Tuesday, July 28, 2026
Tuesday, July 28, 2026

ಎಂ.ಜಿ.ಎಂ. ಕಾಲೇಜು: ಹಳೆ ವಿದ್ಯಾರ್ಥಿಗಳ ಸಮಾವೇಶ

ಎಂ.ಜಿ.ಎಂ. ಕಾಲೇಜು: ಹಳೆ ವಿದ್ಯಾರ್ಥಿಗಳ ಸಮಾವೇಶ

Date:

ಉಡುಪಿ, ಡಿ.28: ಡಾ.ಮಾಧವ ಪೈಯವರ ಶೈಕ್ಷಣಿಕ ಬ್ಯಾಂಕಿಂಗ್ ಆರೇೂಗ್ಯ ಕ್ಷೇತ್ರಗಳ ಕಾರ್ಯಯೇೂಜನೆಗಳಿಂದು ನಮ್ಮೆಲ್ಲರ ಬದುಕಿಗೆ ವರದಾನವಾಗಿ ಮೂಡಿಬಂದಿದೆ. ನಾವು ಎಷ್ಟೇ ವಿದ್ಯಾವಂತರಾದರೂ ಹೆತ್ತ ತಾಯಿ ಹಾಗೂ ಹುಟ್ಟೂರನ್ನು ಮರೆಯಲೇಬಾರದು ಅನ್ನುವುದು ಡಾ. ಮಾಧವ ಪೈ ಅವರ ಬದುಕಿನ ಸಂದೇಶವೂ ಆಗಿತ್ತು. ಸ್ಥಳೀಯವಾಗಿ ಸಂಶೋಧನೆ ಮತ್ತು ಉದ್ಯೋಗದ ಅವಕಾಶವೂ ಸಾಕಷ್ಟು ನಮ್ಮಲ್ಲಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ತಾವು ಕಲಿತ ವಿದ್ಯಾಸಂಸ್ಥೆಗೆ ಹಳೆ ವಿದ್ಯಾರ್ಥಿಗಳು ಹಲವು ರೀತಿಯಲ್ಲಿ ಪ್ರೇೂತ್ಸಾಹಿಸಲು ಅವಕಾಶವಿದೆ. ಹಳೆ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಿಸುವ ಮೂಲಕ‍ ತಮ್ಮ ಮಾತೃ ಸಂಸ್ಥೆಯ ಜತೆ ಅನ್ಯೇೂನ್ಯ ಸಂಬಂಧ ಬೆಳಸಿಕೊಳ್ಳಬೇಕು ಎಂದು ಚಂಡೀಗಢ ವಿವಿ ಕುಲಪತಿ ಡಾ. ರವಿರಾಜ ಎನ್.ಸೀತಾರಾಮ ಹೇಳಿದರು.

ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಪ್ರೊ. ಎಂ.ಎಲ್.ಸಾಮಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೇೂರಿದರು. ಮಾತನಾಡಿದರು. ಸಭಾಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ವಹಿಸಿದ್ದರು.

ಬೆಂಗಳೂರಿನ ಎಸ್‌ಎಸ್‌ ವಿ ಅಕಾಡೆಮಿಯ ಚೇರ್ಮನ್ ಡಾ. ಸುಧೀರ್ ಪೈ ಕೆ.ಎಲ್., ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಕೆ. ಶ್ರೀಧರ್ ಆರ್.ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಪಿಯು ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿ ದೇವಿ ಉಪಸ್ಥಿತರಿದ್ದರು.

ಎಂಜಿಎಂ ಕಾಲೇಜಿನ ಉಪಪ್ರಾಂಶುಪಾಲ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಎಂ.ವಿಶ್ವನಾಥ ಪೈ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ. ವಿಜಯೇಂದ್ರ ರಾವ್ ವಂದಿಸಿದರು. ಡಾ. ಪೂರ್ಣ ಕಾಮತ್ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನರೇಂದ್ರ ಎಸ್ ಗಂಗೊಳ್ಳಿಗೆ ಕಾವ್ಯಶ್ರೀ ಪ್ರಶಸ್ತಿ

ಗಂಗೊಳ್ಳಿ, ಜು.27: ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನಹಡಗಲಿ ವತಿಯಿಂದ ಕೊಡಲ್ಪಡುವ...

ಕಾಮನ್‌ವೆಲ್ತ್ ಕ್ರೀಡಾಕೂಟ: ಮುಂದುವರಿದ ಭಾರತದ ಪದಕ ಬೇಟೆ

ಯು.ಬಿ.ಎನ್.ಡಿ., ಜು.27: ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್ ಜ್ಞಾನೇಶ್ವರಿ...

ಸಂಸ್ಕೃತ ಪ್ರತಿಭಾ ಪುರಸ್ಕಾರ

ಉಡುಪಿ, ಜು.27: ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಶೀರೂರು...
error: Content is protected !!