ಕಾಪು, ಫೆ.11: ಕಾಪು ವಿಧಾನಸಭಾ ಕ್ಷೇತ್ರದ ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಓಂತಿಬೆಟ್ಟು ಕೊಡಿಬೆಟ್ಟು ಹಂಗಾರಕಟ್ಟೆ ವರ್ವಾಡಿ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೆರವೇರಿಸಿದರು.
ಕೊಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೀಪ್ ಮಡಿವಾಳ, ಪಂಚಾಯತ್ ಸದಸ್ಯರುಗಳಾದ ಅರುಣ್ ಶೆಟ್ಟಿ, ಆಶಾ, ರಾಮಾ ನಾಯಕ್, ಸದಾನಂದ ಪ್ರಭು, ವಿಜಯ ಲಕ್ಷ್ಮಿ, ಜಯಶ್ರೀ ಹಾಗೂ ಸ್ಥಳೀಯರಾದ ಶ್ರೀಶ ನಾಯಕ್, ಕೃಷ್ಣ ಕುಲಾಲ್, ಹರೀಶ್ಚಂದ್ರ ಆಚಾರ್ಯ, ಮೋಹನ್ ನಾಯಕ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




By
ForthFocus™