Monday, September 28, 2026
Monday, September 28, 2026

ನಿಟ್ಟೆ: ರಾಷ್ಟ್ರ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಮಹೋತ್ಸವ ‘ಇನ್‌ಕ್ರಿಡಿಯಾ-2026’ ಉದ್ಘಾಟನೆ

ನಿಟ್ಟೆ: ರಾಷ್ಟ್ರ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಮಹೋತ್ಸವ ‘ಇನ್‌ಕ್ರಿಡಿಯಾ-2026’ ಉದ್ಘಾಟನೆ

Date:

ಕಾರ್ಕಳ, ಮಾ.6: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರತಿವರ್ಷ ನಡೆಯುವ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಮಹೋತ್ಸವ ‘ಇನ್‌ಕ್ರಿಡಿಯಾ-2026’ನ್ನು ಈ ಬಾರಿ ಮಾರ್ಚ್ ೫ ರಿಂದ ೮ ರವರೆಗೆ ಹಮ್ಮಿಕೊಳ್ಳಲಾಗಿದ್ದು ಈ ಉತ್ಸವವನ್ನು ಮಾ.೫ ರಂದು ಸಂಜೆ ನಿಟ್ಟೆಯ ಬಿಸಿ ಆಳ್ವ ಕ್ರೀಡಾ ಸಂಕೀರ್ಣದ ಸಭಾಂಗಣದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಹಿತೈಷಿ ಉದ್ಯಮಿ ಅಶೋಕ್ ಅಡ್ಯಂತಾಯ ಉದ್ಘಾಟಿಸಿದರು. ಹಿಂದೆ ತಾಂತ್ರಿಕ ಹಬ್ಬವನ್ನು ‘ಟೆಕ್ನಿದರ್ಶನ’ ಮತ್ತು ಸಾಂಸ್ಕೃತಿಕ ಹಬ್ಬವನ್ನು ‘ಆನಂದೋತ್ಸವ’ ಎಂಬಂತೆ ಪ್ರತ್ಯೇಕವಾಗಿ ಆಚರಿಸಲಾಗುತ್ತಿತ್ತು. ದೇಶದ ವಿವಿಧ ತಾಂತ್ರಿಕ ಕಾಲೇಜುಗಳ ವಿದ್ಯಾರ್ಥಿ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ‘ಇನ್‌ಕ್ರಿಡಿಯಾ’ ಎಂಬ ತಾಂತ್ರಿಕ-ಸಾಂಸ್ಕೃತಿಕ ಮಹೋತ್ಸವವನ್ನು ಕಳೆದ ೮ ವರ್ಷದಿಂದ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷದ ಮಹೋತ್ಸವದಲ್ಲಿ ತಾಂತ್ರಿಕ, ಸಾಂಸ್ಕೃತಿಕ ಹಾಗೂ ವಿಶೇಷ ವಿಭಾಗಗಳಲ್ಲಿ ಸೇರಿ ಸುಮಾರು ೪೦ಕ್ಕೂ ಹೆಚ್ಚು ಸ್ಪರ್ಧೆಗಳು ನಡೆಯಲಿವೆ. ರೋಬೋವಾರ್ಸ್‌, ರೋಬೋ ರೇಸ್‌, ಕೋಡ್ ರಿಲೇ, ಎಸ್ಕೇಪ್ ರೂಂ, ಶೆರ್‌ಲಾಕ್-ಡ್‌, ಲಾಜಿಸೈಡ್‌ ಮುಂತಾದ ತಾಂತ್ರಿಕ ಸ್ಪರ್ಧೆಗಳು, ಬ್ಯಾಟಲ್ ಆಫ್ ಬ್ಯಾಂಡ್ಸ್‌, ಕೊಟ್ಯೂರ್‌, ನವರಸ, ಸ್ಟಾಂಪ್ ದಾಟ್‌, ತುಳು ತುಲಿಪು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಣೆಯಾಗಲಿವೆ.

ಇದರ ಜೊತೆಗೆ ಪ್ರದರ್ಶನಗಳು, ಆಟೋ-ಎಕ್ಸ್ಪೋ, ಆಹಾರ ಮಳಿಗೆಗಳು, ವಿಶೇಷ ಕಾರ್ಯಕ್ರಮಗಳು ಮತ್ತು ‘ಪ್ರೋ-ನೈಟ್‌’ ಕಾರ್ಯಕ್ರಮಗಳು ಕೂಡ ಈ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಲಿವೆ. ದೇಶದ ವಿವಿಧ ತಾಂತ್ರಿಕ ಸಂಸ್ಥೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸುರಮಣಿ ಮಹಾಲಕ್ಷ್ಮೀ ಶೆಣೈ ಮತ್ತು ತಂಡದವರಿಂದ ಸಂಗೀತ ರಸಸಂಜೆ ‘ವಿನಯ ನಮನ’ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ತಂಡದ ಕಲಾವಿದರು ನೃತ್ಯರೂಪಕ ‘ದಶಾವತಾರ’ ಪ್ರದರ್ಶನ ನಡೆಸಿದರು.

ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಮಹೋತ್ಸವ ‘ಇನ್‌ಕ್ರಿಡಿಯಾ-2026’ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಇನ್‌ಕ್ರಿಡಿಯಾ ವೆಬ್‌ಸೈಟ್‌ http://www.incridea.in ಅಥವಾ ಅದರ ಸಾಮಾಜಿಕ ಜಾಲತಾಣ ಪುಟಗಳನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಏರಿಸ್ ಬಿಡುಗಡೆ: ಮಾರುತಿ ಡಿಜೈರ್‌ಗೆ ಹೊಸ ಪ್ರತಿಸ್ಪರ್ಧಿಯಾಗಲಿದೆಯೇ ಈ ಕಾರು?

ನವದೆಹಲಿ, ಸೆ.26: ಟಾಟಾ ಮೋಟಾರ್ಸ್ ಭಾರತದಲ್ಲಿ 'ಏರಿಸ್' ಅನ್ನು ರೂ. 5.29...

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಪ್ರಯತ್ನಕ್ಕೆ ಪೋರ್ಚುಗಲ್ ಮತ್ತು ಮಾರಿಷಸ್ ಬೆಂಬಲ

ನವದೆಹಲಿ, ಸೆ.26: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯುವ ಭಾರತದ...

ಏಷ್ಯನ್ ಗೇಮ್ಸ್‌ ಕಬಡ್ಡಿ: ಭಾರತಕ್ಕೆ ಅವಳಿ ಚಿನ್ನ

ಯು.ಬಿ.ಎನ್.ಡಿ., ಸೆ.26: ಜಪಾನ್‌ನಲ್ಲಿ ನಡೆಯುತ್ತಿರುವ ಐಚಿ-ನಗೋಯಾ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ...

ಎಸ್.ಐ.ಆರ್ ಆದೇಶ ಸರ್ವಾನುಮತದಿಂದ ಅನುಮೋದನೆ: ಚುನಾವಣಾ ಆಯೋಗ

ನವದೆಹಲಿ, ಸೆ.26: ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್.ಐ.ಆರ್ ಆದೇಶ...
error: Content is protected !!