Thursday, July 30, 2026
Thursday, July 30, 2026

ಬೆಳ್ಳಂಬೆಳಗೆ ಕವಿಗೋಷ್ಠಿ

ಬೆಳ್ಳಂಬೆಳಗೆ ಕವಿಗೋಷ್ಠಿ

Date:

ಕೋಟ, ನ.10: ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಉಸಿರು ಕೋಟ ಸಹಕಾರದಲ್ಲಿ ಡಾ. ಶಿವರಾಮ ಕಾರಂತ ಜನ್ಮದಿನೋತ್ಸವ ಮತ್ತು ರಾಜ್ಯೋತ್ಸವದ ಅಂಗವಾಗಿ ಬೆಳ್ಳಂಬೆಳಗೆ ಕವಿಗೋಷ್ಠಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಾಂಸ್ಕೃತಿಕ ಚಿಂತಕರಾದ ಡಾ| ಬಾಲಕೃಷ್ಣ ಶೆಟ್ಟಿ, ಒಬ್ಬ ಕವಿಯಾದವನು ಗುಣಗ್ರಾಹಿಯಾಗಿರಬೇಕು ತನ್ನ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿರಬೇಕು. ಜೊತೆಗೆ ಇತರ ಕವಿಗಳ ಕವಿತೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಒಂದು ಪರಿಪಕ್ವವಾದಂತಹ ಕೃತಿ ಮೂಡಬಲ್ಲದು. ಆ ದಿಸೆಯಲ್ಲಿ ಎಲ್ಲ ಕವಿಗಳು ಜಾಗೃತರಾಗಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ ಕುಂದರ್ ಬಾರಿಕೆರೆಯವರು ಇದೊಂದು ಅಪೂರ್ವವಾದ ಕಾರ್ಯಕ್ರಮ ಬೆಳಿಗ್ಗೆ 6 ಗಂಟೆಗೆ ಕವಿಗೋಷ್ಠಿ ನಡೆಯುತ್ತಿರುವುದು ಇದೇ ಮೊದಲ ಬಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಚೇಂಪಿ ದಿನೇಶ್ ಆಚಾರ್ಯ, ರವೀಂದ್ರ ಶೆಟ್ಟಿ ಕಾರ್ಯಕ್ರಮ ಸಂಘಟಿಸಿದರು.

ಕವಿಗಳಾದ ಅಲ್ತಾರು ನಾಗರಾಜ್, ಅಶೋಕ್ ತೆಕ್ಕಟ್ಟೆ, ಲಿಖಿತ ಶೆಟ್ಟಿ ಬೂದಾಡಿ, ಮಂಜುನಾಥ ಗುಂಡ್ಮಿ, ಮಂಜುನಾಥ ಮರವಂತೆ, ಮಂಜುನಾಥ ಕಾರ್ತಟ್ಟು, ವಾಣಿಶ್ರೀ ಅಶೋಕ ಐತಾಳ್, ನಾಗೇಂದ್ರ ಆಚಾರ್ ಚಿತ್ರಪಾಡಿ, ರವಿಕಿರಣ್ ಕೋಟ, ಆಶಾ ನೇರಳಕಟ್ಟೆ, ಕೆ. ಜಿ. ಸೂರ್ಯನಾರಾಯಣ ಚಿತ್ರಪಾಡಿ, ಕುಸುಮಾವತಿ ಸಿ. ಶೆಟ್ಟಿ ನೇರಳಕಟ್ಟೆ, ಸುಪ್ರೀತಾ ಪುರಾಣಿಕ್, ತನುಜಾ ಎನ್. ಕೋಟೇಶ್ವರ, ಕಾ. ಶ್ರೀ. ಶಾಂಭವಿ ರಂಜಿತ್ ಕಮಲಶಿಲೆ, ಮೊದಲಾದವರು ತಮ್ಮ ಕವನವನ್ನು ವಾಚಿಸಿದರು. ಕಾರ್ಯಕ್ರಮಕ್ಕೆ ರವೀಂದ್ರ ಶೆಟ್ಟಿ ಮತ್ತು ಅನಂತಕೃಷ್ಣ ಐತಾಳ್ ಸಹಕರಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ, ಜು.29: ಲೋಕಸಭೆ ಬುಧವಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ)...

ಶಾಸಕ ಯಶ್ಪಾಲ್ ಸುವರ್ಣ ಅವರಿಗೆ ನೋಟೀಸ್

ಉಡುಪಿ, ಜು.29: ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್ಪಾಲ್ ಸುವರ್ಣ ಅವರು...

ಹಡಪದ ಅಪ್ಪಣ್ಣ ರವರ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ: ಮಂಜುನಾಥ ಪೂಜಾರಿ

ಉಡುಪಿ, ಜು.29: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ...

ಚಾತುರ್ಮಾಸ ಸಾಧನೆಗೆ ಶ್ರೇಷ್ಠ ಕಾಲ: ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು

ಬಾರಕೂರು, ಜು.೨೯: ಶ್ರಾವಣದಿಂದ ಕಾರ್ತಿಕ ಮಾಸದವರೆಗಿನ ನಾಲ್ಕು ತಿಂಗಳ ಕಾಲ ಭಗವಂತ...
error: Content is protected !!