Sunday, July 5, 2026
Sunday, July 5, 2026

ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದು ಬೇಸಿಗೆ ಶಿಬಿರಗಳ ಉದ್ದೇಶವಾಗಲಿ: ಪ್ರೇಮಾನಂದ ಶೆಟ್ಟಿ

ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದು ಬೇಸಿಗೆ ಶಿಬಿರಗಳ ಉದ್ದೇಶವಾಗಲಿ: ಪ್ರೇಮಾನಂದ ಶೆಟ್ಟಿ

Date:

ಕೋಟ, ಮೇ 9: ಬೇಸಿಗೆ ಶಿಬಿರಗಳು ಕೇವಲ ರಜಾ ಶಿಬಿರಗಳಾಗದೆ ಮಕ್ಕಳ ಮನೋವಿಕಾಸದ ಜೊತೆ ಅವರನ್ನು ಸುಸಂಸ್ಕೃತರನ್ನಾಗಿಸಲಿ ಎಂದು ಸಮಾಜ ಸೇವಕ ಕಟ್ಕೇರೆ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಶನಿವಾರ ಕೋಟ ಪಂಚಾಯತ್ ಸಭಾಂಗಣದಲ್ಲಿ ಕೋಟ ಗ್ರಾಮ ಪಂಚಾಯತ್, ಅರಿವು ಡಿಜಿಟಲ್ ಗ್ರಂಥಾಲಯ ಕೇಂದ್ರ ಕೋಟ, ಪಂಚವರ್ಣ ಸಂಘಟನೆ ಕೋಟ, ಇಂಡಿಕಾ ಕಲಾ ಬಳಗ ಪಡುಕರೆ, ಪ್ರಕೃತಿ ಸಂಜೀವಿನಿ ಸಂಘ ಕೋಟ ಪಂಚಾಯತ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಐದು ದಿನಗಳ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಐದು ದಿನಗಳಲ್ಲಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಾಗರತ್ನ ಉಡುಪ, ಜಯಲಕ್ಷ್ಮೀ, ವಸಂತಿ, ಪ್ರಜ್ಞಾ ಹಂದಟ್ಟು ಇವರುಗಳನ್ನು ಗೌರವಿಸಲಾಯಿತು. ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪ್ರಕೃತಿ ಸಂಜೀವಿನಿ ಸಂಘದ ಮಾಲತಿ ಶೇಖರ್ ಉಪಸ್ಥಿತರಿದ್ದರು. ಅರಿವು ಡಿಜಿಟಲ್ ಗ್ರಂಥಾಲದ ಗ್ರಂಥಪಾಲಕಿ ಜ್ಯೋತಿ ಗಿಳಿಯಾರು ಸ್ವಾಗತಿಸಿ, ಪಂಚವರ್ಣದ ಸುಜಾತ ಬಾಯರಿ ನಿರೂಪಿಸಿ, ಪಂಚಾಯತ್ ಪಿಡಿಒ ಉಮೇಶ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಿದ್ಧಾಪುರ ಏತ ನೀರಾವರಿ ಯೋಜನೆ ಪುನರಾರಂಭಗೊಳಿಸಿ- ಸಚಿವರಿಗೆ ಸಂಸದ ಬಿ.ವೈ. ರಾಘವೇಂದ್ರ ಮನವಿ

ಬೈಂದೂರು, ಜು.4: ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದ...

‘ಸ್ಮರಣ ಪಾಕ್ಷಿಕ’ ಉದ್ಘಾಟನೆ

ಉಡುಪಿ, ಜು.4: ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ 125ನೇ ಜಯಂತ್ಯುತ್ಸವದ ಅಂಗವಾಗಿ...

ಕುತೂಹಲ ಮೂಡಿಸಿದ ಹಾಲಿ ಮಾಜಿ ಸಿಎಂ ಭೇಟಿ

ಬೆಂಗಳೂರು, ಜು.4: ಮುಖ್ಯಮಂತ್ರಿಯಾಗಿ ಒಂದು ತಿಂಗಳ ಸೇವೆಯನ್ನು ಪೂರ್ಣಗೊಳಿಸಿದ ಮುಖ್ಯಮಂತ್ರಿ ಡಿ.ಕೆ....

ಸಂತರು ನಡೆದ ದಾರಿಯೇ ಸಮಾಜದ ಉದ್ಧಾರದ ದಾರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರು, ಜು.4: ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ನಿ.ಪ್ರ.ಸ್ವ...
error: Content is protected !!