Monday, October 5, 2026
Monday, October 5, 2026

ದಮನಿತರ ಪಾಲಿನ ಬಿಡುಗಡೆಯ ಬೆಳಕು ಅಂಬೇಡ್ಕರ್‌

ದಮನಿತರ ಪಾಲಿನ ಬಿಡುಗಡೆಯ ಬೆಳಕು ಅಂಬೇಡ್ಕರ್‌

Date:

ಹಿರಿಯಡಕ, ಏ.15: ಈ ನೆಲದ ತಳ ಸಮುದಾಯಗಳ ಪರವಾದ ಎಲ್ಲ ಜೀವಪರ ದನಿಗಳನ್ನು ಕೂಡಿಕೊಂಡು ತನ್ನ ಓದು, ವಿವೇಕ, ಕರುಣೆಯ ಜೀವದ್ರವವನ್ನು ಬಳಸಿ ಈ ನೆಲದ ಸಾಮಾನ್ಯರ ಬದುಕಿನ ಕತ್ತಲೆಗೆ ಬೆಳಕಾಗುವ ಅಪೂರ್ವ ಸಂವಿಧಾನವನ್ನು ಕೊಟ್ಟ ಮಹಾಮಾನವತಾವಾದಿ ಭೀಮರಾವ್‌ ಅಂಬೇಡ್ಕರ್‌ ಅವರ ಜನ್ಮದಿನ ದಮನಿತರ ಪಾಲಿನ ಬಿಡುಗಡೆಯ ದಿನವೂ ಹೌದು ಎಂದು ಪ್ರಾಂಶುಪಾಲ ಡಾ. ಜಯಪ್ರಕಾಶ್‌ ಶೆಟ್ಟಿ ಹೆಚ್‌ ಹೇಳಿದರು. ಇವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 135ನೇ ಜನ್ಮದಿನದ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಸೊರಬ ಸರ್ಕಾರಿ ಪದವಿಪೂರ್ವ ಕಾಲೇಜಿನ ಗಿರಿಜಮ್ಮ, ಹೊನ್ನಾಳಿ ವಿಜಯ ಪದವಿಪೂರ್ವ ಕಾಲೇಜಿನ ವಸಂತ್‌, ಅರುಣ್‌ ಹಾಗೂ ಇತರರ ಜೊತೆ ಕಾಲೇಜಿನ ಬೋಧಕ ಮತ್ತು ಬೋಧಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಈರಬಸು ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ಸಿತೀಕ್ಷಾ ವಂದಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥೆ ನಿಶ್ಚಿತ ಎಸ್‌ ಹೋಬಳಿದಾರ್‌ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಜಾನಕಿ ನಮನ’

ಉಡುಪಿ, ಅ.4: ಉಡುಪಿಯ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯದಲ್ಲಿ ಕರ್ಣಾಟಕ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ನಿಖಿಲ್ ಗುಪ್ತ ಭೇಟಿ

ಕಾಪು, ಅ.4: ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ...

ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ

ಮಣಿಪಾಲ, ಅ.4: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ...
error: Content is protected !!