ಉಡುಪಿ, ಮೇ 11: ವಲಯ 15 ರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಉಡುಪಿ ಸಿಟಿ ವತಿಯಿಂದ ಟೋಪ್ ಟ್ರೈನರ್ಸ್ ಟ್ರೈನಿಂಗ್ ಕಾರ್ಯಕ್ರಮ ಮಥುರಾ ಕಂಫರ್ಟ್ ನಲ್ಲಿ ಮೇ.10 ಆದಿತ್ಯವಾರ ನಡೆಯಿತು. ಕಾರ್ಯಕ್ರಮದ ಪ್ರಧಾನ ತರಬೇತುದಾರರಾಗಿ ಜೇಸಿ ರಾಷ್ಟ್ರೀಯ ತರಬೇತುದಾರರು, ರಾಜೇಂದ್ರ ಭಟ್ ಕೆ ಆಗಮಿಸಿ ಉತ್ತಮ ತರಬೇತಿ ನೀಡಿದರು. ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಯುವ ನಾಯಕಿ ಮನು ಶೆಟ್ಟಿ ಇನ್ನಾ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಉಪಾಧ್ಯಕ್ಷೆ ಗಗನಾ ಎಂ.ಬಿ ವಹಿಸಿದ್ದರು. ವೇದಿಕೆಯಲ್ಲಿ ಜೇಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಜೆಜೆಸಿ ವಿಶ್ವಾಸ್, ಸೃಜನ್ ಶೆಟ್ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ತರಬೇತುದಾರ ಬಾಸುಮ ಕೊಡಗು, ಉದಯ್ ನಾಯ್ಕ್, ಕಾವ್ಯವಾಣಿ ಕೊಡಗು , ಸ್ಮಿತಾ ಪಾಟೀಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು. ಇತ್ತೀಚಿಗೆ ನಿಧನರಾದ ಪೂರ್ವ ವಲಯಾಧ್ಯಕ್ಷ ಉದಯಕುಮಾರ್ ಶೆಟ್ಟಿ ಇನ್ನಾ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.




By
ForthFocus™