Tuesday, October 13, 2026
Tuesday, October 13, 2026

ಬಸ್ರೂರು: ವೃತ್ತಿ ಯೋಜನೆ ಕಾರ್ಯಕ್ರಮ

ಬಸ್ರೂರು: ವೃತ್ತಿ ಯೋಜನೆ ಕಾರ್ಯಕ್ರಮ

Date:

ಬಸ್ರೂರು, ಏ.7: ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಘಟಕದ ಆಶ್ರಯದಲ್ಲಿ ‘ವೃತ್ತಿ ಯೋಜನೆ’ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪೋಲೀಸ್ ಉಪನಿರೀಕ್ಷಕ(ಸಿವಿಲ್)ಅಧಿಕಾರಿಯಾದ ಆಶ್ರೀತಾ ಎ ಶೆಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉದ್ಯೋಗವನ್ನು ಸರಿಯಾಗಿ ಆಯ್ಕೆ ಮಾಡಿಕೊಂಡು ಅದಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಾಯ ಮಾಡುವ ಸ್ಪರ್ಧಾತ್ಮಕ ಪರೀಕ್ಷೆಗಳು ಉದ್ಯೋಗವಕಾಶದ ಕುರಿತು ಮಾತನಾಡುತ್ತಾ ಕಾಲೇಜುಗಳಲ್ಲಿ ನಡೆಸುವ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳ ವೃತ್ತಿ ಯೋಜನಾ ಮುಂದಾಳತ್ವ ಬೆಳೆಸುವುದಲ್ಲದೇ ಆತ್ಮವಿಶ್ವಾಸ ಮತ್ತು ಉತ್ತಮ ನಿರ್ಧಾರಗಳನ್ನು ಕಾಲೇಜು ದಿನಗಳಲ್ಲಿಯೇ ತೆಗೆದುಕೊಂಡಾಗ ಮಾತ್ರ ಭವಿಷ್ಯದ ಯಶಸ್ಸಿಗೆ ಒಂದು ನೆಲೆ ಸಿಗುತ್ತದೆ ಎಂದರು.

ಅರುಣ್ ಕುಮಾರ್ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಸೂರಜ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಮೋಹನ ಕೆ. ಎನ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಡಾ. ವಿಶ್ವನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ಸುಧಾ ಯಾದವ್ ಕರ್ನಾಟಕದ ನೂತನ ರಾಜ್ಯಪಾಲೆ

ಬೆಂಗಳೂರು, ಅ.12: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಾ. ಸುಧಾ ಯಾದವ್...

ಅಮೇರಿಕನ್ ಅರ್ಥಶಾಸ್ತ್ರಜ್ಞರಾದ ರಾಬರ್ಟ್ ಇ. ಹಾಲ್ ಮತ್ತು ಮೈಕೆಲ್ ವುಡ್‌ಫೋರ್ಡ್ ಅವರಿಗೆ 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.12: 2026 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೇರಿಕನ್ ಅರ್ಥಶಾಸ್ತ್ರಜ್ಞರಾದ...

ಅ.17-18: ಬ್ರಹ್ಮಾವರದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೇಳ

ಉಡುಪಿ, ಅ.12: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ...

ಕ್ರಿಯೇಟಿವ್ ಗ್ಲೋಬಲ್ ಶಾಲೆಯಲ್ಲಿ ಅಂಚೆ ದಿನಾಚರಣೆ

ಕಾರ್ಕಳ, ಅ.12: ಮೊಬೈಲ್ ಸಂದೇಶಗಳ ಭರಾಟೆಯಲ್ಲಿ ಪತ್ರದ ಮಧುರತೆಯನ್ನು ಮರೆತಿರುವ ಇಂದಿನ...
error: Content is protected !!