Wednesday, July 15, 2026
Wednesday, July 15, 2026

ಮೌಲ್ಯಸುಧಾ: ಸುವರ್ಣ ಮಾಲಿಕೆ ಸಂಭ್ರಮ

ಮೌಲ್ಯಸುಧಾ: ಸುವರ್ಣ ಮಾಲಿಕೆ ಸಂಭ್ರಮ

Date:

ಕಾರ್ಕಳ, ಜು.14: ಶಿಕ್ಷಣದ ಜೊತೆಗೆ ಉತ್ತಮ ಜೀವನ ಮೌಲ್ಯವನ್ನು ನೀಡುವ ಮೌಲ್ಯಸುಧಾ ಸರಣಿ ಮಾಲಿಕೆ ಸುವರ್ಣ ಸಂಚಿಕೆಯ ಮೂಲಕ ದಾಪುಗಾಲಿಟ್ಟಿರುವುದು ಜ್ಞಾನಸುಧಾದ ಬದ್ಧತೆಗೆ ಸಾಕ್ಷಿಯಾಗಿದೆ. ಇಲ್ಲಿ ಸಿಗುವ ಎಲ್ಲಾ ಜ್ಞಾನವನ್ನು ಸಂಪಾದಿಸಿಕೊಂಡು ಉತ್ತಮ ನಾಗರಿಕರಾಗಿ ಮನೆಗೆ, ಕುಟುಂಬಕ್ಕೆ, ಊರಿಗೆ, ನಾಡಿಗೆ ಹಾಗೂ ದೇಶಕ್ಕೆ ಒಳ್ಳೆಯ ಆಸ್ತಿಯಾಗಿ ಮೂಡಿಬನ್ನಿ ಎಂದು ಸಾಣೂರಿನ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಸರಣಿ ಮಾಲಿಕೆಯ ಸುವರ್ಣ ಸಂಚಿಕೆಯ 50ನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭ ವಿದ್ವಾಂಸ ಮುನಿರಾಜ್ ರೆಂಜಾಳ, ನಿವೃತ್ತ ಪ್ರಾಂಶುಪಾಲರಾದ ಬೇಬಿಈಶ್ವರ ಮಂಗಲ, ನಿವೃತ್ತ ಶಿಕ್ಷಕ ಜಗದೀಶ್, ಉದ್ಯಮಿ ದೇವೇಂದ್ರ ನಾಯಕ್, ಪತ್ರಕರ್ತರಾದ ರಾಮಚಂದ್ರ ಬರೆಪ್ಪಾಡಿ, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿಗಳಾದ ವಿದ್ಯಾವತಿ ಎಸ್ ಶೆಟ್ಟಿ, ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರು ದಿನೇಶ್ ಎಂ ಕೊಡವೂರು, ಉಪಪ್ರಾಂಶುಪಾಲರಾದ ಸಾಹಿತ್ಯ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಮಣಿಪಾಲ ಜ್ಞಾನಸುಧಾದ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ರವಿ ಜಿ., ಅಜೆಕಾರು ಜ್ಞಾನಸುಧಾದ ಪ್ರಾಂಶುಪಾಲ ಸಂತೋಷ್, ಪ್ರೌಢಶಲೆಯ ಉಪಪ್ರಾಂಶುಪಾಲರಾದ ಆರತಿ ಉಪಸ್ಥಿತರಿದ್ದರು.

ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಆಂಗ್ಲಭಾಷ ಉಪನ್ಯಾಸಕಿ ಶಮಿತಾ ನಿರೂಪಿಸಿ ವಂದಿಸಿದರು.

ಸನಾತನ ನಾಟ್ಯಾಲಯದಿಂದ ಸನಾತನ ರಾಷ್ಟ್ರಾಂಜಲಿ: ಮೌಲ್ಯಸುಧಾದ ಸುವರ್ಣ ಮಾಲಿಕೆಯಲ್ಲಿ ರಾಜ್ಯದಲ್ಲಿ ವಿಭಿನ್ನ ನೃತ್ಯ ಸಂಸ್ಥೆಯಾಗಿ ಗುರುತಿಸಿಕೊಂಡು ಹಾಗೂ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಸೇವೆಯನ್ನು ನೀಡುತ್ತಾ ಬಂದಿರುವ ಹೆಮ್ಮಯ ನೃತ್ಯ ಸಂಸ್ಥೆಯಾಗಿರುವ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಸುಂದರ ಕಾರ್ಯಕ್ರಮ ಮೂಡಿ ಬಂತು. ನಾಟ್ಯಾಲಯದ ನೃತ್ಯಗುರುಗಳಾದ ವಿದುಷಿ ಶ್ರೀಲತಾ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಲತೇಶ್ ಬಾಕ್ರಬೈಲು ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದಲ್ಲಿ ಭಾರತದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಜು.14: ರಾಜ್ಯದಲ್ಲಿ ಭಾರತದ ಮೊದಲ ಸರ್ಕಾರಿ ಕೃತಕ ಬುದ್ಧಿಮತ್ತೆ (ಎಐ)...

ಜು.17: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ಜು.14: ಉಡುಪಿಯ ಆಕ್ಸಿಸ್ ಮ್ಯಾಕ್ಸ್ ಲೈಫ್ 2ನೇ ಮಹಡಿ ಪ್ರಗತಿ...

ತ್ಯಾಜ್ಯ ನೀರು ವೈಜ್ಞಾನಿಕವಾಗಿ ಸಂಸ್ಕರಿಸಲು ನಗರಸಭೆ ಸೂಚನೆ

ಉಡುಪಿ, ಜು.14: ಉಡುಪಿ ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್ಗಳ ವಸತಿ ಸಮುಚ್ಚಯ,...

ಕ್ರಿಯೇಟಿವ್‌ ನೀಟ್‌ ಅಕಾಡೆಮಿ

ಉಡುಪಿ, ಜು.14: ಶಿಕ್ಷಣ ಕ್ಷೇತ್ರದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅಸಾಮಾನ್ಯ ಸಾಧನೆ...
error: Content is protected !!