ಉಡುಪಿ, ಜ.21: ಮನಸುಮ ವೇದಿಕೆ ಕಟಪಾಡಿ, ಜೆಸಿಐ ಉಡುಪಿ ಸಿಟಿ ಇದರ ವತಿಯಿಂದ ಪರ್ಯಾಯ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಬೆಲ್ಲನೀರು ವಿತರಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆಪ್ತ ಸಹಾಯಕರಾಗಿದ್ದ ಖ್ಯಾತ ಲೇಖಕ ಜಯಪ್ರಕಾಶ್ ರಾವ್ ಉದ್ಘಾಟಿಸಿ ಶುಭ ಹಾರೈಸಿದರು.
ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಜೆಸಿಐ ಉಡುಪಿ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಪೂರ್ವ ಅಧ್ಯಕ್ಷರಾದ ಶಕೀರ್ ಹಾವಂಜೆ’ ಜಗದೀಶ್ ಶೆಟ್ಟಿ ಕೀಳಂಜೆ, ಕಾವ್ಯವಾಣಿ ಕೊಡಗು ವಿನಯ್ ಆಚಾರ್ಯ, ಬಾಸುಮ ಕೊಡಗು, ಹರ್ಷಿತ, ವಾಸುದೇವ , ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರಿದ್ದರು.




By
ForthFocus™