Saturday, November 14, 2026
Saturday, November 14, 2026

4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕಿದಿಯೂರು ಸಂಪಿಗೆನಗರ ಮುಖ್ಯರಸ್ತೆ ಉದ್ಘಾಟನೆ

4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕಿದಿಯೂರು ಸಂಪಿಗೆನಗರ ಮುಖ್ಯರಸ್ತೆ ಉದ್ಘಾಟನೆ

Date:

ಕಿದಿಯೂರು, ಮೇ 18: ಉಡುಪಿ ವಿಧಾನಸಭಾ ಕ್ಷೇತ್ರದ ಅಂಬಲಪಾಡಿ, ಕಡೆಕಾರು, ಉದ್ಯಾವರ ಗ್ರಾಮ ಸಂಪರ್ಕಿಸುವ ಬಂಕೇರಕಟ್ಟ ಸೇತುವೆಯಿಂದ ಸಂಪಿಗೆನಗರದವರೆಗಿನ ಸುಮಾರು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಮುಖ್ಯ ರಸ್ತೆಯನ್ನು ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಉದ್ಯಾವರ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯವಾಗಿ ಮಲ್ಪೆಯನ್ನು ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ದಿನಂಪ್ರತಿ ಸಂಚರಿಸುವ ಸಾವಿರಾರು ಜನರಿಗೆ ಇದರಿಂದ ಅನುಕೂಲವಾಗಲಿದ್ದು, ಮುಂದಿನ ದಿನಗಳಲ್ಲಿ ಇತರ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.

ಸ್ಥಳೀಯ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಜಗದೀಶ್ ಆಚಾರ್ಯ ಕಪ್ಪೆಟ್ಟು, ವೆಂಕಟರಮಣ ಕಿದಿಯೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಗಿರೀಶ್ ಅಮೀನ್, ಅಶೋಕ್ ಪಾಲನ್, ಪ್ರಶಾಂತ್ ಸಾಲ್ಯಾನ್, ಜಯಕರ್ ಸನಿಲ್, ರಾಜೇಂದ್ರ ಪಂದುಬೆಟ್ಟು, ರಘುನಾಥ್ ಕೋಟ್ಯಾನ್, ಪ್ರದೀಪ್ ಚಂದ್ರ ಗಾಣಿಗ, ಪ್ರಮೋದ್ ಸಾಲ್ಯಾನ್, ಸುನೀಲ್ ಕಪ್ಪೆಟ್ಟು, ಸೋಮನಾಥ ಬಿ. ಕೆ., ರಾಜೇಶ್ ಸುವರ್ಣ, ಹರೀಶ್ ಪಾಲನ್, ಸುಂದರ ಪೂಜಾರಿ, ಶಶಿಧರ ಸುವರ್ಣ, ವಿನೋದಿನಿ, ಮಾಲತಿ, ವಿದ್ಯಾ, ದೀಪಾ,ಅರುಣ್, ದೀಪಕ್ ಪುತ್ರನ್, ರಾಕೇಶ ಜತ್ತನ್, ಕಿಶೋರ್ ಕುಮಾರ್, ಹರೀಶ್ ಸುವರ್ಣ, ರಮೇಶ್ ಆಚಾರ್ಯ,ಕಿರಣ್, ಗೌತಮ್, ವಿಕಾಸ್, ವಿಜಯ ಭಟ್ ಮೊದಲಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಆದರ್ಶ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ

ಉಡುಪಿ, ನ.14: ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಆದರ್ಶ ಆಸ್ಪತ್ರೆ, ಉಡುಪಿ...

ಮಕ್ಕಳ ದಿನಾಚರಣೆ ಅಂಗವಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧ ಶಾಲೆಗಳ 20 ಸಾವಿರ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ: ಯಶ್ಪಾಲ್ ಸುವರ್ಣ

ಉಡುಪಿ, ನ.14: ಭಾರತ ದೇಶದ ಮುಂದಿನ ಭವಿಷ್ಯವನ್ನು ರೂಪಿಸಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ...

ಬಾಹ್ಯಾಕಾಶ ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ್ದರಿಂದ ಮತ್ತಷ್ಟು ಉಪಗ್ರಹ ಕಕ್ಷೆಗೆ: ಮೈಸೂರಿನಲ್ಲಿ ಪ್ರಧಾನಿ ಮೋದಿ

ಮೈಸೂರು, ನ.14: ಕೇಂದ್ರ ಸರ್ಕಾರವು ಬಾಹ್ಯಾಕಾಶ ವಲಯವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ್ದು,...

ಕೇಂದ್ರ ಸಚಿವರಿಂದ ಅಜ್ಜರಕಾಡಿನ ಆಕಾಶವಾಣಿ ಕೇಂದ್ರದಲ್ಲಿ ಎಫ್‌ಎಂ ಪ್ರೇಷಕದ ಉದ್ಘಾಟನೆ

ಉಡುಪಿ, ನ.13: ಉಡುಪಿ ಎಫ್‌ಎಂ ಸೇವೆಯ ಕಾರ್ಯಾರಂಭದಿಂದಾಗಿ ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ...
error: Content is protected !!