Friday, July 24, 2026
Friday, July 24, 2026

ಆಕೃತಿ ಸಾಂಸ್ಕೃತಿಕ ಉತ್ಸವ: ನಿಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ

ಆಕೃತಿ ಸಾಂಸ್ಕೃತಿಕ ಉತ್ಸವ: ನಿಟ್ಟೆ ವಿದ್ಯಾರ್ಥಿಗಳಿಗೆ ಬಹುಮಾನ

Date:

ಕಾರ್ಕಳ, ಮಾ.23: ಕೆನರಾ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಕಳೆದ ವಾರ ನಡೆದ ಇಂಟರ್ ಕಾಲೇಜಿಯೇಟ್ ಸಾಂಸ್ಕೃತಿಕ ಉತ್ಸವ ಆಕೃತಿ 2026 ರಲ್ಲಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ರಚನಾ ಮತ್ತು ಕಲಾಂಜಲಿ ಕ್ಲಬ್ ಗಳ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳನ್ನು ಪಡೆದರು. ರಚನಾ ಕ್ಲಬ್ ನ ಎಂ.ಸಿಂಚನ ಸುಭಾಸ್ ಅವರು ಲೈವ್ ಆರ್ಟ್ ಸ್ಪರ್ಧೆ ಮತ್ತು ಫೇಸ್ ಪೇಂಟಿಂಗ್ ಎರಡರಲ್ಲೂ ಪ್ರಥಮ ಸ್ಥಾನ ಪಡೆದರು. ರಂಗ್ ರಿಲೇ ತಂಡ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸುವ ಮೂಲಕ ರಚನಾ ಕ್ಲಬ್ ತಂಡವು ಸಂಸ್ಥೆಯ ಸಾಧನೆಗೆ ಮತ್ತಷ್ಟು ಕೊಡುಗೆ ನೀಡಿದೆ. ವಿಜೇತ ತಂಡವು ಎಂ. ಸಿಂಚನಾ ಸುಭಾಸ್, ಸೃಜನ್ ಮೂಲ್ಯ ಮತ್ತು ಆಯುಷ್ ಕುಲಾಲ್ ಅವರನ್ನು ಒಳಗೊಂಡಿತ್ತು. ಪರ್ಫಾಮಿಂಗ್ ಆರ್ಟ್ಸ್ ವಿಭಾಗದಲ್ಲಿ, ಕಲಾಂಜಲಿ ಕ್ಲಬ್ ನ ಟೀಮ್ ಟಿಪ್ಟೋ “ನೃತ್ಯ ನಿರ್ವಾಣ” ಎಂಬ ಶೀರ್ಷಿಕೆಯ ತಂಡನೃತ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿತು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!