Thursday, June 18, 2026
Thursday, June 18, 2026

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

Date:

ಕಾಪು, ಏ.29: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ದೇವಳದ ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ, ವಿವಿಧ ಸಂಘ-ಸಂಸ್ಥೆಗಳು ಮತ್ತು ಸುತ್ತಮುತ್ತಲಿನ ಗ್ರಾಮದಿಂದ ಹೊರೆಕಾಣಿಕೆ ಸಮರ್ಪಣೆಯನ್ನು ಮಾಡಲಾಯಿತು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗ ಹೊರೆ ಕಾಣಿಕೆಗೆ ಚಾಲನೆಯನ್ನು ನೀಡಲಾಯಿತು. ಹೊರೆಕಾಣಿಕೆಯಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಹಾಳೆತಟ್ಟೆ, ಸಕ್ಕರೆ, ತರಕಾರಿ – ಫಲವಸ್ತು ಸೇರಿದಂತೆ ಇನ್ನು ಅನೇಕ ವಸ್ತುಗಳಿದ್ದವು.

ಹೊರೆಕಾಣಿಕೆ ಚಾಲನೆ ನೀಡುವ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ದೇವಳದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಾಧವ ಆರ್. ಪಾಲನ್, ಮಾತೃ ವೈಭವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಧಾರ್ಮಿಕ ಸಮಿತಿ ಪ್ರಧಾನ ಸಂಚಾಲಕ ಕೆ.ಭಗವಾನ್ ದಾಸ್, ಪುಣೆ ಸಮಿತಿಯ ಪದಾಧಿಕಾರಿಗಳಾದ ಉದಯ ಶೆಟ್ಟಿ ಕಳತ್ತೂರು, ದಿನೇಶ್ ಶೆಟ್ಟಿ ಕಳತ್ತೂರು, ಹೊರೆಕಾಣಿಕೆಯ ಪ್ರಮುಖರಾದ ಅರುಣ್ ಶೆಟ್ಟಿ ಪಾದೂರು, ಶ್ರೀಕರ ಶೆಟ್ಟಿ ಕಲ್ಯ, ಗೀತಾಂಜಲಿ ಎಂ ಸುವರ್ಣ, ಶ್ರೀಧರ್ ಅಮೀನ್ ಮಣಿಪುರ, ರಂಜನ್ ಹೆಗ್ಡೆ, ಅಭಿವೃದ್ಧಿ ಸಮಿತಿ ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ, ಸುನೀಲ್ ಎಸ್. ಪೂಜಾರಿ, ಸಾವಿತ್ರಿ ಗಣೇಶ್, ಜಯರಾಮ್ ಆಚಾರ್ಯ, ಪ್ರಭಾತ್ ಶೆಟ್ಟಿ ಮೂಳೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಕ್ತದಾನದಲ್ಲಿ ಉಡುಪಿ ಜಿಲ್ಲೆ ರಾಜ್ಯಕ್ಕೆ ಮಾದರಿ: ರಾಜೀವ ಶೆಟ್ಟಿ

ಉಡುಪಿ, ಜೂ.16: ಉಡುಪಿ ಜಿಲ್ಲೆಯಲ್ಲಿ ಸಾವಿರಾರು ರಕ್ತದಾನಿಗಳಿದ್ದಾರೆ. ಇಂದು ಅವರಿಂದಾಗಿ ಜಿಲ್ಲೆಯಲ್ಲಿ...

ಉಡುಪಿ ಜಿಲ್ಲಾ ರಸಾಯನಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಉಡುಪಿ, ಜೂ.16: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ) ಉಡುಪಿ ಜಿಲ್ಲೆ,...

ಗುರುತಿನ ಪುರಾವೆಯಾಗಿ ಮಾತ್ರ ಆಧಾರ್ ಬಳಕೆ- ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೋರಿದ ಸುಪ್ರೀಂ ಕೋರ್ಟ್

ನವದೆಹಲಿ, ಜೂ.16: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿದ ಆಧಾರ್ ಕಾರ್ಡ್‌ಗಳನ್ನು...

ಜೂ.19: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ- ಸಂವಾದ ಕಾರ್ಯಕ್ರಮ

ಉಡುಪಿ, ಜೂ.16: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ...
error: Content is protected !!