Monday, September 28, 2026
Monday, September 28, 2026

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ: ಯಶ್ಪಾಲ್ ಸುವರ್ಣ

ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಪ್ರಗತಿಗೆ ವೇಗ: ಯಶ್ಪಾಲ್ ಸುವರ್ಣ

Date:

ಕಳ್ತೂರು, ಮೇ 27: ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ಹೆಬ್ರಿ ರಾಜ್ಯ ಹೆದ್ದಾರಿಯ ಕುರ್ಪಾಡಿಯಿಂದ ಕಳ್ತೂರು ಸಂತೆಕಟ್ಟೆವರೆಗಿನ ಸುಮಾರು 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಮುಖ್ಯ ರಸ್ತೆಯನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.

ರಸ್ತೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ವೇಗ ನೀಡುವ ನಿಟ್ಟಿನಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಇಂದು ಲೋಕಾರ್ಪಣೆ ಮಾಡಲಾಗಿದ್ದು, ಈಗಾಗಲೇ ಬ್ರಹ್ಮಾವರ ಹೆಬ್ರಿ ಮುಖ್ಯ ರಸ್ತೆಯ ಸುಮಾರು 80 ಶೇಕಡ ರಸ್ತೆ ದ್ವಿಪಥವಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಕರ್ಜೆಯಿಂದ ಕುರ್ಪಾಡಿ ವರೆಗಿನ ರಸ್ತೆಯನ್ನು ಅತೀ ಶೀಘ್ರದಲ್ಲಿ ಅಭಿವೃದ್ಧಿ ಪಡಿಸಲು ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.

ಸುಮಾರು 5 ಕೋಟಿ ಅನುದಾನ ಒದಗಿಸಿ ರಸ್ತೆಯ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿದ ಶಾಸಕ ಯಶ್ಪಾಲ್ ಸುವರ್ಣ ರವರಿಗೆ ಗ್ರಾಮಸ್ಥರ ಪರವಾಗಿ ನಾಗರಾಜ ಸೂಡಾ ಹಾಗೂ ಸತೀಶ್ ಪೈ ಅಭಿನಂದನೆ ಸಲ್ಲಿಸಿದರು.

ಉಡುಪಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಾಜೀವ್ ಕುಲಾಲ್, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಕಮಲಾಕ್ಷ ಹೆಬ್ಬಾರ್, ಹರೀಶ್ ಶೆಟ್ಟಿ ಚೇರ್ಕಾಡಿ, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಜ್ ಶೆಟ್ಟಿ, ಗುತ್ತಿಗೆದಾರರಾದ ತಡಾಲ್ ಸುರೇಶ್ ಶೆಟ್ಟಿ, ಕೆಂಜೂರು ಕಳ್ತೂರು ಗ್ರಾಮ ಪಂಚಾಯತ್ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!