ಉಡುಪಿ, ಮೇ 12: ಕೊಡವೂರು ದೇವಳದ ಮಹಾ ರುದ್ರಯಾಗದ ಆಮಂತ್ರಣ ಪತ್ರಿಕೆಯನ್ನು ಕಾಣಿಯೂರು ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ ನೀಡಿ ಆಹ್ವಾನಿಸಲಾಯತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಮಹಾರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಸೇವಾಕರ್ತರಾದ ಪ್ರಸಾದರಾಜ್ ಕಾಂಚನ್, ಪ್ರಧಾನ ಸಂಚಾಲಕರಾದ ಕೆ. ಕೃಷ್ಣಮೂರ್ತಿ ಆಚಾರ್ಯ, ತಾರನಾಥ್ ಪೂಜಾರಿ, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು, ಸಂಚಾಲಕರಾದ ಜನಾರ್ದನ ಕೊಡವೂರು ಮುಂತಾದವರು ಉಪಸ್ಥಿತರಿದ್ದರು.





By
ForthFocus™