಮತ್ತು ಹತ್ತಿರದ ಇಂದ್ರಾಳಿ ಪರಿಸರದ ಎಲ್ಲಾ ಜಿ ಎಸ್ ಬಿ ಸಮಾಜ ಬಾಂಧವರ ಮನೆ ಮನೆಗೆ ತೆರಳಿ ಆಮಂತ್ರಣ ಪತ್ರಿಕೆಯನ್ನು ನೀಡಿ ಆಗಸ್ಟ್ 1 ಶನಿವಾರ ನಡೆಯಲಿರುವ ಜಿ ಎಸ್ ಬಿ ಸಾಮಾಜಿಕ ಜಾಗೃತಿ ಕಾರ್ಯಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ವಿನಂತಿಸಲು ಸ್ವಯಂಸೇವಕರು ಮತ್ತು ಕಾರ್ಯಕರ್ತರ ಯಾದಿಯನ್ನು ತಯಾರಿಸಲಾಯಿತು.

ವೇದಿಕೆಯಲ್ಲಿ ಮಣಿಪಾಲ ಪರಿಸರದ ಹಿರಿಯ ಸಮಾಜ ಸೇವಕರಾದ ಅನ್ನಪೂರ್ಣ ದೇವೇಂದ್ರ ಪ್ರಭು ಉಪಸ್ಥಿತರಿದ್ದರು. ನಾಗೇಶ್ ನಾಯಕ್ ವಂದಿಸಿದರು.

ಮಣಿಪಾಲ, ಪರ್ಕಳ ಮತ್ತು ಉಡುಪಿ ಪರಿಸರದ ನೂರಾರು ಸಮಾನ ಮನಸ್ಕ ಜಿ ಎಸ್ ಬಿ ಸಮಾಜ ಬಾಂಧವರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗ್ಯಾನ್ ಜಿ ಪಾಲನ್ ಕೊಡವೂರು ಇವರಿಗೆ ‘ಇಸ್ಕಾನ್ ವ್ಯಾಲ್ಯೂ ಎಜುಕೇಶನ್’ ಪುರಸ್ಕಾರ

ಉಡುಪಿ, ಜು.14: ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಗ್ಯಾನ್ ಜಿ...

ಮೌಲ್ಯಸುಧಾ: ಸುವರ್ಣ ಮಾಲಿಕೆ ಸಂಭ್ರಮ

ಕಾರ್ಕಳ, ಜು.14: ಶಿಕ್ಷಣದ ಜೊತೆಗೆ ಉತ್ತಮ ಜೀವನ ಮೌಲ್ಯವನ್ನು ನೀಡುವ ಮೌಲ್ಯಸುಧಾ...

ಮಾಹೆ ಮಣಿಪಾಲ: ವಿಶೇಷ ಕಾರ್ಯಾಗಾರ

ಮಣಿಪಾಲ, ಜು.14: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ...

ಉಡುಪಿ ಜ್ಞಾನಸುಧಾದಲ್ಲಿ ಪ್ರತಿಭಾ ಪುರಸ್ಕಾರ: 39.2 ಲಕ್ಷ ವಿದ್ಯಾರ್ಥಿವೇತನ ವಿತರಣೆ

ಉಡುಪಿ, ಜು.14: ಜ್ಞಾನಸುಧಾ ಶಿಕ್ಷಣ ಸಂಸ್ಥೆಯಿಂದ ಒಂದು ವರ್ಷಕ್ಕೆ 227 ವಿದ್ಯಾರ್ಥಿಗಳು...
error: Content is protected !!