Sunday, April 19, 2026
Sunday, April 19, 2026

ಸಾರ್ವಜನಿಕರು ಭೂ- ಅಗೆತ ಕಾಮಗಾರಿ ಕೈಗೊಳ್ಳದಂತೆ ಮೆಸ್ಕಾಂನಿಂದ ಸೂಚನೆ

ಸಾರ್ವಜನಿಕರು ಭೂ- ಅಗೆತ ಕಾಮಗಾರಿ ಕೈಗೊಳ್ಳದಂತೆ ಮೆಸ್ಕಾಂನಿಂದ ಸೂಚನೆ

Date:

ಉಡುಪಿ, ಏ.18: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಹಾಲಿ ಇರುವ 33 ಕೆ.ವಿ ಎಣ್ಣೆಹೊಳೆ ವಿದ್ಯುತ್ ಮಾರ್ಗದಿಂದ 33/11 ಕೆ.ವಿ ಬೈಲೂರು ವಿದ್ಯುತ್ ಕೇಂದ್ರದವರೆಗೆ, 33 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿಯು ಮುಕ್ತಾಯ ಹಂತದಲ್ಲಿರುತ್ತದೆ. ಸದರಿ 33 ಕೆ.ವಿ ವಿದ್ಯುತ್ ಪ್ರಸರಣ ಮಾರ್ಗವು ಬೈಲೂರು ಕಾರ್ಕಳ ಮುಖ್ಯರಸ್ತೆಯ ಎಡಭಾಗದಲ್ಲಿ ಬೈಲೂರು ಪೇಟೆಯ ಟ್ರಿನಿಟಿ ಕಾಂಪ್ಲೆಕ್ಸ್ ನಿಂದ ಎರ್ಲಪಾಡಿ ತಿರುವಿನವರೆಗೆ, ಎರ್ಲಪಾಡಿ ತಿರುವಿನಿಂದ ಬೈಲೂರು 33 ಕೆ.ವಿ ವಿದ್ಯುತ್ ಕೇಂದ್ರದವರೆಗೆ ಸುಮಾರು 1.5 ಕಿ.ಮೀ. ನಷ್ಟು ಭೂಗತ ಕೇಬಲ್ ಮೂಲಕ ಹಾದು ಹೋಗಿದ್ದು, ಏಪ್ರಿಲ್ 20 ರ ಅನಂತರದ ಯಾವುದೇ ದಿನದಿಂದ ಈ ಪ್ರಸರಣ ಮಾರ್ಗದಲ್ಲಿ ವಿದ್ಯುತ್ ಹಾಯಿಸಲು ಉದ್ದೇಶಿಸಲಾಗಿರುತ್ತದೆ.

ಸದರಿ ವಿದ್ಯುತ್ ಪ್ರಸರಣ ಮಾರ್ಗವು ಹಾದು ಹೋಗುವ ಗ್ರಾಮಗಳ ಪ್ರದೇಶಗಳಲ್ಲಿ ವಾಸಿಸುವವರು ಭೂ-ಅಗೆತ ಕಾಮಗಾರಿಗಳನ್ನು ಮಾಡುವುದಾಗಲೀ ಅಥವಾ ವಿದ್ಯುತ್ ಪ್ರಸರಣ ಮಾರ್ಗದ ಕೆಳಭಾಗದಲ್ಲಿ ಯಾವುದೇ ತರಹದ ಚಟುವಟಿಕೆಗಳನ್ನು ಕೈಗೊಳ್ಳಬಾರದು. ಈ ಸೂಚನೆಗಳನ್ನು ಉಲ್ಲಂಘಿಸಿದರೆ ಅದರಿಂದ ಉಂಟಾಗಬಹುದಾದ ಕಷ್ಟ ನಷ್ಟಗಳಿಗೆ ಅವರುಗಳೇ ಜವಾಬ್ದಾರರಾಗಿರುತ್ತಾರೆಯೇ ಹೊರತು ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪೆನಿ ನಿಯಮಿತವು (ಮೆಸ್ಕಾಂ) ಜವಾಬ್ದಾರರಾಗಿರುವುದಿಲ್ಲ ಜೊತೆಗೆ ವಿದ್ಯುಚ್ಛಕ್ತಿ ಕಾಯಿದೆ 2003 ರ ಅನ್ವಯ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂಬುವುದನ್ನು ಸಾರ್ವಜನಿಕರು ಗಮನದಲ್ಲಿರಿಸಿಕೊಂಡು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮಂಗಳೂರು ಮ.ವಿ.ಸ.ಕಂ.ನಿ. ದ ಉಪನಿಯಂತ್ರಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜ್ಞಾನಸುಧಾ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ, ಏ.18: ಪ್ರಥಮ ಪಿ.ಯು.ಸಿಯಲ್ಲಿ ೧೦೦ಶೇಕಡಾ ಫಲಿತಾಂಶವನ್ನು ನೀಡಿಕೊಂಡು ದ್ವಿತೀಯ ಪಿ.ಯು.ಸಿಯಲ್ಲಿ...

ತ್ರಾಸಿ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮ

ಕುಂದಾಪುರ, ಏ.18: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಸಮಾಜಕ್ಕೆ ಉಪಯುಕ್ತವಾಗುವಂತಹ ಪ್ರಾಜೆಕ್ಟ್ ಗಳನ್ನು ಮಾಡಬೇಕು: ವಿದ್ಯಾರ್ಥಿಗಳಿಗೆ ಡಾ. ಕೃಷ್ಣಮೂರ್ತಿ ಮಕ್ಕಿತ್ತಾಯ ಕರೆ

ನಿಟ್ಟೆ, ಏ.18: ವಿದ್ಯಾರ್ಥಿಗಳು ತಮ್ಮ ಜ್ಞಾನವೃದ್ಧಿಗಾಗಿ ಸಮಾಜಕ್ಕೆ ಉಪಯುಕ್ತವಾಗುವಂತಹ ಪ್ರಾಜೆಕ್ಟ್ ಗಳನ್ನು...

ಭಾರತದ ಮೊದಲ ಪ್ರಯಾಣಿಕ ರೈಲಿನ 173 ನೇ ವಾರ್ಷಿಕೋತ್ಸವ

ನವದೆಹಲಿ, ಏ.17: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಐತಿಹಾಸಿಕ ಥಾಣೆ ರೈಲ್ವೆ...
error: Content is protected !!