Thursday, April 30, 2026
Thursday, April 30, 2026

ಮಲಬಾರ್ ವಿಶ್ವರಂಗ ಪುರಸ್ಕಾರ

ಮಲಬಾರ್ ವಿಶ್ವರಂಗ ಪುರಸ್ಕಾರ

Date:

ಉಡುಪಿ, ಮಾ.28: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಇದರ ಆಶ್ರಯದಲ್ಲಿ ಮಲಬಾರ್ ವಿಶ್ವ ರಂಗ ಪುರಸ್ಕಾರ 2026 ಕಾರ್ಯಕ್ರಮ ಮಾ.26 ರಂದು ನಡೆಯಿತು. ಹಿರಿಯ ರಂಗ ಕಲಾವಿದರಾದ ಶ್ರೀಪತಿ ಮಂಜನಬೈಲು ಬೆಂಗಳೂರು, ಗೀತಾ ಸುರತ್ಕಲ್, ಎಸ್ ನಿತ್ಯಾನಂದ ಪೈ ಕಾರ್ಕಳ, ಅವಿನಾಶ್ ಕಾಮತ್ ಮುಂಬೈ, ರಾಮ್ ಶೆಟ್ಟಿ ಹಾರಾಡಿ ಇವರಿಗೆ ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಪ್ರತಿಯೊಂದು ನಾಟಕವು ಸಮಾಜಕ್ಕೆ ಹೊಸ ಆಲೋಚನೆ ನೀಡುವ ಬೆಳಕಿನ ಕಿರಣವಾಗಿದೆ ಕಲಾವಿದರು ಆ ಪಾತ್ರಕ್ಕೆ ಶಕ್ತಿ ತುಂಬುವ ಮೂಲಕ ಪ್ರೇಕ್ಷಕರಿಗೆ ಹೊಸ ಭರವಸೆ ಮತ್ತು ಸಂದೇಶ ನೀಡುವ ಕಾರ್ಯ ಮಾಡುತ್ತಾರೆ. ಉಡುಪಿ ಜಿಲ್ಲೆಯು ಸಾಂಸ್ಕೃತಿಕ ಮತ್ತು ಸಾಹಿತ್ಯದ ಚಿಂತನೆ ಬೆಸೆಯುವ ಜಿಲ್ಲೆಯಾಗಿದೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಕಳೆದ ಏಳು ವರ್ಷದಿಂದ ಮಾಡುತ್ತಿರುವ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎಂದರು.

ಶಂಕರ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕಿ ಸುಗುಣ ಸುವರ್ಣ, ರಂಗಭೂಮಿಯು ಸಮಾಜವನ್ನು ಸರಿದಾರಿಗೆ ತಲುಪಲು ನೆರವು ನೀಡುತ್ತದೆ. ಕಲಾವಿದರಿಗೆ ಗೌರವ ನೀಡಿದಾಗ ಅವರಿಗೆ ಮತ್ತಷ್ಟು ಸೇವೆ ಮಾಡಲು ಉತ್ಸಾಹ ಸಿಗುತ್ತದೆ ಎಂದರು. ಸರಬರಾಜು ನಿರ್ವಹಣೆ ಪಾವತಿ ಮತ್ತು ಗುರುತಿನ ಪರಿಹಾರಗಳು ಮಣಿಪಾಲ ಉಪಾಧ್ಯಕ್ಷ ನವೀನ್ ಕುಮಾರ್ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ನ ಶಾಖ ವ್ಯವಸ್ಥಾಪಕ ಹಫೀಸ್ ರೆಹಮಾನ್, ಮಲಬಾರ್ ವಿಶ್ವ ರಂಗ ಪುರಸ್ಕಾರ ಸಮಿತಿಯ ಸಂಚಾಲಕ ರಾಜೇಶ್ ಭಟ್ ಪಣಿಯಾಡಿ ಮುಂತಾದವರು ಉಪಸ್ಥಿತರಿದ್ದರು.

ಮಲಬಾರ್ ಗೋಲ್ಡ್ ಸಿಬ್ಬಂದಿ ರಂಗ ನಟ ವಿಘ್ನೇಶ್ ಹಿರಿಯಡಕ ರವರನ್ನು ಗೌರವಿಸಲಾಯಿತು. ಡಾ. ಭಾರ್ಗವಿ ಐತಾಳ, ರಂಜನಿ ವಸಂತ್, ವಿದ್ಯಾಸರಸ್ವತಿ, ಪೂರ್ಣಿಮಾ ಜನಾರ್ದನ್, ವಿದ್ಯಾ ಶ್ಯಾಮಸುಂದರ್, ಪರಿಚಯಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಹೆಚ್.ಪಿ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ, ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಸಂಧ್ಯಾ ಶೆಣೈ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆರೋಗ್ಯ ಇಲಾಖೆಗೆ ವಾಹನ ಹಸ್ತಾಂತರ

ಉಡುಪಿ, ಏ.29: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ...

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ

ಕಾಪು, ಏ.29: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಿಂದ ಪಡುಬಿದ್ರಿ ಶ್ರೀ...

ತ್ರಾಸಿ: ಲಾರಿಗೆ ಬಸ್ ಡಿಕ್ಕಿ-ಮೂರು ಮಂದಿ ಸಾವು

ತ್ರಾಸಿ, ಏ.29: ಪ್ರವಾಸಕ್ಕೆ ಹೊರಟಿದ್ದ ಬಸ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ...
error: Content is protected !!