Sunday, April 19, 2026
Sunday, April 19, 2026

ಹಿರಿಯಡಕ ಕಾಲೇಜು: ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಹಿರಿಯಡಕ ಕಾಲೇಜು: ಎನ್‌.ಎಸ್‌.ಎಸ್‌ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Date:

ಪರ್ಕಳ, ಫೆ.17: ಅಹಂಕಾರ ಕರಗಿ ‘ನಾವು’ ಎಂಬ ಭಾವನೆ ಬೆಳೆಸಿ, ಎಲ್ಲಾ ಬೇಧ ಮರೆತು ಸ್ನೇಹ-ಬಂಧುತ್ವದ ಜೀವನವನ್ನು ಎನ್‌.ಎಸ್‌.ಎಸ್ ಮೂಲಕ ವಿದ್ಯಾರ್ಥಿಗಳು ಕಲಿಯಬೇಕೆಂದು ಲಯನ್ಸ್ ಕ್ಯಾಬಿನೆಟ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಅವರು ಎನ್‌.ಎಸ್‌.ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌.ಎಸ್‌.ಎಸ್ ಘಟಕದ ವಾರ್ಷಿಕ ವಿಶೇಷ  ಶಿಬಿರವು ದಿನಾಂಕ 16-02-2026 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 80ನೇ ಬಡಗಬೆಟ್ಟು, ಪರ್ಕಳ ಇಲ್ಲಿ ಉದ್ಘಾಟನೆಗೊಂಡಿತು. ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ ಶೆಟ್ಟಿ ಹೆಚ್‌ ಅಧ್ಯಕ್ಷತೆ ವಹಿಸಿ ಗಾಂಧೀಜಿಯ ರಾಷ್ಟ್ರನಿರ್ಮಾಣದ ಕನಸಿಗೆ ಎನ್‌.ಎಸ್‌.ಎಸ್ ಪೂರಕ ವ್ಯವಸ್ಥೆ ಎಂದು ಸ್ಮರಿಸಿದರು.

ಹೆಬ್ರಿ ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ರಘುವೀರ ಶೆಟ್ಟಿ ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯರು, ಎಸ್‌.ಡಿ.ಎಂ.ಸಿ. ಅಧ್ಯಕ್ಷರು ಮತ್ತು 80ನೇ ಬಡಗಬೆಟ್ಟು ಗ್ರಾಮ ಪಂಚಾಯತಿ ಪ್ರತಿನಿಧಿಗಳು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಶಿಬಿರವು 22-02-2026 ರವರೆಗೆ ನಡೆಯಲಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾರ್ವಜನಿಕರು ಭೂ- ಅಗೆತ ಕಾಮಗಾರಿ ಕೈಗೊಳ್ಳದಂತೆ ಮೆಸ್ಕಾಂನಿಂದ ಸೂಚನೆ

ಉಡುಪಿ, ಏ.18: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಹಾಲಿ ಇರುವ 33 ಕೆ.ವಿ...

ಉಡುಪಿ ಜ್ಞಾನಸುಧಾ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ, ಏ.18: ಪ್ರಥಮ ಪಿ.ಯು.ಸಿಯಲ್ಲಿ ೧೦೦ಶೇಕಡಾ ಫಲಿತಾಂಶವನ್ನು ನೀಡಿಕೊಂಡು ದ್ವಿತೀಯ ಪಿ.ಯು.ಸಿಯಲ್ಲಿ...

ತ್ರಾಸಿ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮ

ಕುಂದಾಪುರ, ಏ.18: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಸಮಾಜಕ್ಕೆ ಉಪಯುಕ್ತವಾಗುವಂತಹ ಪ್ರಾಜೆಕ್ಟ್ ಗಳನ್ನು ಮಾಡಬೇಕು: ವಿದ್ಯಾರ್ಥಿಗಳಿಗೆ ಡಾ. ಕೃಷ್ಣಮೂರ್ತಿ ಮಕ್ಕಿತ್ತಾಯ ಕರೆ

ನಿಟ್ಟೆ, ಏ.18: ವಿದ್ಯಾರ್ಥಿಗಳು ತಮ್ಮ ಜ್ಞಾನವೃದ್ಧಿಗಾಗಿ ಸಮಾಜಕ್ಕೆ ಉಪಯುಕ್ತವಾಗುವಂತಹ ಪ್ರಾಜೆಕ್ಟ್ ಗಳನ್ನು...
error: Content is protected !!