Monday, September 7, 2026
Monday, September 7, 2026

ವಿದ್ಯಾನಿಧಿ ಕಲಾ ಶಾಲೆಯ ‘ಕಲೋತ್ಸವ’; ವಿದುಷಿ ಉಮಾಶಂಕರಿಯವರಿಗೆ ‘ಸಂಗೀತ ಕಲೋಪಾಸಕಿ’ ಸನ್ಮಾನ

ವಿದ್ಯಾನಿಧಿ ಕಲಾ ಶಾಲೆಯ ‘ಕಲೋತ್ಸವ’; ವಿದುಷಿ ಉಮಾಶಂಕರಿಯವರಿಗೆ ‘ಸಂಗೀತ ಕಲೋಪಾಸಕಿ’ ಸನ್ಮಾನ

Date:

ಉಡುಪಿ, ಡಿ.14: ವಿದ್ಯಾನಿಧಿ ಸಮಿತಿ (ರಿ) ಆಶ್ರಯದಲ್ಲಿ ಶ್ರೀವಿದ್ಯಾ ಲಲಿತಕಲಾ ಸಂಗೀತ ಶಾಲೆಯ ಕಲೋತ್ಸವ ವಿದ್ಯಾದೇಗುಲದಲ್ಲಿ ಜರುಗಿತು. ಸಂಸ್ಥೆಯ ವೇದ ತರಗತಿಯವರಿಂದ ಗುರುಸಮ್ಮುಖದಲ್ಲಿ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷೆ ವೀಣಾ ಹತ್ವಾರರು ಸಭೆಯನ್ನು ಸ್ವಾಗತಿಸಿ ವಿದ್ಯಾ ಶಾಲೆ ಬೆಳೆದುಬಂದ ದಾರಿಯನ್ನು ವಿವರಿಸಿದರು. ಮುಖ್ಯ ಅತಿಥಿ ವಿದುಷಿ ಉಮಾಶಂಕರಿಯವರನ್ನು ‘ಸಂಗೀತ ಕಲೋಪಾಸಕಿ’ ಎಂಬ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ಅವರು ಸಭೆಯನ್ನು ಉದ್ದೇಶಿಸಿ, ತಮ್ಮ ಹಾಗೂ ಶಾಲೆಯ ಸಂಬಂಧ ನೆನಪಿಸಿ, ಸಾಹಿತ್ಯ, ಸಂಗೀತದ ನಮ್ಮೆಲ್ಲರ ಜೀವನ ಸಾರ್ಥಕ, ಈ ಶಾಲೆಯು ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ವಿದ್ಯಾಸಂಸ್ಥೆಯ ಓರ್ವ ದಾನಿ ಸರೋಜಾ ಹಾಗೂ 9 ಜನ ಗುರುವೃಂದದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಬಾಲಚಂದ್ರ ಭಾಗವತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳೀಧರ ಭಟ್ ವಂದಿಸಿದರು. ತದನಂತರ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ, ವೀಣಾ ವಾದನ, ತಬಲಾವಾದನ, ವಾಯೋಲಿನ್, ಭರತನಾಟ್ಯ ಪ್ರಸ್ತುತಿ ಹಾಗೂ ಚಿತ್ರಕಲಾ ಪ್ರದರ್ಶನ ನೆರೆದವರನ್ನು ರಂಜಿಸಿತು. ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಪ್ರಣವಿ ಸಭಾ ಕಾರ್ಯಕ್ರಮವನ್ನು ಮತ್ತು ಶ್ರೀಪಾದ ಹೆಬ್ಬಾರ್ ಮನೋರಂಜನಾ ಕಾರ್ಯಕ್ರಮವನ್ನು ನಿರೂಪಿಸಿದರು ವಿದ್ಯಾನಿಧಿ ಸಮಿತಿಯ ಗೌರವಾಧ್ಯಕ್ಷ ಮಾಯಗುಂಡಿ ಮಾಧವ ಭಟ್ಟ, ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಜ್ಞಾನದ ಕ್ತತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವರೇ ಶಿಕ್ಷಕರು: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಸೆ.6: ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ವ್ಯಕ್ತಿಯೇ ಶಿಕ್ಷಕ....

ಸೆ. 9: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ಸೆ.6: ನಗರದ ಕಲ್ಸಂಕ ಅಂಬಾಗಿಲು ರಸ್ತೆಯಲ್ಲಿರುವ ಸಾನ್ವಿ ಟ್ರೇರ‍್ಸ್ನಲ್ಲಿ ಸೆಪ್ಟೆಂಬರ್...

ಮಣಿಪಾಲ ಜ್ಞಾನಸುಧಾ: ಶಿಕ್ಷಕರ ದಿನಾಚರಣೆ; ನಿವೃತ್ತ ಶಿಕ್ಷಕರಿಗೆ ಸನ್ಮಾನ

ಮಣಿಪಾಲ, ಸೆ.6: ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ...

ಡಾ. ಪಾರ್ವತಿ ಜಿ. ಐತಾಳರ ಎರಡು ಕೃತಿಗಳ ಲೋಕಾರ್ಪಣೆ

ಕುಂದಾಪುರ, ಸೆ.3: ಸಣ್ಣ ಕಥೆಗಳು ಮನುಷ್ಯನ ಜೀವನದಲ್ಲಿ ಅವನನ್ನು ಗಾಢವಾಗಿ ತಟ್ಟುವ...
error: Content is protected !!