Sunday, July 26, 2026
Sunday, July 26, 2026

ಗಮನ ಸೆಳೆದ ಕಾವ್ಯ ಹಂದೆ ಅಭಿನಯದ ಏಕವ್ಯಕ್ತಿ ಪ್ರದರ್ಶನ

ಗಮನ ಸೆಳೆದ ಕಾವ್ಯ ಹಂದೆ ಅಭಿನಯದ ಏಕವ್ಯಕ್ತಿ ಪ್ರದರ್ಶನ

Date:

ಕೋಟ, ಜೂ.29: ಸುವಿಕಾ ಸಾಂಸ್ಕೃತಿಕ ಸಂಘಟನೆ, ಕೋಟ ಸಂಸ್ಥೆಯಿಂದ ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಮತ್ತು ಮೈಸೂರಿನ ಆರೋಹ ಕನ್ಸ್ಟ್ರಕ್ಷನ್ ಇವರ ಜಂಟಿ ಆಶ್ರಯದಲ್ಲಿ ದಿನಾಂಕ ಜೂನ್ 27 ಹಾಗೂ ಬೆಂಗಳೂರಿನ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕೋರಮಂಗಲದ ಇಂಡಿಯನ್ ಹೆರಿಟೇಜ್ ಅಕಾಡೆಮಿಯ ‘ಕಶ್ಯಪ’ ಸಭಾಂಗಣದಲ್ಲಿ ಜೂನ್ 28 ರಂದು ರಾಷ್ಟ್ರೀಯ ರಂಗನಿರ್ದೇಶಕ ಡಾ. ಶ್ರೀಪಾದ್ ಭಟ್ ಅವರ ಪರಿಕಲ್ಪನೆ ವಿನ್ಯಾಸ ನಿರ್ದೇಶನದಲ್ಲಿ ಕೋಟ ಕಾವ್ಯ ಹಂದೆ ಅಭಿನಯದ ಏಕವ್ಯಕ್ತಿ ಪ್ರದರ್ಶನ ‘ಹಕ್ಕಿ ಮತ್ತು ಅವಳು’ ಕಾವ್ಯಾಭಿನಯದ ಎರಡು ಪ್ರದರ್ಶನಗಳು ನಡೆದವು.

ಕನ್ನಡದಲ್ಲಿನ ಹಾಗೂ ಕನ್ನಡಕ್ಕೆ ಅನುವಾದ ಗೊಂಡಿರುವ ಆಯ್ದ ಕವನಗಳು ಕಥೆಗಳು ಮತ್ತು ಪ್ರಬಂಧಗಳನ್ನು ಆಧರಿಸಿದ ‘ಹಕ್ಕಿ ಮತ್ತು ಅವಳು’ ಹೆಣ್ಣಿನ ಅಸ್ತಿತ್ವ, ಸ್ವಾತಂತ್ರ್ಯ, ಬಿಡುಗಡೆಯ ಕನಸು, ಹಾಗೂ ಬದುಕಿನ ಸಂಕೀರ್ಣ ಬಂಧನಗಳನ್ನು ಕಲಾತ್ಮಕವಾಗಿ ಅನಾವರಣಗೊಳಿಸುವ ರಂಗ ಪ್ರಯೋಗವಾಗಿದೆ.

ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿಯ ಮುಖ್ಯಸ್ಥ ಚೆಲುವ ರಾಜು, ಮಾಜಿ ಕಾರ್ಪೊರೇಟರ್ ರಾಮ್ ಪ್ರಸಾದ್, ಆರೋಹ ಕನ್ಸ್ಟ್ರಕ್ಷನ್ ಎಂ. ಡಿ. ಅಭಿಜಿತ್ ಭಾರದ್ವಾಜ್, ಬೆಂಗಳೂರಿನ ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದ ಸಂವಹನ ನಿಕಾಯದ ಕನ್ನಡ ಉಪಕ್ರಮಗಳು ತಂಡದ ಸಹ ನಿರ್ದೇಶಕ ಎಸ್. ವಿ. ಮಂಜುನಾಥ್, ಕನ್ನಡ ಉಪಕ್ರಮ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಹೇರ್ಳೆ ಜಿ., ಉಪಸ್ಥಿತರಿದ್ದರು.

‘ಸುವಿಕಾ’ದ ಕುಮಾರಿ ಕಾವ್ಯ ಹಂದೆ ಅಭಿನಯಿಸಿ, ವಿನಿತ ಎಸ್. ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿ, ನೀನಾಸಂ ಮಧುಸೂದನ್ ಬೆಳಕಿನ ವಿನ್ಯಾಸ ಮಾಡಿದರು. ರಂಗ ಸಜ್ಜಿಕೆಯಲ್ಲಿ ಎಚ್. ಸುಜಯೀಂದ್ರ ಹಂದೆ ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!