Monday, July 27, 2026
Monday, July 27, 2026

ಸಾಹಿತ್ಯದ ಕಾಲಘಟ್ಟ ಯಾವುದೇ ಇರಲಿ; ಓದಿನಲ್ಲಿ ಆತ್ಮವಿಶ್ವಾಸವಿರಲಿ: ಡಾ. ಪಿ.ಬಿ. ಪ್ರಸನ್ನ

ಸಾಹಿತ್ಯದ ಕಾಲಘಟ್ಟ ಯಾವುದೇ ಇರಲಿ; ಓದಿನಲ್ಲಿ ಆತ್ಮವಿಶ್ವಾಸವಿರಲಿ: ಡಾ. ಪಿ.ಬಿ. ಪ್ರಸನ್ನ

Date:

ಉಡುಪಿ, ಜೂ.14: ಭಾಷಾ ಕಲಿಕೆಯ ಸಂದರ್ಭದಲ್ಲಿ ಶಿಕ್ಷಕ- ವಿದ್ಯಾರ್ಥಿಗಳಿಬ್ಬರಿಗೂ ಭಾಷೆಯ ಅರಿವಿನ ಅಗತ್ಯವಿದೆ. ಭಾಷಾ ಅಧ್ಯಾಪಕರು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿರಬೇಕು. ಹಳಗನ್ನಡ ಕಾವ್ಯದ ಓದಿನ ಸಂದರ್ಭದಲ್ಲಂತೂ ಭಾವಗಳು ಸೇರದಿದ್ದಾಗ ಓದು ನೀರಸವಾಗುತ್ತದೆ. ಪದಗಳ ಒಡೆಯುವಿಕೆ ಮುಖ್ಯವಾಗಿದ್ದು, ಎಚ್ಚರಿಕೆ ತಪ್ಪಿದಲ್ಲಿ ಅನರ್ಥ ಸಂಭವಿಸುತ್ತದೆ. ಕಾವ್ಯದ ಓದಿನ ಸಂದರ್ಭದಲ್ಲಿ ಅದಕ್ಕೆ ಬೇಕಾದ ಭಾವ, ಛಂದಸ್ಸು, ಸರಿಯಾಗಿ ಅಚ್ಚೊತ್ತಿದ ರೀತಿಯಲ್ಲಿ ಪ್ರಕಟವಾದಾಗ ಪರಿಣಾಮಕಾರಿ ಓದು ಸಾಧ್ಯ. ಸಾಹಿತ್ಯದ ಕಾಲಘಟ್ಟ ಯಾವುದೇ ಆಗಿರಲಿ; ಅದನ್ನು ಓದುವಾಗ ಆತ್ಮವಿಶ್ವಾಸದ ಅಗತ್ಯವಿದೆ. ಓದುವಿಕೆ ಗಟ್ಟಿ ಧ್ವನಿಯಲ್ಲಿ ಆದಾಗ ಮಾತ್ರ ಸ್ವರಭಾರಗಳು ಮಿಳಿತಗೊಂಡು ಮಾಡುವ ತಪ್ಪುಗಳು ಗೋಚರವಾಗುತ್ತದೆ ಎಂದು ಡಾ. ಜಿ. ಶಂಕರ್‍ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಪಿ.ಬಿ. ಪ್ರಸನ್ನ ಹೇಳಿದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗದ ಆಶ್ರಯಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ನಡೆದ ಕಬ್ಬದುಳುಮೆ ಕಾರ್ಯಕ್ರಮದ ಸಮಾರೋಪ ಹಾಗೂ ದ್ವಿತೀಯ ಎಂ.ಎ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಕೀರ್ತನಾ ಶೆಟ್ಟಿ, ಶಿವಾನಿ ಶೆಟ್ಟಿ, ಸುಶ್ಮಿತಾ ಶೆಟ್ಟಿ, ಕೃಷ್ಣ, ರಕ್ಷಿತಾ, ಜ್ಯೋತಿ, ಪ್ರವೀಣ್‍ ಕಬ್ಬದುಳುಮೆ ಕಾರ್ಯಕ್ರಮದ ಪ್ರಯೋಜನದ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದರು. ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್‌ ಭಟ್‌, ಐ.ಕ್ಯೂ.ಎ.ಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ಉಪನ್ಯಾಸಕರಾದ ಸಂಧ್ಯಾರಾಣಿ, ಲತಾ ನಾಯಕ್, ಭವ್ಯ ರೈ, ಶಾಲಿನಿ ಯು.ಬಿ ಉಪಸ್ಥಿತರಿದ್ದರು. ಸ್ನೇಹಾ ಮತ್ತು ಬಳಗ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ರತ್ನಮಾಲಾ ಸ್ವಾಗತಿಸಿ ಪ್ರಸ್ತಾವನೆಗೈದರು. ಅರ್ಚನಾ ವಂದಿಸಿದರು. ಭಾರತಿ ಪ್ರಸಕ್ತ ವರ್ಷದಲ್ಲಿ ಕನ್ನಡ ವಿಭಾಗ ಮಾಡಿದ ಸಾಧನೆಯ ವರದಿಯನ್ನು ಮಂಡಿಸಿದರು. ಶರಿತಾ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!