Sunday, September 13, 2026
Sunday, September 13, 2026

ಕಾರ್ಕಳ ಜ್ಞಾನಸುಧಾ: ಶಾಲಾ ಪ್ರಾರಂಭೋತ್ಸವ

ಕಾರ್ಕಳ ಜ್ಞಾನಸುಧಾ: ಶಾಲಾ ಪ್ರಾರಂಭೋತ್ಸವ

Date:

ಕಾರ್ಕಳ, ಜೂ.3: ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಪ್ರಾರಂಭೊತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಾಧನೆ ಹೆಜ್ಜೆ ಗುರುತುಗಳನ್ನು ದೃಶ್ಯಾಧಾರಿತವಾಗಿ ವಿಜ್ಞಾನ ಶಿಕ್ಷಕಿ ಅನಿಶಾರವರು ಪ್ರಸ್ತುತಪಡಿಸಿದರು. ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ವೈದ್ಯಾಧಿಕಾರಿ ಶ್ರೀವಿದ್ಯಾ ಅವರು ಮಾತನಾಡಿ, ದೈಹಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಉತ್ತಮವಾಗಿರುವುದು ಆರೋಗ್ಯದ ಲಕ್ಷಣ. ಧ್ಯಾನ ವ್ಯಾಯಾಮಗಳ ಮೂಲಕ ಉತ್ತಮ ಆರೋಗ್ಯವನ್ನು ನಾವು ಪಡೆಯಬಹುದು.

ಜೀವನದಲ್ಲಿ ಒತ್ತಡಗಳು ಜಾಸ್ತಿಯಾದಾಗ ಆರೋಗ್ಯ ಹಾಳಾಗುತ್ತದೆ ಎಂದು ಹೇಳಿದರು. ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪಪ್ರಾಂಶುಪಾಲೆಯಾಗಿರುವ ವಾಣಿ.ಕೆ ಇವರು ಶಾಲಾ ಶಿಸ್ತು ಹಾಗೂ ನಿಯಮಗಳು, ಇಡೀ ವರ್ಷದ ಶಾಲೆಯ ಆಗುಹೋಗುಗಳ ಬಗ್ಗೆ ವಿವರಿಸಿ, ಪ್ರಾಸ್ತಾವಿಕ ನುಡಿಗಳೊಂದಿಗೆ ನೆರೆದಿರುವ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿಇಒ ಹಾಗೂ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ದಿನೇಶ್ ಎಂ. ಕೊಡವೂರು 2026-27ರ ಶೈಕ್ಷಣಿಕ ವರ್ಷದ ಬಗ್ಗೆ ಶಾಲಾ ಮಾಹಿತಿಯನ್ನು ನೀಡಿದರು. ಜೆಇಎ ಸಂಯೋಜಕರಾದ ಸಂದೀಪ್‌ರವರು ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಗ್ಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಸ್ಟೂಡೆಂಟ್ ಡೀನ್ ಅಕಾಡಮಿಕ್ಸ್ ಡಾ.ಮಿಥುನ್ ಯು ಉಪಸ್ಥಿತರಿದ್ದರು. ವಿದ್ಯಾರ್ಥಿಗಳನ್ನು ಚಂಡೆ ನಾದದೊಂದಿಗೆ, ಸುಗಂಧ ಜಲವನ್ನು ಚಿಮುಕಿಸಿ, ಪೆನ್ನು ನೀಡುವ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು. ವಿದ್ಯಾರ್ಥಿನಿ ಸಮೃದ್ಧಿ ಪೈ ಪ್ರಾರ್ಥಿಸಿ, ಸಹ ಶಿಕ್ಷಕಿ ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂರೂರು-ಹಿರ್ಗಾನ: 3 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ; ಭಕ್ತರಿಂದ ರಜತ ಕಿರೀಟ ಹಾಗೂ ತ್ರಿಶೂಲ ಸಮರ್ಪಣೆ

ಹಿರ್ಗಾನ, ಸೆ.12: ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಇಲ್ಲಿನ...

ಸೆ. 16: ಡಿ ಮಾರ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ, ಸೆ.11: ನಗರದ ಕಲ್ಸಂಕ ಜಂಕ್ಷನ್ ಬಳಿಯ ಭಾರತ್ ಪ್ರೆಸ್ ಎದುರುಗಡೆಯ...

ಉಡುಪಿ ರೆಡ್ ಕ್ರಾಸಿಗೆ ರಾಷ್ಟ್ರೀಯ ಸಮಿತಿ ಸದಸ್ಯರ ಭೇಟಿ

ಉಡುಪಿ, ಸೆ.11: ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿ ಇಲ್ಲಿನ ಆಡಳಿತ...
error: Content is protected !!