Wednesday, October 7, 2026
Wednesday, October 7, 2026

ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ: ಪದಪ್ರಧಾನ ಸಮಾರಂಭ

ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ: ಪದಪ್ರಧಾನ ಸಮಾರಂಭ

Date:

ಬ್ರಹ್ಮಾವರ, ಫೆ.28: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಬ್ರಹ್ಮಾವರ ಸಿಟಿ ಸೆಂಟರ್ ಸಿಂಧೂರ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ್ ಹುಬ್ಬಳ್ಳಿ, ಜಯಂಟ್ಸ್ ಸಂಸ್ಥೆಯು ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಅತ್ಯುತ್ತಮವಾಗಿ ಸೇವೆ ನೀಡುತ್ತಿರುವುದು ಅಭಿನಂದನೀಯ ಎಂದರು. ಕರ್ನಾಟಕ ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ್ ಜತ್ತನ್ ಶುಭ ಹಾರೈಸಿದರು. ಜೆಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬೈ ಸೆಂಟ್ರಲ್ ಕಮಿಟಿ ಮೆಂಬರ್ ದಿನಕರ್ ಕೆ ಅಮೀನ್ ಮಾತನಾಡಿ, ಬ್ರಹ್ಮಾವರ ಜಯಂಟ್ಸ್ ಸಂಸ್ಥೆಯು ಪರಿಸರ ಕಾಳಜಿ ಮತ್ತು ನಿರಂತರ ವೈದ್ಯಕೀಯ ತಪಾಸಣಾ ಶಿಬಿರಗಳ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಇತ್ತೀಚಿಗೆ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸಂಸ್ಥೆಗೆ ಹಲವಾರು ಪ್ರಶಸ್ತಿಗಳು ಬಂದಿವೆ ಎಂದರು.

ವೇದಿಕೆಯಲ್ಲಿ ಫೆಡರೇಶನ್ ಮಾಜಿ ಅಧ್ಯಕ್ಷರಾದ ತೇಜೇಶ್ವರ್ ರಾವ್ , ಮಧುಸೂಧನ್ ಹೇರೂರು ಉಪಸ್ಥಿತರಿದ್ದರು. ಯೂನಿಟ್ ಡೈರೆಕ್ಟರ್ ಸುಂದರ ಪೂಜಾರಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಅಣ್ಣಯ್ಯ ದಾಸ್ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಲಾಯಿತು ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಪ್ರತಿಭಾ ರವರ ಹುಟ್ಟುಹಬ್ಬ ಅದೇ ರೀತಿ ಪೂರ್ವ ಅಧ್ಯಕ್ಷ ವಿವೇಕಾನಂದ ಕಾಮತ್ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಸಂಭ್ರಮ ನಡೆಯಿತು. ಸಂಸ್ಥೆ ಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಗ್ರಹ ಪತ್ರಿಕೆ ವನಸುಮ ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ಮೀಲ್ಟನ್ ಒಲಿವರ್ ವಂದಿಸಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿದರು. ನೂತನ ಪದಾಧಿಕಾರಿಗಳಾಗಿ ಸುಂದರ ಪೂಜಾರಿ, ಮಿಲ್ಟನ್ ಒಲಿವೇರಾ, ಶ್ರೀನಾಥ್ ಕೋಟ, ಪ್ರತಿಭಾ ಪೂಜಾರಿ, ರೋನಾಲ್ಡ್ ಡಯಾಸ್ ಆಯ್ಕೆಯಾದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ್ಯೂಟ್ರಿನೋ ಸಂಶೋಧನೆಗಾಗಿ ಬೆಲ್ಜಿಯಂ ಮೂಲದ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ಗೆ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ಯು.ಬಿ.ಎನ್.ಡಿ., ಅ.6: ಬೆಲ್ಜಿಯಂ ಮೂಲದ ವಿಜ್ಞಾನಿ ಫ್ರಾನ್ಸಿಸ್ ಹಾಲ್ಜೆನ್ ಐಸ್ಕ್ಯೂಬ್ ನ್ಯೂಟ್ರಿನೋ...

ನೌಕಾಪಡೆಗಾಗಿ ಬ್ರಹ್ಮೋಸ್ ಏರೋಸ್ಪೇಸ್ ಜೊತೆ ರಕ್ಷಣಾ ಸಚಿವಾಲಯ ರೂ.660 ಕೋಟಿ ಒಪ್ಪಂದಕ್ಕೆ ಸಹಿ

ನವದೆಹಲಿ, ಅ.6: ಭಾರತೀಯ ನೌಕಾಪಡೆಯ ಹಡಗುಗಳಿಗೆ ಬ್ರಹ್ಮೋಸ್ ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆ...

ಕಸಾಪ ಉಡುಪಿ ತಾಲೂಕು: ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಉಡುಪಿ, ಅ.6: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ...

ಅಂಗನವಾಡಿ ಶಿಕ್ಷಕರಿಗೂ ಸರ್ಕಾರಿ ಉದ್ಯೋಗದ ಸೌಲಭ್ಯ ಸಿಗಲಿ: ಯಶ್ಪಾಲ್ ಸುವರ್ಣ

ಉಡುಪಿ, ಅ.6: ಪ್ರಧಾನಿ ನರೇಂದ್ರ ಮೋದಿಯವರ ನಿರಂತರ 25 ವರ್ಷಗಳ ರಾಷ್ಟ್ರ...
error: Content is protected !!