Sunday, September 13, 2026
Sunday, September 13, 2026

ಮೂರೂರು-ಹಿರ್ಗಾನ: 3 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ; ಭಕ್ತರಿಂದ ರಜತ ಕಿರೀಟ ಹಾಗೂ ತ್ರಿಶೂಲ ಸಮರ್ಪಣೆ

ಮೂರೂರು-ಹಿರ್ಗಾನ: 3 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ; ಭಕ್ತರಿಂದ ರಜತ ಕಿರೀಟ ಹಾಗೂ ತ್ರಿಶೂಲ ಸಮರ್ಪಣೆ

Date:

ಹಿರ್ಗಾನ, ಸೆ.12: ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಇಲ್ಲಿನ 3 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ಜರುಗಲಿದೆ. ಗಣೇಶೋತ್ಸವ ಸಮಿತಿ ಹಾಗೂ ರೈಡರ‍್ಸ್ ಆಫ್ ಕಾರ್ಕಳ ಸಹಯೋಗದಲ್ಲಿ ಎಣ್ಣೆಹೊಳೆಯಿಂದ ಬೆಳಗ್ಗೆ 8 ಗಂಟೆಗೆ ಗಣೇಶನ ವಿಗ್ರಹದ ಮೆರವಣಿಗೆ ನಡೆಯಲಿದ್ದು, ಜೊತೆಗೆ ಭಕ್ತರಿಂದ ಬೆಳ್ಳಿಯ ಕಿರೀಟ ಹಾಗೂ ನೆಲ್ಲಿಕಟ್ಟೆಯ ಸವಿತಾ ಪ್ರಕಾಶ್ ಶೆಟ್ಟಿಯವರಿಂದ ಅರ್ಪಿತವಾದ ಬೆಳ್ಳಿಯ ತ್ರಿಶೂಲವನ್ನು ಪುರಮೆರವಣಿಗೆಯ ಮೂಲಕ ತರಲಾಗುತ್ತದೆ. ಗಣೇಶೋತ್ಸವದ ಪ್ರಯುಕ್ತ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬಹುಮಾನ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಮಂಗಳವಾರದಂದು ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಇವರಿಂದ ಕನಕಾಂಗಿ ಕಲ್ಯಾಣ ಎಂಬ ಯಕ್ಷಗಾನ ನಡೆಯಲಿದೆ. ಎಲ್ಲಾ ಭಗವದ್ಭಕ್ತರನ್ನು ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸೆ. 16: ಡಿ ಮಾರ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ, ಸೆ.11: ನಗರದ ಕಲ್ಸಂಕ ಜಂಕ್ಷನ್ ಬಳಿಯ ಭಾರತ್ ಪ್ರೆಸ್ ಎದುರುಗಡೆಯ...

ಉಡುಪಿ ರೆಡ್ ಕ್ರಾಸಿಗೆ ರಾಷ್ಟ್ರೀಯ ಸಮಿತಿ ಸದಸ್ಯರ ಭೇಟಿ

ಉಡುಪಿ, ಸೆ.11: ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿ ಇಲ್ಲಿನ ಆಡಳಿತ...
error: Content is protected !!