Sunday, September 13, 2026
Sunday, September 13, 2026

ನಾವು ಮತ್ತೊಮ್ಮೆ ಮಕ್ಕಳಾಗಬೇಕು: ಜೀವನರಾಂ ಸುಳ್ಯ

ನಾವು ಮತ್ತೊಮ್ಮೆ ಮಕ್ಕಳಾಗಬೇಕು: ಜೀವನರಾಂ ಸುಳ್ಯ

Date:

ಉಡುಪಿ, ಮಾ.೨೩: ಬದುಕಿನ ಸಾರ್ಥಕತೆಯನ್ನು ಗಳಿಸಲು ನಾವೆಲ್ಲ ಮತ್ತೊಮ್ಮೆ ಮಕ್ಕಳಾಗಬೇಕು ಎಂದು ಖ್ಯಾತ ರಂಗ ನಿರ್ದೇಶಕ ಜೀವನರಾಂ ಸುಳ್ಯ ಹೇಳಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಅವಿನಾಶ್ ಕಾಮತ್ ಇವರ ನೇತೃತ್ವದಲ್ಲಿ ಕೂತು ಮಾತಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ನಮ್ಮ ಋಣಾತ್ಮಕ ಅಂಶಗಳನ್ನು ಮತ್ತೊಬ್ಬರಿಗೆ ತಿಳಿಸದೆ, ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಪರಿಪಾಠ ಬೆಳೆಯಬೇಕು ಎಂದರು. ಅವರ ಬದುಕಿನ ರೋಚಕ ಕಥೆಗಳನ್ನು ವಿವರಿಸುತ್ತಾ ಅವರ ಸಾಧನೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು.

ಉಡುಪಿಯ ಶಾರದಾ ಮಂಟಪ ರಸ್ತೆಯ ರಂಗವಲ್ಲಿ ಮನೆಯ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಿತು. ಬದುಕಿನಲ್ಲಿ ನಡೆದ ಹಲವು ಘಟನೆಗಳು, ಕಷ್ಟದಿಂದ ಮೇಲೆದ್ದು ಬಂದ ರೋಚಕ ಕಥೆಗಳು ಸಭಿಕರಿಗೆ ಭಾವನಾತ್ಮಕವಾಗಿ ಕಥೆಗಳ ಮೂಲಕ ವಿವರಿಸಿದರು. ನಿರೂಪಕ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜೀವನ್ ರಾಮ್ ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು.

ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ಸ್ವಾಗತಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ವಿಶ್ವನಾಥ್ ಶೆಣೈ, ಅಧ್ಯಕ್ಷರಾದ ಪ್ರೊ. ಶಂಕರ್, ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕಸಾಪ ಉಡುಪಿ ತಾಲೂಕಿನ ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಂಧ್ಯಾ ಶೆಣೈ, ಶಿಲ್ಪಾ ಜೋಶಿ ರಾಘವೇಂದ್ರ ಪ್ರಭು ಕರ್ವಾಲು, ಸಿದ್ದಬಸಯ್ಯ ಸ್ವಾಮಿ ಚಿಕ್ಕ ಮಠ ಮುಂತಾದವರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮೂರೂರು-ಹಿರ್ಗಾನ: 3 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ; ಭಕ್ತರಿಂದ ರಜತ ಕಿರೀಟ ಹಾಗೂ ತ್ರಿಶೂಲ ಸಮರ್ಪಣೆ

ಹಿರ್ಗಾನ, ಸೆ.12: ಶ್ರೀ ಮಹಾಗಣಪತಿ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಇಲ್ಲಿನ...

ಸೆ. 16: ಡಿ ಮಾರ್ಟ್ ನಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ಉಡುಪಿ, ಸೆ.11: ನಗರದ ಕಲ್ಸಂಕ ಜಂಕ್ಷನ್ ಬಳಿಯ ಭಾರತ್ ಪ್ರೆಸ್ ಎದುರುಗಡೆಯ...

ಉಡುಪಿ ರೆಡ್ ಕ್ರಾಸಿಗೆ ರಾಷ್ಟ್ರೀಯ ಸಮಿತಿ ಸದಸ್ಯರ ಭೇಟಿ

ಉಡುಪಿ, ಸೆ.11: ಭಾರತೀಯ ರೆಡ್ ಕ್ರಾಸ್ ಸೊಸೈಟಿ ನವದೆಹಲಿ ಇಲ್ಲಿನ ಆಡಳಿತ...
error: Content is protected !!