Saturday, September 12, 2026
Saturday, September 12, 2026

ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಗೆ 5ನೇ ವರ್ಷದ ಸಂಭ್ರಮ

ನಂದಳಿಕೆ – ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಗೆ 5ನೇ ವರ್ಷದ ಸಂಭ್ರಮ

Date:

ಬೆಳ್ಮಣ್, ಏ.4: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಸಂಸ್ಥೆ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನoದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಂಗ ಸಂಸ್ಥೆಯಾಗಿ ಬೆಳೆಯುವ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಗೆ ಈ ವರ್ಷ 5ನೇ ವರ್ಷದ ಸಂಭ್ರಮ.

400ಕ್ಕೂ ಅಧಿಕ ಭಜನಾ ಸೇವೆ: ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯು ಕಳೆದ ಐದು ವರ್ಷದ ಅವಧಿಯಲ್ಲಿ ಅಧಿಕ ಭಜನಾ ಸೇವೆಯನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಬೆಳ್ಮಣ್ಣು ಮಂಡಲ ಪೂಜಾ ಮಹೋತ್ಸವ, ನಂದಳಿಕೆ ಸಿರಿ ಜಾತ್ರೆ, ಕಾರ್ಕಳ ಉತ್ಸವ, ಉಡುಪಿ ಜಾನಪದ ಉತ್ಸವ, ಕಾರ್ಕಳ ಮಾರಿಗುಡಿ ಬ್ರಹ್ಮಕಲಶೋತ್ಸವ, ಕಟೀಲು ಬ್ರಹ್ಮ ರಥೋತ್ಸವ ಸೇರಿದಂತೆ ಪರಿಸರದ ಹಲವಾರು ದೇವಸ್ಥಾನ ಗರಡಿ ಹೊರಕಾಣಿಕೆ ಮೆರವಣಿಗೆ ಮುಂತಾದ ಹಲವಾರು ಸಮಾರಂಭಗಳಲ್ಲಿ ಅಬ್ಬನಡ್ಕ ಭಜನಾ ಮಂಡಳಿಯು ಭಜನಾ ಸೇವೆಯನ್ನು ನೀಡಿರುತ್ತದೆ.

ಭಜನಾ ಸೇವೆಯ ಜೊತೆ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ, ಧಾರ್ಮಿಕ ಚಟುವಟಿಕೆಗಳಲ್ಲೂ ಭಾಗಿ: ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್’ನ ಸಹಕಾರದೊಂದಿಗೆ ಅಬ್ಬನಡ್ಕ ಭಜನಾ ಮಂಡಳಿಯು ಭಜನಾ ಕಾರ್ಯಕ್ರಮಗಳ ಜೊತೆಗೆ ಸ್ವಚ್ಛತಾ ಕಾರ್ಯಕ್ರಮ, ಶ್ರಮದಾನ ಕಾರ್ಯಕ್ರಮ, ರಕ್ತದಾನ ಶಿಬಿರ, ಮಹಾಶಿವರಾತ್ರಿ ಪೂಜಾ ಮಹೋತ್ಸವ, ಗಣೇಶೋತ್ಸವ ಸಂಭ್ರಮ, ಯುಗಾದಿ ಸಂಭ್ರಮ, ರಕ್ಷಾಬಂಧನ ಕಾರ್ಯಕ್ರಮ, ಆಟಿಡೊಂಜಿ ದಿನ ಕಾರ್ಯಕ್ರಮ, ಗ್ರಾಮೀಣ ಕ್ರೀಡೋತ್ಸವ ಮುಂತಾದ ಹಲವಾರು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

ದುರ್ಗಾ ವನ ನಿರ್ಮಾಣ: ಅಬ್ಬನಡ್ಕ ಭಜನಾ ಮಂಡಳಿಯ ನೇತೃತ್ವದಲ್ಲಿ ಕುಡುoದೂರು ಬಳಿ 100 ಗಿಡ ನೆಡುವ ಮೂಲಕ ಶಾಶ್ವತ ದುರ್ಗವನ ನಿರ್ಮಿಸಿ ಜನ ಮೆಚ್ಚುಗೆ ಪಡೆದಿರುತ್ತಾರೆ.

ಉಚಿತ ಸಮವಸ್ತ್ರ ವಿತರಣೆ: ಅಬ್ಬನಡ್ಕ ಭಜನಾ ಮಂಡಳಿಯ ಸದಸ್ಯರಿಗೆ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದಾನಿಗಳ ಸಹಕಾರದೊಂದಿಗೆ ಉಚಿತ ಸಮವಸ್ತ್ರವನ್ನು ನೀಡಿರುತ್ತಾರೆ.

ಉಚಿತ ಬರೆಯುವ ಪುಸ್ತಕ ವಿತರಣೆ: ಅಬ್ಬನಡ್ಕ ಭಜನಾ ಮಂಡಳಿಯಲ್ಲಿರುವ ಶಾಲಾ ಮಕ್ಕಳಿಗೆ ಉಚಿತ ಬರೆಯುವ ಪುಸ್ತಕ ನೀಡುವುದರ ಮೂಲಕ ಪ್ರೋತ್ಸಾಹಿಸುತ್ತಿದ್ದೇವೆ.

ಭಜನಾ ಮಂಡಳಿಯ ಸದಸ್ಯರ ಪ್ರತಿಭೆಗಳಿಗೆ ಗೌರವ ಸನ್ಮಾನ: ಅಬ್ಬನಡ್ಕ ಭಜನಾ ಮಂಡಳಿಯ ಸದಸ್ಯರು ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ವಿಶೇಷ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸುತ್ತೇವೆ.

ಅಬ್ಬನಡ್ಕ ಭಜಕೆರೆ ಕೆಸರ್ದಗೊಬ್ಬು: 2024ರಲ್ಲಿ ಅಬ್ಬನಡ್ಕ ಭಜನಾ ಮಂಡಳಿಯ ನೇತೃತ್ವದಲ್ಲಿ ಬೆಳ್ಮಣ್ಣು ವಲಯದ ಭಜನಾ ಮಂಡಳಿಗಳ ಸದಸ್ಯರಿಗಾಗಿ ಭಜಕೆರೆ ಕೆಸರ್ದಗೊಬ್ಬು ಕ್ರೀಡಾಕೂಟ ಆಯೋಜಿಸುವುದರ ಮೂಲಕ ತಾಲೂಕು, ಜಿಲ್ಲಾ ಮಟ್ಟದಲ್ಲಿ ನಮ್ಮ ಸಂಸ್ಥೆ ಗಮನ ಸೆಳೆದಿರುತ್ತದೆ.

ಅಬ್ಬನಡ್ಕ ಭಜನೋತ್ಸವ ಸಂಭ್ರಮ: ಅಬ್ಬನಡ್ಕ ಭಜನಾ ಮಂಡಳಿಯ ಐದನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅಬ್ಬನಡ್ಕದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಏಕಕಾಲದಲ್ಲಿ 300ಕ್ಕೂ ಅಧಿಕ ಭಜಕರಿಂದ ಭಜನೋತ್ಸವ ಸಂಭ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಅತ್ಯುತ್ತಮ ಶಿಸ್ತಿನ ಭಜನಾ ಮಂಡಳಿ ಪ್ರಶಸ್ತಿ: 2023ರಲ್ಲಿ ನಮ್ಮ ಕುಡ್ಲ ಟಿವಿ ವಾಹಿನಿಯವರು ಆಯೋಜಿಸಿರುವ ಭಜನಾ ಸ್ಪರ್ಧೆಯಲ್ಲಿ ಅಬ್ಬನಡ್ಕ ಭಜನಾ ತಂಡವು ಫೈನಲ್ ಸ್ಪರ್ಧೆಗೆ ಪ್ರವೇಶಿಸಿ ಅತ್ಯುತ್ತಮ ಶಿಸ್ತಿನ ಭಜನಾ ಮಂಡಳಿ ಪ್ರಶಸ್ತಿ ಪಡೆದುಕೊoಡಿತು.

ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯು ನಂದಳಿಕೆ ಅಬ್ಬನಡ್ಕ ಮಾರ್ಗದರ್ಶನದೊಂದಿಗೆ ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್ ರವರ ಸಾರಥ್ಯದಲ್ಲಿ ಸುಲೋಚನಾ ಕೋಟ್ಯಾನ್ ಅವರು ಸ್ಥಾಪಕಾಧ್ಯಕ್ಷರಾಗಿ, ಪೂರ್ವಧ್ಯಕ್ಷರಾದ ಹರಿಣಾಕ್ಷಿ ಪೂಜಾರಿಯವರ ಸಹಕಾರದೊಂದಿಗೆ ಪ್ರಸ್ತುತ ವರ್ಷದ ಅಧ್ಯಕ್ಷರಾದ ಕೀರ್ತನ್ ಪೂಜಾರಿ ಅವರ ನೇತೃತ್ವದಲ್ಲಿ 40ಕ್ಕೂ ಸದಸ್ಯರು ಭಜನಾ ಮಂಡಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸೆ. 16: ಡಿ ಮಾರ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ, ಸೆ.11: ನಗರದ ಕಲ್ಸಂಕ ಜಂಕ್ಷನ್ ಬಳಿಯ ಭಾರತ್ ಪ್ರೆಸ್ ಎದುರುಗಡೆಯ...

ಉಡುಪಿ ರೆಡ್ ಕ್ರಾಸಿಗೆ ರಾಷ್ಟ್ರೀಯ ಸಮಿತಿ ಸದಸ್ಯರ ಭೇಟಿ

ಉಡುಪಿ, ಸೆ.11: ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿ ಇಲ್ಲಿನ ಆಡಳಿತ...
error: Content is protected !!