Friday, September 11, 2026
Friday, September 11, 2026

ಕಾಪು ತಾಲೂಕು ಮಟ್ಟದ ಮುಂಗಾರು ಪೂರ್ವಭಾವಿ ಸಭೆ

ಕಾಪು ತಾಲೂಕು ಮಟ್ಟದ ಮುಂಗಾರು ಪೂರ್ವಭಾವಿ ಸಭೆ

Date:

ಕಾಪು, ಮೇ 21: ಕಾಪು ತಾಲೂಕು ಮಟ್ಟದ ಮುಂಗಾರು ಪೂರ್ವಭಾವಿ ಸಭೆ ಗುರುವಾರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರರ ಕಚೇರಿಯಲ್ಲಿ ನಡೆಯಿತು.

ಮುಂಗಾರು ಸಮೀಪಿಸುತ್ತಿರುವುದರಿಂದ ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ತೆರೆಯುವುದರ ಜೊತೆಗೆ ಗಂಜಿ ಕೇಂದ್ರ ಸ್ಥಾಪಿಸುವಂತೆ ಸಂಭಂದಿಸಿದ ಇಲಾಖಾಧಿಕಾರಿಗಳಿಗೆ ತಿಳಿಸಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ಗಿಡಗಳನ್ನು ತೆರವು ಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಅಪಾಯಕಾರಿ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಸರಿಪಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗಳ ಚರಂಡಿ ಹಾಗೂ ರಸ್ತೆ ಇಕ್ಕೆಲಗಳಲ್ಲಿನ ಹುಲ್ಲು ಕಟಾವು ಹಾಗೂ ನೀರು ನಿಲ್ಲದಂತೆ ಕ್ರಮ ವಹಿಸುವಂತೆ ಹಾಗೂ ನುರಿತ ಈಜುಗಾರರ ಪಟ್ಟಿ ತಯಾರಿಸಿ ಸಿದ್ದರಿರುವಂತೆ ಅಗ್ನಿಶಾಮಕದವರಿಗೆ ಶಾಸಕರು ಸೂಚಿಸಿದರು.

ಕಾಪು ತಹಶೀಲ್ದಾರ ಅನಂತ ಶಂಕರ್, ಕಾಪು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಾದ ವಿಜಯ ಕುಮಾರ್, ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನೀಲಕಂಠ ಮೇಸ್ತಾ ಹಾಗೂ ಗ್ರಾಮ ಆಡಳಿತಾಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸೆ.25 ರಿಂದ 27: ಉಡುಪಿಯಲ್ಲಿ ಸಿರಿಧಾನ್ಯ ಹಬ್ಬ (ಮಿಲೆಟ್ ಫೆಸ್ಟಿವಲ್) ಮತ್ತು ಬೃಹತ್ ಆಹಾರ ಮೇಳ

ಉಡುಪಿ, ಸೆ.11: ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಮಂಗಳೂರು ಪಲ್ಸ್ ಇವೆಂಟ್ ಇವರಿಂದ...

ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ: ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಉಡುಪಿ, ಸೆ.11: ಸರ್ಕಾರಿ ಜಿಲ್ಲಾ ಆಸ್ಪತ್ರೆ, ಅಜ್ಜರಕಾಡು, ಉಡುಪಿ – ಮನೋರೋಗ...

ಗುರುನರಸಿಂಹ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ

ಉಡುಪಿ, ಸೆ.11: ಕೆ. ರಾಧಾಕೃಷ್ಣ ಬ್ರಹ್ಮ ದಂಪತಿಗಳ ಲಕ್ಷತುಳಸಿ ಅರ್ಚನೆ ಬುಧವಾರ...

ಕ್ರಿಯೇಟಿವ್‌ ಗ್ಲೋಬಲ್‌ ಸ್ಕೂಲ್‌: ಕಾರ್ಕಳ ತಾಲೂಕು ಮಟ್ಟದ ಕಬ್ಬಡಿ ಪಂದ್ಯಾವಳಿ

ಕಾರ್ಕಳ, ಸೆ.10: ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಕಾರ್ಕಳ ತಾಲೂಕು...
error: Content is protected !!