ಮಂಗಳೂರು, ಮೇ 6: ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್ ಅವರ ಉಡುಪಿ ಜಿಲ್ಲೆಯ ಭೇಟಿಯ ಪ್ರಯುಕ್ತ ಬುಧವಾರ ಬೆಳಿಗ್ಗೆ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಲಾಯಿತು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ ಎ ಗಫೂರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಮುಖಂಡರುಗಳಾದ ಅಶೋಕ್ ಕುಮಾರ್ ಕೊಡವೂರು, ಹರಿಪ್ರಸಾದ್ ರೈ, ಮುರಳಿ ಶೆಟ್ಟಿ, ಕರ್ನಾಟಕ ಕ್ರಿಸ್ಚಿಯನ್ ಅಭಿವೃದ್ಧಿ ನಿಗಮದ ಸದಸ್ಯ ಪ್ರಶಾಂತ್ ಜತ್ತನ್ನ, ಮುಂತಾದವರು ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಸಚಿವರಿಗೆ ಸ್ವಾಗತ
ಪ್ರವಾಸೋದ್ಯಮ ಸಚಿವರಿಗೆ ಸ್ವಾಗತ
Date:




By
ForthFocus™